Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲರ್ಜಿ ಎಂದು ಆಸ್ಪತ್ರೆ ಸೇರಿದ ನಾಲ್ಕು ತಿಂಗಳ ಮಗು ಸಾವು; ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರೋಶ

ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ನಾಲ್ಕು ತಿಂಗಳ ಮಗು ದಿಡೀರ್ ಸಾವಿಗೀಡಾಗಿದ್ದು ವೈದ್ಯರು ಹಾಗು ನರ್ಸ್ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಮಗು ಪೋಷಕರು ಆರೋಪಿಸಿದ್ದಾರೆ.

ಅಲರ್ಜಿ ಎಂದು ಆಸ್ಪತ್ರೆ ಸೇರಿದ ನಾಲ್ಕು ತಿಂಗಳ ಮಗು ಸಾವು; ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರೋಶ
ಆಸ್ಪತ್ರೆಯಲ್ಲಿ ಪೋಷಕರ ಆಕ್ರೂಶ
Follow us
TV9 Web
| Updated By: ಆಯೇಷಾ ಬಾನು

Updated on:Dec 29, 2022 | 6:58 AM

ಚಿಕ್ಕಮಗಳೂರು: ಅಲರ್ಜಿ(Allergy) ಎಂದು ಆಸ್ಪತ್ರಗೆ ಬಂದ ನಾಲ್ಕು ತಿಂಗಳ ಕಂದಮ್ಮ ದಿಡೀರ್ ಸಾವನ್ನಪ್ಪಿದ್ದು ವೈದ್ಯರು ಹಾಗು ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ(Doctors Negligence) ಮಗು ಮೃತಪಟ್ಟಿದೆ ಎಂಬ ಆರೋಪ ಕೇಳಿ ಬಂದಿದೆ. ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಸಿಬ್ಬಂದಿ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ನಾಲ್ಕು ವರ್ಷಗಳ ಬಳಿಕ ಹುಟ್ಟಿದ್ದ ವಂಶೋದ್ದಾರಕನ, ಕರುಳ ಬಳ್ಳಿ ಕಳೆದುಕೊಂಡ ಹೆತ್ತವರ ಆಕ್ರೊಶ ಮುಗಿಲು ಮುಟ್ಟಿದೆ.

ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ನಾಲ್ಕು ತಿಂಗಳ ಮಗು ದಿಡೀರ್ ಸಾವಿಗೀಡಾಗಿದ್ದು ವೈದ್ಯರು ಹಾಗು ನರ್ಸ್ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಮಗು ಪೋಷಕರು ಆರೋಪಿಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮರಲೆ ಸಮೀಪದ ಸೂರಾಪುರ ಗ್ರಾಮದ ಮೀನಾಕ್ಷಿ ಮತ್ತು ಗೋಪಾಲ್ ರ ನಾಲ್ಕು ತಿಂಗಳ ಕಂದಮ್ಮನಿಗೆ ಅನಾರೋಗ್ಯ ಹಿನ್ನೆಲೆ ನಿನ್ನೆ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಪರೀಕ್ಷೆ ನಡೆಸಿದ್ದ ಮಕ್ಕಳ ತಜ್ಞರು ಮಗುವಿಗೆ ಅಲರ್ಜಿಯಾಗಿದೆ ಎಂದು ಚಿಕಿತ್ಸೆ ನೀಡಿದ್ದಾರೆ. ನಾಳೆವರೆಗೂ ನೋಡೋಣ ಸಮಸ್ಯೆ ಕಡಿಮೆಯಾಗದಿದ್ದರೆ ಬಳಿಕ ನೀವು ಮಗುವನ್ನ ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕರೆದೊಯ್ಯಿರಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: Koppal Devadasi System: ಅನಾರೋಗ್ಯ ನಿವಾರಣೆಗೆ ಯುವತಿಗೆ ದೇವದಾಸಿ ಪಟ್ಟ; ಮೂವರ ಬಂಧನ

ಮಗು ಎಷ್ಟೇ ಅತ್ತರೂ ಹಠ ಮಾಡಿದ್ರು ಹಾಲು ಕುಡಿಸೋದು ಬೇಡಾ ಎಂದು ಹೇಳಿದ್ದಾರೆ. ಆದ್ರೆ ಮಗು ಅತ್ತುರಚ್ಚೆ ಹಿಡಿದಾಗ ಕರ್ತವ್ಯದಲ್ಲಿದ್ದ ನರ್ಸ್ ಒಬ್ಬರು ಮಗು ತಾಯಿಗೆ ಬೈಯ್ದು ಹಾಲು ಕುಡಿಸಿದ್ದಾರಂತೆ. ಹಾಲು ಕುಡಿದ ಕೆಲವೇ ಕ್ಷಣದಲ್ಲಿ ಮಗು ತೀವ್ರ ಅಸ್ವಸ್ಥಗೊಂಡಿದೆ. ಕೂಡಲೆ ತುರ್ತು ನಿಗಾಘಟಕಕ್ಕೆ ಸ್ಥಳಾಂತರ ಮಾಡಿದ್ರು ಪ್ರಯೋಜನವಾಗದೆ ಮಗು ಮೃತಪಟ್ಟಿದೆ. ವಿಚಾರ ತಿಳಿದ ಪೋಷಕರು ಐಸಿಯು ಒಳಗೇ ನುಗ್ಗಿ ತಮ್ಮ ಆಕ್ರೋಶ ಹೊರ ಹಾಕಿದ್ರು. ಮಗುವನ್ನ ನಿರ್ಲಕ್ಷ್ಯದಿಂದ ನೀವೇ ಕೊಂದಿದ್ದೀರಿ ಎಂದು ಅಸಮಧಾನ ಹೊರ ಹಾಕಿದ್ರು, ಕೂಡಲೆ ಮಗು ಸಾವಿಗೆ ಕಾರಣರಾದವರನ್ನ ಕರೆಸಿ ನಮಗೆ ನ್ಯಾಯ ಕೊಡಿಸಿ ಎಂದು ಆಗ್ರಹಿಸಿದ್ರು.

