AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಸನಕ್ಕೆ ದಾಸನಾಗಿ ಸಾಲದ ಸುಳಿಯಲ್ಲಿ ಸಿಲುಕಿದ ವೈದ್ಯ: ಹೆಚ್ಚು ಹೆಚ್ಚು ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ, ಕೊನೆಗೆ…

ವಿಶಾಖಪಟ್ಟಣ ಮಧುರವಾಡ, ಮಿಥಿಲಾಪುರಿ ವುಡಾ ಕಾಲೋನಿಯಲ್ಲಿ ಡಾ.ಸಾಯಿ ಸುಧೀರ್ ಮತ್ತು ಸತ್ಯವಾಣಿ ದಂಪತಿ ಪುತ್ರನೊಂದಿಗೆ ವಾಸವಾಗಿದ್ದಾರೆ. ಸತ್ಯವಾಣಿ 2009 ರಲ್ಲಿ ಡಾ. ಸಾಯಿ ಸುಧೀರ್ ಅವರನ್ನು ವಿವಾಹವಾದರು. ಆದರೆ ಇತ್ತೀಚೆಗೆ ಕೆಲ ದಿನಗಳಿಂದ ಕರ್ತವ್ಯಕ್ಕೆ ಹೋಗುತ್ತಿರಲಿಲ್ಲ. ಡಾ.ಸುಧೀರ್ ಜೂಜಾಟದ ಚಟ ಹತ್ತಿಸಿಕೊಂಡು, 70 ಲಕ್ಷ ರೂ.ವರೆಗೆ ಸಾಲ ಮಾಡಿದ್ದ. ಇದು ಆತನ ಪತ್ನಿಗೂ ತಿಳಿದುಬಂತು. ಮುಂದೆ ವೈದ್ಯ ಪತಿಯ ಕಿರುಕುಳ ಹೆಚ್ಚಾಗಿದೆ.

ವ್ಯಸನಕ್ಕೆ ದಾಸನಾಗಿ ಸಾಲದ ಸುಳಿಯಲ್ಲಿ ಸಿಲುಕಿದ ವೈದ್ಯ: ಹೆಚ್ಚು ಹೆಚ್ಚು ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ, ಕೊನೆಗೆ...
ವ್ಯಸನಕ್ಕೆ ದಾಸನಾಗಿ ಸಾಲದ ಸುಳಿಯಲ್ಲಿ ಸಿಲುಕಿದ ವೈದ್ಯ
ಸಾಧು ಶ್ರೀನಾಥ್​
|

Updated on: Aug 25, 2023 | 1:57 PM

Share

ವಿಶಾಖಪಟ್ಟಣ, ಆಗಸ್ಟ್ 25: ಅಪ್ಪ-ಅಮ್ಮ ಮಗಳಿಗೆ ಒಳ್ಳೆಯ ಜೋಡಿ ಬೇಕೆಂದು, ಜೀವನ ಸಂತೋಷವಾಗಿರಲೆಂದು ವೈದ್ಯರಾಗಿರುವ ಅಳಿಯನನ್ನೇ ಹುಡುಕಿದ್ದಾರೆ. ಡಾ. ಬಾಬು ಎಂಬ ವೈದ್ಯನನ್ನು ಮದುವೆಯಾದರೆ ಮಗಳ ಬದುಕು ಸುಸೂತ್ರವಾಗಿ ಸಾಗುತ್ತದೆ ಎಂದುಕೊಂಡರು. ಮಗಳ ಬಾಳು ಚೆನ್ನಾಗಿರಲಿ ಎಂದುಕೊಂಡು ಅಪಾರ ವರದಕ್ಷಿಣೆ ಕಾಣಿಕೆ ನೀಡಿ ಮದುವೆ ಮಾಡಿದರು. ಆ ನಂತರ ಆ ದಂಪತಿಗೆ ಒಬ್ಬ ಮಗನೂ ಹುಟ್ಟಿದ. ಕೆಲ ವರ್ಷಗಳ ಕಾಲ ಸುಸೂತ್ರವಾಗಿ ಸಾಗಿದ ಇವರ ಸಂಸಾರದಲ್ಲಿ ಸಾಲದ ಜಗಳ ಶುರುವಾಯಿತು. ವೈದ್ಯ ಮಹಾಶಯ ಜೂಜಿನ ಚಟ ಅಂಟಿಸಿಕೊಂಡ. ವೈದ್ಯ ವೃತ್ತಿಯಲ್ಲಿರುವಾಗಲೇ ವ್ಯಸನಕ್ಕೆ ದಾಸರಾಗಿ ಸಾಲದ ಸುಳಿಯಲ್ಲಿ ಮುಳುಗಿದರು. ಸಾಲಗಳು ತಲೆ ಮೀರಿದ ಹೊರೆಯಾಗಿದ್ದರಿಂದ ಹೆಚ್ಚುವರಿ ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಗಂಡ ಬದಲಾಗುತ್ತಾನೆ ಎಂದುಕೊಂಡು ಮದುವೆಯಾದ ಮಹಿಳೆ ನೋವು ಸಹಿಸಿಕೊಂಡಿದ್ದಾಳೆ. ಆದರೆ ಕಿರುಕುಳ ಹೆಚ್ಚಾಗಿದೆ. ವೈದ್ಯ ಗಂಡನ ಕಿರುಕುಳವನ್ನು ಸಹಿಸಿಕೊಳ್ಳಲು ಬಯಸಿದ್ದಳಾದರೂ ಆ ಒಂದು ಕೆಟ್ಟ ಘಳಿಗೆಯಲ್ಲಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಶಾಖಪಟ್ಟಣ ಜಿಲ್ಲೆಯ ಮಧುರವಾಡ ಮೆಡಲಾಪುರಿ ಕಾಲೋನಿಯಲ್ಲಿ ಈ ದಾರುಣ ಘಟನೆ ನಡೆದಿದೆ.

