ಚಿಕ್ಕಮಗಳೂರು: ಶಾಲೆಯ ಅಕ್ರಮ ಪ್ರಶ್ನಿಸಿದ್ದಕ್ಕೆ ಶಿಕ್ಷಕಿ ಮೈಮೇಲೆ ಬಂದ ದೇವರು; ವಿಡಿಯೋ ವೈರಲ್​

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅಡಳಿತಾತ್ಮಕವಾಗಿ ಲೋಪ ಆಗಿದೆ ಎಂಬ ದೂರು ಬಂದ ಹಿನ್ನೆಲೆ ಇಂದು (ಆ.31) ಬಿಇಓ ಶಾಲೆಗೆ ಭೇಟಿ ನೀಡಿದ್ದರು. ಬಳಿಕ ತನಿಖೆ ಆರಂಭವಾಗುತ್ತಿದ್ದಂತೆ ಮುಖ್ಯ ಶಿಕ್ಷಕಿ ದೇವರು ಬಂದಂತೆ ನಟಿಸಿದ್ದಾರೆ. ಕೂಡಲೇ ಮೂಡಿಗೆರೆ ಬಿಇಓ ಶಿಕ್ಷಕಿಯನ್ನು ತನಿಖೆ ನಡೆಸದೆ ಶಾಲೆಯಿಂದ ತೆರಳಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು, ಆ.31: ಕೆಲವೊಮ್ಮೆ ನಮ್ಮ ಊಹೆಗೂ ಮೀರಿ ವಿಚಿತ್ರ ಘಟನೆಗಳು ನಡೆಯುತ್ತದೆ. ಅದರಂತೆ ಇದೀಗ ಶಾಲೆಯ ಅಕ್ರಮ ಪ್ರಶ್ನಿಸಿದ್ದಕ್ಕೆ ಮುಖ್ಯಶಿಕ್ಷಕಿ (HeadMaster) ಲಲಿತಮ್ಮ ಎಂಬುವವರ ಮೈಮೇಲೆ ಏಕಾಏಕಿ ದೇವರು ಬಂದ ಘಟನೆ ಚಿಕ್ಕಮಗಳೂರು (Chikmagalur) ಜಿಲ್ಲೆಯ ಮೂಡಿಗೆರೆ (Mudigere) ತಾಲೂಕಿನ ಬೆಟ್ಟಗೆರೆ ಗ್ರಾಮದ ಸರ್ಕಾರಿ ಪ್ರೌಡಶಾಲೆಯಲ್ಲಿ ನಡೆದಿದೆ. ಈ ವೇಳೆ ‘ಮಾಜಿ ಸಚಿವ ಬಿಬಿ ನಿಂಗಯ್ಯ ರಕ್ತಕಾರಿ ಸಾಯ್ತಾನೆ ಬಿಡಲ್ಲ ಅವರನ್ನು ಎಂಬ ಮುಖ್ಯ ಶಿಕ್ಷಕಿಯ ಮಾತು ಕೇಳಿ ಬಿಇಓ ಹಾಗೂ ಇನ್ನಿತರ ಶಿಕ್ಷಕರು ತಬ್ಬಿಬ್ಬಾಗಿದ್ದಾರೆ.

ಶಾಲೆಗೆ ಭೇಟಿ ನೀಡಿದ್ದ ಬಿಇಓ

ಶಾಲೆಯಲ್ಲಿ ಅಡಳಿತಾತ್ಮಕವಾಗಿ ಲೋಪ ಆಗಿದೆ ಎಂಬ ದೂರು ಬಂದ ಹಿನ್ನೆಲೆ ಇಂದು (ಆ.31) ಬಿಇಓ ಶಾಲೆಗೆ ಭೇಟಿ ನೀಡಿದ್ದರು. ಬಳಿಕ ಶಾಲೆಯ ಕಡತಗಳ ಕುರಿತು ಮಾಹಿತಿ ಪಡೆಯಲು ಮುಂದಾಗುತ್ತಿದ್ದಂತೆ ಶಿಕ್ಷಕಿಯ ಮಾತಿನ ದಾಟಿ ದಿಢೀರ್ ಬದಲಾವಣೆಯಾಗಿ ‘ಮೊದಲು ದೇವಸ್ಥಾನ ಕಟ್ಟಿ ನಂತರ ಶಾಲೆಯನ್ನು ನಡೆಸಿ. ಯಾರನ್ನು ಬಿಡೋಲ್ಲ 9 ಮಂದಿ ಜೀವ ಪಡೆಯುತ್ತೇನೆ ಎಂದಿದ್ದಾರೆ. ಮುಖ್ಯ ಶಿಕ್ಷಕಿಯ ವಿಚಿತ್ರ ಮಾತಿನ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇದನ್ನೂ ಓದಿ:ಗದಗ: ಸರ್ಕಾರಿ ಶಾಲೆಯ ಮೈದಾನದಲ್ಲಿ ತೆಲೆ ಎತ್ತಿದ ಅಕ್ರಮ ಮನೆಗಳು; ನಮ್ಮ ಶಾಲೆ ಉಳಿಸಿ ಎಂದು ವಿದ್ಯಾರ್ಥಿಗಳ ಆಕ್ರೋಶ!

ಶಿಕ್ಷಕಿಯನ್ನು ತನಿಖೆ ನಡೆಸದೆ ಶಾಲೆಯಿಂದ ತೆರಳಿದ ಮೂಡಿಗೆರೆ ಬಿಇಓ

ಹೌದು, ಕುಡಿಯುವ ನೀರು, ಶೌಚಾಲಯದ ಹಣ ದುರುಪಯೋಗದ ಆರೋಪ ಕೇಳಿಬಂದಿದ್ದ ಹಿನ್ನಲೆ ಮುಖ್ಯ ಶಿಕ್ಷಕಿ ಲಲಿತಮ್ಮ ಅವರನ್ನು ತನಿಖೆ ಮಾಡಲು ಬಿಇಓ ಮತ್ತು ಸಿಬ್ಬಂದಿ ಶಾಲೆಗೆ ಆಗಮಿಸಿದ್ದರು. ಇನ್ನು ತನಿಖೆ ಆರಂಭವಾಗುತ್ತಿದ್ದಂತೆ ಮುಖ್ಯ ಶಿಕ್ಷಕಿ ದೇವರು ಬಂದಂತೆ ನಟಿಸಿದ್ದಾರೆ. ಕೂಡಲೇ ಮೂಡಿಗೆರೆ ಬಿಇಓ ಶಿಕ್ಷಕಿಯನ್ನು ತನಿಖೆ ನಡೆಸದೆ ಶಾಲೆಯಿಂದ ತೆರಳಿದ್ದಾರೆ. ಇದೀಗ ಮುಖ್ಯ ಶಿಕ್ಷಕಿ ವರ್ತನೆಗೆ ಎಸ್​ಡಿಎಂಸಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದು, ಅವರ ವಿರುದ್ಧ ಎಸ್​ಡಿಎಂಸಿ ಅಧ್ಯಕ್ಷರು ಬಿಇಓಗೆ ದೂರು ನೀಡಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Thu, 31 August 23

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More
Loading...
Unable to load recommendations.
Follow Us