ಎನ್‌ಸಿಪಿ ಬಣಗಳ ನಡುವೆ ಭಿನ್ನಾಭಿಪ್ರಾಯ; ಪಕ್ಷ ಒಡೆದಿಲ್ಲ, ಇದು ಪ್ರಜಾಪ್ರಭುತ್ವ ಎಂದ ಶರದ್ ಪವಾರ್

ಕೆಲವು ಎನ್‌ಸಿಪಿ ನಾಯಕರು ವಿಭಿನ್ನ ರಾಜಕೀಯ ನಿಲುವು ತೆಗೆದುಕೊಳ್ಳಲು ಪಕ್ಷವನ್ನು ತೊರೆದಿದ್ದರೂ, ಇದು ವಿಭಜನೆಯಾಗುವುದಿಲ್ಲ. ಪಕ್ಷದಿಂದ ಬಹುಪಾಲು ಜನರು ಹೊರಗೆ ಹೋಗುತ್ತಿರುವಂತೆ ಇಲ್ಲ. ಕೆಲವರು ವಿಭಿನ್ನ ನಿಲುವು ತಳೆದಿದ್ದಾರೆ, ಪ್ರಜಾಪ್ರಭುತ್ವ ಅವರಿಗೆ ಹಾಗೆ ಮಾಡಲು ಅವಕಾಶ ನೀಡುತ್ತದೆ. ಇದು ಪಕ್ಷದ ಒಡಕು ಅಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ.

ಎನ್‌ಸಿಪಿ ಬಣಗಳ ನಡುವೆ ಭಿನ್ನಾಭಿಪ್ರಾಯ; ಪಕ್ಷ ಒಡೆದಿಲ್ಲ, ಇದು ಪ್ರಜಾಪ್ರಭುತ್ವ ಎಂದ ಶರದ್ ಪವಾರ್
ಶರದ್ ಪವಾರ್
Follow us
ರಶ್ಮಿ ಕಲ್ಲಕಟ್ಟ
|

Updated on:Aug 25, 2023 | 1:20 PM

ಮುಂಬೈ ಆಗಸ್ಟ್ 25: ಬಂಡಾಯ ನಂತರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ನಾಯಕ ಅಜಿತ್ ಪವಾರ್ (Ajit Pawar) ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸುಮಾರು ಎರಡು ತಿಂಗಳ ನಂತರ, ಪಕ್ಷದ ಅಧ್ಯಕ್ ಶರದ್ ಪವಾರ್ (Sharad Pawar) ಇಂದು ಎನ್‌ಸಿಪಿಯಲ್ಲಿನ ಭಿನ್ನಾಭಿಪ್ರಾಯದ ವರದಿಗಳನ್ನು ನಿರಾಕರಿಸಿದ್ದಾರೆ. 63 ವರ್ಷದ ಅಜಿತ್ ಪವಾರ್ ಅವರು ಬಿಜೆಪಿಗೆ ಪಕ್ಷಾಂತರಗೊಳ್ಳುವ ಸಾಧ್ಯತೆಯ ಬಗ್ಗೆ ತಿಂಗಳುಗಳ ಊಹಾಪೋಹಗಳ ನಂತರ ಮಹಾರಾಷ್ಟ್ರದ ಎರಡನೇ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಕೆಲವು ಎನ್‌ಸಿಪಿ ನಾಯಕರು ವಿಭಿನ್ನ ರಾಜಕೀಯ ನಿಲುವು ತೆಗೆದುಕೊಳ್ಳಲು ಪಕ್ಷವನ್ನು ತೊರೆದಿದ್ದರೂ, ಇದು ವಿಭಜನೆಯಾಗುವುದಿಲ್ಲ. ಪಕ್ಷದಿಂದ ಬಹುಪಾಲು ಜನರು ಹೊರಗೆ ಹೋಗುತ್ತಿರುವಂತೆ ಇಲ್ಲ. ಕೆಲವರು ವಿಭಿನ್ನ ನಿಲುವು ತಳೆದಿದ್ದಾರೆ, ಪ್ರಜಾಪ್ರಭುತ್ವ ಅವರಿಗೆ ಹಾಗೆ ಮಾಡಲು ಅವಕಾಶ ನೀಡುತ್ತದೆ. ಇದು ಪಕ್ಷದ ಒಡಕು ಅಲ್ಲ ಎಂದು ಅವರು ಹೇಳಿದ್ದಾರೆ.