ವಿಶಾಖಪಟ್ಟಣ ಮಧುರವಾಡ, ಮಿಥಿಲಾಪುರಿ ವುಡಾ ಕಾಲೋನಿಯಲ್ಲಿ ಡಾ.ಸಾಯಿ ಸುಧೀರ್ ಮತ್ತು ಸತ್ಯವಾಣಿ ದಂಪತಿ ಪುತ್ರನೊಂದಿಗೆ ವಾಸವಾಗಿದ್ದಾರೆ. ಸತ್ಯವಾಣಿ 2009 ರಲ್ಲಿ ಡಾ. ಸಾಯಿ ಸುಧೀರ್ ಅವರನ್ನು ವಿವಾಹವಾದರು. ಸತ್ಯವಾಣಿ ಅವರ ಹುಟ್ಟೂರು ಶ್ರೀಕಾಕುಳಂ ಜಿಲ್ಲೆಯ ನರಸನ್ನಪೇಟೆ ಎಂಬಲ್ಲಿ ಸಹಾಯಕ ನೆಫ್ರಾಲಜಿಸ್ಟ್ ಡಾ. ಸಾಯಿ ಸುಧೀರ್ ವಿಶಾಖಪಟ್ಟಣಂನ ಎರಡು ಬೇರೆ ಬೇರೆ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಕೆಲ ದಿನಗಳಿಂದ ಕರ್ತವ್ಯಕ್ಕೆ ಹೋಗುತ್ತಿರಲಿಲ್ಲ. ಆಗಾಗ ಪತ್ನಿಯೊಂದಿಗೆ ಜಗಳವಾಡಿ ಕಿರುಕುಳ ನೀಡುತ್ತಿದ್ದ. ಡಾ.ಸುಧೀರ್ ಜೂಜಾಟದ ಚಟ ಹತ್ತಿಸಿಕೊಂಡು, 70 ಲಕ್ಷ ರೂ.ವರೆಗೆ ಸಾಲ ಮಾಡಿದ್ದ. ಇದು ಆತನ ಪತ್ನಿಗೂ ತಿಳಿದುಬಂತು. ಮುಂದೆ ವೈದ್ಯ ಪತಿಯ ಕಿರುಕುಳ ಹೆಚ್ಚಾಗಿದೆ. ಸಾಲ ತೀರಿಸಲು ಸತ್ಯವಾಣಿಗೆ ಹಣಕ್ಕಾಗಿ ನಿತ್ಯ ಕಿರುಕುಳ ನೀಡುತ್ತಿದ್ದ. ಪತಿಯ ಕಿರುಕುಳದಿಂದ ಸತ್ಯವಾಣಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೋಷಕರು ಈಗ ಹೇಳುತ್ತಿದ್ದಾರೆ.

ಇನ್ನು ಪತ್ನಿ ಸತ್ಯವಾಣಿ ಆತ್ಮಹತ್ಯೆ ಮಾಡಿಕೊಂಡ ಬಳಿಕ.. ಡಾ. ಸಾಯಿ ಸುಧೀರ್ ಓಡಿ ಹೋಗಿದ್ದಾರೆ. ಸತ್ಯವಾಣಿ ಪೋಷಕರಿಗೆ ಆತ್ಮಹತ್ಯೆ ವಿಚಾರ ತಿಳಿಸಿ, ತಮ್ಮ ಮಗನನ್ನು ಕರೆದುಕೊಂಡು ವೈದ್ಯ ಸಾಯಿ ಸುಧೀರ್ ಪರಾರಿಯಾಗಿದ್ದಾರೆ.

ಡಾ.ಸಾಯಿ ಸುಧೀರ್ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ.. ಮೃತಳ ತಂದೆ ಅಪ್ಪಲರಾಜು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೈದ್ಯರ ಕಿರುಕುಳದಿಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಆರೋಪಿ ಡಾ.ಸಾಯಿ ಸುಧೀರ್ ನನ್ನು ಪೊಲೀಸರು ಕೊನೆಗೂ ವಶಕ್ಕೆ ಪಡೆದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?