ಚಿಕ್ಕಮಗಳೂರು: ಕೋಟಿ ರೂ., ಕೆಜಿ ಚಿನ್ನ, ಫಾರ್ಚುನರ್ ಕಾರು ಕೊಟ್ಟರೂ ಸಾಕಾಗಿಲ್ಲ; ಕೈ ಮಾಜಿ ಸಚಿವನ ಪುತ್ರನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ

| Updated By: ವಿವೇಕ ಬಿರಾದಾರ

Updated on: Sep 01, 2023 | 8:48 AM

ಕಾಂಗ್ರೆಸ್ ಮಾಜಿ ಸಚಿವ ಮಾಜಿ ಸಚಿವ ಸಗೀರ್ ಅಹಮದ್ ಪುತ್ರನ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಕೇಳಿಬಂದಿದೆ. ವರದಕ್ಷಿಣೆ ಸಂಬಂಧ ಸಗೀರ್ ಅಹಮದ್ ಪುತ್ರ ಅತೀ ಉರ್ ರಹಮಾನ್ ಪತ್ನಿ ಶಿಂಷಿಯಾ ಸಹರ್​ ಅವರಿಗೆ ಕಿರುಕುಳ ನೀಡಿ, ಹಲ್ಲೆ ಮಾಡಿರುವ ಆರೋಪವಿದೆ.

ಚಿಕ್ಕಮಗಳೂರು: ಕೋಟಿ ರೂ., ಕೆಜಿ ಚಿನ್ನ, ಫಾರ್ಚುನರ್ ಕಾರು ಕೊಟ್ಟರೂ ಸಾಕಾಗಿಲ್ಲ; ಕೈ ಮಾಜಿ ಸಚಿವನ ಪುತ್ರನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ
ಹಲ್ಲೆಗೊಳಗಾದ ಶಿಂಷಿಯಾ ಸಹರ್
Follow us on

ಚಿಕ್ಕಮಗಳೂರು: ವರದಕ್ಷಿಣೆ (Dowry) ಕಿರುಕುಳ ಶಿಕ್ಷಾರ್ಹ ಅಪರಾಧವಾಗಿದೆ. ವರದಕ್ಷಿಣೆ ಸಂಬಂಧ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಮಹಿಳೆಯರ ರಕ್ಷಣೆಗೆ ನಾವಿದ್ದೇವೆ ಎಂದು ಪುಂಕಾನು ಪುಂಕವಾಗಿ ಭಾಷಣ ಮಾಡುವ ನಾಯಕರೇ ವರದಕ್ಷಿಣೆ ಸಂಬಂಧ ಕಿರುಕುಳ ನೀಡಿದರೇ ಹೇಳುವುದು ಒಂದು ಮಾಡುವುದು ಮತ್ತೊಂದು ಎಂಬಂತಾಗುತ್ತದೆ. ಇದೇರೀತಿ ಕಾಂಗ್ರೆಸ್ (Congress) ಮಾಜಿ ಸಚಿವ ಮಾಜಿ ಸಚಿವ ಸಗೀರ್ ಅಹಮದ್ ಪುತ್ರನ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಕೇಳಿಬಂದಿದೆ. ವರದಕ್ಷಿಣೆ ಸಂಬಂಧ ಸಗೀರ್ ಅಹಮದ್ ಪುತ್ರ ಅತೀ ಉರ್ ರಹಮಾನ್ ಪತ್ನಿ ಶಿಂಷಿಯಾ ಸಹರ್​ ಅವರಿಗೆ ಕಿರುಕುಳ ನೀಡಿ, ಹಲ್ಲೆ ಮಾಡಿರುವ ಆರೋಪವಿದೆ. ಶಿಂಷಿಯಾ ಸಹರ್​ ಅವರ ಕಾಲು ಮತ್ತು ಕೈಗೆ ಗಂಭೀರವಾಗಿ ಗಾಯವಾಗಿದ್ದು, ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಮಗಳೂರು (Chikkamagaluru) ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಏಳು ವರ್ಷಗಳ ಹಿಂದೆ ಉರ್ ರಹಮಾನ್ ಮತ್ತು ಶಿಂಷಿಯಾ ಸಹರ್ ಮದುವೆಯಾಗಿತ್ತು. ಮದುವೆ ಸಮಯದಲ್ಲಿ ಶಿಂಷಿಯಾ ಸಹರ್ ತವರು ಮನೆಯವರು ಕೋಟಿ ರೂಪಾಯಿ ವರದಕ್ಷಿಣೆ, ಕೆಜಿ ಚಿನ್ನ ಮತ್ತು ಫಾರ್ಚುನರ್ ಕಾರ್ ನೀಡಿದ್ದರು. ಇಷ್ಟಾದರೂ ಉರ್ ರಹಮಾನ್​​ಗೆ ಹಣ ದಾಹ ತೀರದೆ ತವರು ಮನೆಯಿಂದ ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಆರಂಭಿಸಿದ್ದಾನೆ.

ಇದನ್ನೂ ಓದಿ: ವ್ಯಸನಕ್ಕೆ ದಾಸನಾಗಿ ಸಾಲದ ಸುಳಿಯಲ್ಲಿ ಸಿಲುಕಿದ ವೈದ್ಯ: ಹೆಚ್ಚು ಹೆಚ್ಚು ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ

ಇನ್ನು ಪತಿ ಉರ್ ರಹಮಾನ್​​ನಿಂದ ಹಲ್ಲೆಗೊಳಗಾದ ಶಿಂಷಿಯಾ ಸಹರ್ ಅವರನ್ನು ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ ಶಿಂಷಿಯಾ ಸಹರ್ ವಿರುದ್ಧ ಡ್ರಗ್ ಅಡಿಕ್ಟ್ ಎಂದು ಆರೋಪ ಮಾಡಿ ದೂರು ದಾಖಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