Karnataka Hijab Row: ಹಿಜಾಬ್ ಗಲಾಟೆ ನಡೆದ ಶಾಲೆಯಲ್ಲಿ ಮಕ್ಕಳಿಗೆ ಡಿಸಿ, ಎಸ್​ಪಿಯಿಂದ ಪಾಠ

| Updated By: ganapathi bhat

Updated on: Feb 16, 2022 | 3:36 PM

ಶಾಲಾ ಸಿಬ್ಬಂದಿ ಹಿಜಾಬ್ ಧರಿಸಿದ್ರೂ ತೆಗೆಸುತ್ತಿದ್ದಾರೆ. ಈ ಬಗ್ಗೆ ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಎಲ್ಲೂ ಉಲ್ಲೇಖ ಇಲ್ಲ. ಕೆಲ ಕಾಲೇಜುಗಳಲ್ಲಿ ಶಾಲಾ ಆವರಣದಲ್ಲಿ ಹಿಜಾಬ್‌ಗೆ ಅನುಮತಿ ನೀಡುತ್ತಿಲ್ಲ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ವಕೀಲರ ನಿಯೋಗ ಮನವಿ ಮಾಡಿದೆ.

Karnataka Hijab Row: ಹಿಜಾಬ್ ಗಲಾಟೆ ನಡೆದ ಶಾಲೆಯಲ್ಲಿ ಮಕ್ಕಳಿಗೆ ಡಿಸಿ, ಎಸ್​ಪಿಯಿಂದ ಪಾಠ
ಪ್ರಾತಿನಿಧಿಕ ಚಿತ್ರ
Follow us on

ಬೆಳಗಾವಿ: ಹಿಜಾಬ್ ವಿವಾದ ಹಿನ್ನೆಲೆ, ಶಾಲಾ ಕಾಲೇಜುಗಳಲ್ಲಿ ಹೈಕೋರ್ಟ್ ಆದೇಶ ಉಲ್ಲಂಘನೆ ಆಗುತ್ತಿದೆ ಎಂದು ಬೆಳಗಾವಿಯ ಹ್ಯೂಮನ್ ರೈಟ್ಸ್ ಅಡ್ವೋಕೆಟ್ಸ್ ಫೋರಂದಿಂದ ಡಿಸಿಗೆ ಮನವಿ ಮಾಡಲಾಗಿದೆ. ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠಗೆ ಮನವಿ ಸಲ್ಲಿಕೆ ಮಾಡಲಾಗಿದೆ. ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರದ ಬಗ್ಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಶಾಲಾ ಗೇಟ್ ಬಳಿ ವಿದ್ಯಾರ್ಥಿಗಳನ್ನ ತಡೆದು ಅಪಮಾನ ಮಾಡುತ್ತಿದ್ದಾರೆ. ಶಾಲಾ ಸಿಬ್ಬಂದಿ ಹಿಜಾಬ್ ಧರಿಸಿದ್ರೂ ತೆಗೆಸುತ್ತಿದ್ದಾರೆ. ಈ ಬಗ್ಗೆ ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಎಲ್ಲೂ ಉಲ್ಲೇಖ ಇಲ್ಲ. ಕೆಲ ಕಾಲೇಜುಗಳಲ್ಲಿ ಶಾಲಾ ಆವರಣದಲ್ಲಿ ಹಿಜಾಬ್‌ಗೆ ಅನುಮತಿ ನೀಡುತ್ತಿಲ್ಲ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ವಕೀಲರ ನಿಯೋಗ ಮನವಿ ಮಾಡಿದೆ.

ಚಿಕ್ಕಮಗಳೂರು: ಶಾಲೆಯಲ್ಲಿ ಮಕ್ಕಳಿಗೆ ಡಿಸಿ, ಎಸ್​ಪಿ, ಸಿಇಓ ಪಾಠ
ನಿನ್ನೆ ಹಿಜಾಬ್ ಗಲಾಟೆ ನಡೆದ ಶಾಲೆಯಲ್ಲಿ ಮಕ್ಕಳಿಗೆ ಚಿಕ್ಕಮಗಳೂರು ಡಿಸಿ, ಎಸ್​ಪಿ, ಸಿಇಓ ಪಾಠ ಮಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಇಂದಾವರ ಶಾಲೆಯಲ್ಲಿ ನಡೆದಿದೆ. ಹತ್ತನೇ ತರಗತಿ ಮಕ್ಕಳಿಗೆ ಡಿಸಿ ಕೆ.ಎನ್ ರಮೇಶ್, ಎಸ್​ಪಿ ಅಕ್ಷಯ್ ಗಣಿತ ಪಾಠ ಮಾಡಿದ್ದಾರೆ. ಸಿಇಓ ಪ್ರಭು ಸಮಾಜ ವಿಜ್ಞಾನ ಪಾಠ ಮಾಡಿದ್ದಾರೆ. ಇಂದಾವರ ಅಲ್ಪ ಸಂಖ್ಯಾತರ ಶಾಲೆಯಲ್ಲಿ ಪಾಠ ಮಾಡಿದ್ದಾರೆ. ನಿನ್ನೆ ಹಿಜಾಬ್ ವಿಚಾರವಾಗಿ ತೀವ್ರ ಗಲಾಟೆ ನಡೆದಿತ್ತು. ಪೋಷಕರು-ಮಕ್ಕಳು ಶಾಲೆ ಬಳಿ ಗಲಾಟೆ ಮಾಡಿದ್ದರು. ಇದರಿಂದ ಡಿಡಿಪಿಐ ಮಲ್ಲೇಶಪ್ಪ ಶಾಲೆಗೆ ತುರ್ತು ರಜೆ ನೀಡಿದ್ದರು. ಇಂದು ಅದೇ ಶಾಲೆಯಲ್ಲಿ ಡಿಸಿ, ಎಸ್ಪಿ, ಸಿಇಓ ಪಾಠ ಮಾಡಿದ್ದಾರೆ.