chm baby death

ಆರು ವರ್ಷಗಳ ಹಿಂದೆ ಮದುವೆಯಾಗಿದ್ದ ಮೀನಾಕ್ಷಿ ಗೋಪಾಲ್ ದಂಪತಿಗೆ ಆರತಿಗೊಬ್ಬಳು ನಾಲ್ಕು ವರ್ಷದ ಮಗಳಿದ್ದಾಳೆ, ಕೀರ್ತಿಗೊಬ್ಬ ಮಗ ಇರಲಿ ಎನ್ನೋ ನಿರೀಕ್ಷೆಯಲ್ಲಿದ್ದ ದಂಪತಿಗೆ ನಾಲ್ಕು ವರ್ಷಗಳ ಬಳಿಕ ವಂಶೋದ್ದಾರಕ ಹುಟ್ಟಿದ್ದಾಗ ತಮ್ಮ ಕನಸಿನಂತೆ ಆಯ್ತಲ್ಲಾ ಎಂದು ಸಂಭ್ರಮ ಪಟ್ಟಿದ್ರು. ಮಗು ಮನೆಯಲ್ಲಿರುವಾಗ ನಿನ್ನೆ ದಿಡೀರನೆ ಹಠ ಹಿಡಿದು ಅಳೋಕೆ ಶುರುಮಾಡಿದೆ. ಕೂಡಲೆ ಜಿಲ್ಲಾ ಆಸ್ಪತ್ರೆಗೆ ಮಗುವನ್ನ ಕರೆತಂದ ದಂಪತಿ ಆಗಿದ್ದ ಸಮಸ್ಯೆ ಹೇಳಿಕೊಂಡಿದ್ದಾರೆ. ಬೇಕಿದ್ರೆ ಈಗಲೇ ಹಾಸನಕ್ಕೆ ಮಗುವನ್ನ ಕರೆದೊಯ್ಯೋದಾಗಿಯೂ ಹೇಳಿದ್ದಾರೆ.

ಇದನ್ನೂ ಓದಿ: Bengaluru New Year: ಹೊಸ ವರ್ಷಾಚರಣೆ ಸಿಸಿ ಟಿವಿ ಜತೆ ಡ್ರೋನ್ ಹದ್ದಿನ ಕಣ್ಣು

ಆದ್ರೆ ಎರಡು ದಿನ ನೋಡೋಣ ಮಗು ಚೇತರಿಗೆ ಆಗದಿದ್ದರೆ ಮತ್ತೆ ಹಾಸನಕ್ಕೆ ಕರೆದೊಯ್ಯಿರಿ ಎಂದು ಸಲಹೆ ನೀಡಿದ್ದ ವೈದ್ಯರು ಚಿಕಿತ್ಸೆ ನೀಡಿದ್ರು. ವೈದ್ಯರ ಸಲಹೆಯನ್ನೇ ನಿರ್ಲಕ್ಷ್ಯಿಸಿದ ಕರ್ತವ್ಯದಲ್ಲಿದ್ದ ನರ್ಸ್ ಒಬ್ಬರು ಮಾಡಿದ ಎಡವಟ್ಟು ಪುಟ್ಟ ಕಂದಮ್ಮನನ್ನೇ ಬಲಿ ಪಡೆದಿದೆ ಎನ್ನೋದು ಪೋಷಕರ ಆಕ್ರೋಶ. ಇಲ್ಲಿ ಆಗಲ್ಲ ಎಂದಿದ್ದರೆ ಬೇರೆಕಡೆಗೆ ಕಳಿಸಬಹುದಿತ್ತು. ಅದುಬಿಟ್ಟು ಈಗ ಮಗುವಿನ ಪ್ರಾಣ ತೆಗೆದಿದ್ದಾರೆ ಇಲ್ಲಿನ ಸಿಬ್ಬಂದಿ ರೋಗಿಗಳನ್ನ ಸರಿಯಾಗಿ ಆರೈಕೆ ಮಾಡಲ್ಲ, ಹಣಕ್ಕಾಗಿ ಹಪಹಪಿಸುತ್ತಾರೆ ಎಂದು ಹಿಡಿ ಶಾಪ ಹಾಕಿದ್ದು ಘಟನೆಗೆ ಕಾರಣವಾದವರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:58 am, Thu, 29 December 22

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್