ಶರದ್ ಪವಾರ್ ಅವರ ಪುತ್ರಿ ಮತ್ತು ಬಾರಾಮತಿಯಿಂದ ಎನ್‌ಸಿಪಿಯ ಲೋಕಸಭಾ ಸಂಸದೆ ಸುಪ್ರಿಯಾ ಸುಳೆ, ಪಕ್ಷವು ಒಗ್ಗಟ್ಟಾಗಿದೆ. ಬಿಜೆಪಿಯೊಂದಿಗೆ ಯಾವುದೇ ಮೈತ್ರಿ ಇಲ್ಲ ಎಂದು ಹೇಳಿದ್ದಾರೆ. ನಮ್ಮ ಅಧ್ಯಕ್ಷ ಶರದ್ ಪವಾರ್ ಮತ್ತು ನಮ್ಮ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್. ಇದು ಸದ್ಯಕ್ಕೆ ನಮ್ಮ ಪಕ್ಷದ ಸ್ಥಿತಿಯಾಗಿದೆ. ನಾವು ಅದರಲ್ಲಿ ಅಚಲರಾಗಿದ್ದೇ. ನಮ್ಮ ಪಕ್ಷವು ಬಿಜೆಪಿಯೊಂದಿಗೆ ಯಾವುದೇ ರೂಪದಲ್ಲಿ ಮೈತ್ರಿ ಹೊಂದಿಲ್ಲ. ನಮ್ಮ ಕೆಲವರು ವಿಭಿನ್ನ ನಿಲುವು ತಳೆದರು.ಪ್ರಕ್ರಿಯೆಯ ಪ್ರಕಾರ ನಾವು ನಮ್ಮ ಅಭಿಪ್ರಾಯಗಳು ಮತ್ತು ನಿಲುವುಗಳನ್ನು ಸ್ಪೀಕರ್‌ನೊಂದಿಗೆ ಹಂಚಿಕೊಂಡಿದ್ದೇವೆ ಎಂದು ಸುಳೆ ಹೇಳಿದ್ದಾರೆ.

ಈಗ, ಅವರು (ಅಜಿತ್ ಪವಾರ್) ಪಕ್ಷಕ್ಕೆ ವಿರುದ್ಧವಾದ ನಿಲುವನ್ನು ತೆಗೆದುಕೊಂಡಿದ್ದಾರೆ ಮತ್ತು ನಾವು ವಿಧಾನಸಭಾ ಸ್ಪೀಕರ್‌ಗೆ ದೂರು ನೀಡಿದ್ದೇವೆ ಮತ್ತು ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ” ಎಂದು ಅವರು ಹೇಳಿದರು.

ಈ ವಾರದ ಆರಂಭದಲ್ಲಿ, ಶರದ್ ಪವಾರ್ ಅವರು ತಮ್ಮ ಸೋದರಳಿಯ ಅಜಿತ್ ಪವಾರ್ ಅವರನ್ನು ಹೆಸರಿಸದೆ, ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯ (ಇಡಿ) ಮೂಲಕ ತಮ್ಮ ವಿರುದ್ಧ ತನಿಖೆಯನ್ನು ಪ್ರಾರಂಭಿಸಿದ ನಂತರ ಪಕ್ಷದ ಕೆಲವು ಸದಸ್ಯರು ತೊರೆದಿದ್ದಾರೆ ಎಂದು ಹೇಳುವ ಮೂಲಕ ಪಕ್ಷದ ವಿರುದ್ಧ ಬಂಡಾಯವೆದ್ದವರನ್ನು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: ನಾನು ಗ್ಯಾರಂಟಿ ನೀಡುತ್ತಿದ್ದೇನೆ, 2024ರಲ್ಲಿ ಬಿಜೆಪಿಯನ್ನು ಸೋಲಿಸುವುದು ಖಚಿತ: ರಾಹುಲ್ ಗಾಂಧಿ

ಈ ತಿಂಗಳು ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಅವರ ಬಣವು ಶರದ್ ಪವಾರ್ ಅವರನ್ನು ಸ್ವಾಗತಿಸಿ ಮತ್ತು ರಾಜಕೀಯವಾಗಿ ದೂರವಿರುವ ಅವರ ಸೋದರಳಿಯನನ್ನು “ಆಶೀರ್ವದಿಸುವಂತೆ” ವಿನಂತಿಸುವ ಬ್ಯಾನರ್‌ಗಳನ್ನು ಹಾಕಿದೆ.

ಪಾರ್ಲಿಯಲ್ಲಿ ಶರದ್ ಪವಾರ್ ರ ರ್ಯಾಲಿಗೆ ಗಂಟೆಗಳ ಮೊದಲು ಬೀಡ್​​ನಾದ್ಯಂತ ಪವಾರ್‌ಗಳ ಚಿತ್ರಗಳನ್ನು ಹೊಂದಿರುವ ಎನ್‌ಸಿಪಿ ಬ್ಯಾನರ್‌ಗಳನ್ನು ಹಾಕಲಾಗಿತ್ತು. ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣ ಮತ್ತು ಕಾಂಗ್ರೆಸ್ ಮತ್ತು ಶಿವಸೇನಾ (ಯುಬಿಟಿ) ಯನ್ನು ಒಳಗೊಂಡಿರುವ ಮಹಾ ವಿಕಾಸ್ ಅಘಾಡಿ (ಎಂವಿಎ) ಗುಂಪಿನ ಇತರ ಪಕ್ಷಗಳ ನಡುವೆ ರಹಸ್ಯ ಸಭೆ ನಡೆದಿದೆ. ಆಗಸ್ಟ್ 12 ರಂದು ಪುಣೆಯಲ್ಲಿರುವ ಉದ್ಯಮಿ ಅತುಲ್ ಚೋರ್ಡಿಯಾ ಅವರ ನಿವಾಸದಲ್ಲಿ ಇಬ್ಬರು ಪವಾರ್‌ಗಳ ನಡುವೆ ಸಭೆ ನಡೆದಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:20 pm, Fri, 25 August 23