ಮಂಗಳೂರು, ಕೊಡಗು: ಹಿಜಾಬ್ ಧರಿಸಿ ತರಗತಿಗೆ ಅವಕಾಶವಿಲ್ಲದ್ದಕ್ಕೆ ವಿದ್ಯಾರ್ಥಿನಿಯರು ವಾಪಸ್
ಮಂಗಳೂರಿನ 6 ಕಾಲೇಜುಗಳಲ್ಲಿ ಹಿಜಾಬ್ ವಿವಾದ ಹಿನ್ನೆಲೆ ಹಿಜಾಬ್ ಧರಿಸಿ ತರಗತಿಗೆ ಅವಕಾಶವಿಲ್ಲದ್ದಕ್ಕೆ ವಿದ್ಯಾರ್ಥಿನಿಯರು ವಾಪಸ್ ಆದ ಘಟನೆ ನಡೆದಿದೆ. ದಯಾನಂದ ಪೈ ಪದವಿ ಕಾಲೇಜಿನ ಇಬ್ಬರು, ಪೊಂಪೈ ಪದವಿ ಕಾಲೇಜಿನ 26 ವಿದ್ಯಾರ್ಥಿನಿಯರು, ಇಂದಿರಾನಗರ ಪದವಿ ಕಾಲೇಜಿನ 15 ವಿದ್ಯಾರ್ಥಿನಿಯರು, ಮಹಾವೀರ ಕಾಲೇಜಿನ 6 ವಿದ್ಯಾರ್ಥಿನಿಯರು ವಾಪಸ್ ಆಗಿದ್ದಾರೆ. ಕಾಲೇಜಿನಿಂದ ಮನೆಗಳಿಗೆ ವಿದ್ಯಾರ್ಥಿನಿಯರು ವಾಪಸಾಗಿದ್ದಾರೆ.

ಕೊಡಗಿನ ಕೆಪಿಎಸ್ ಶಾಲೆಯಲ್ಲಿ ಹಿಜಾಬ್ ವಿವಾದ ಮತ್ತಷ್ಟು ಕಗ್ಗಂಟಾಗಿದೆ. 34 ವಿದ್ಯಾರ್ಥಿನಿಯರು, ಪೋಷಕರು ಪಟ್ಟು ಸಡಿಲಿಸುತ್ತಿಲ್ಲ. ಪೋಷಕರ ಹೊತೆಗಿನ ಶಿಕ್ಷಣಾಧಿಕಾರಿ ಮಾತುಕತೆ ವಿಫಲವಾಗಿದೆ. 34 ವಿದ್ಯಾರ್ಥಿನಿಯರು ಶಾಲೆಯ ಹೊರಗೇ ಉಳಿದಿದ್ದಾರೆ. ಮಕ್ಕಳನ್ನು ಶಾಲೆಯಿಂದ‌ ಕರೆದೊಯ್ಯಲು ಪೋಷಕರು ನಿರಾಕರಿಸಿದ್ದಾರೆ. ಶಾಲೆಯ ಹೊರ ಆವರಣದಲ್ಲೇ 34 ವಿದ್ಯಾರ್ಥಿನಿಯರು ಉಳಿದಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನ ನೆಲ್ಯಹುದಿಕೇರಿ ಗ್ರಾಮದ ಕರ್ನಾಟಕ‌ ಪಬ್ಲಿಕ್ ಶಾಲೆಯಲ್ಲಿ ಹಿಜಾಬ್ ವಿವಾದ ಕಗ್ಗಂಟಾಗಿದೆ.

ದಾವಣಗೆರೆ: ಹೆಚ್ಚಿನ ಪೊಲೀಸ್ ಹಾಗೂ ರಾಪಿಡ್ ಆಕ್ಷನ್ ಪೋರ್ಸ್ ನಿಯೋಜನೆ
ಕೇಸರಿ ಶಾಲ್ ಹಾಗೂ ಹಿಜಾಬ್ ಗಲಾಟೆ ಸಾಧ್ಯತೆ ಹಿನ್ನಲೆ ದಾವಣಗೆರೆ ನಗರದಲ್ಲಿ ಹೆಚ್ಚಿನ ಪೊಲೀಸ್ ಹಾಗೂ ರಾಪಿಡ್ ಆಕ್ಷನ್ ಪೋರ್ಸ್ ನಿಯೋಜನೆ ಮಾಡಲಾಗಿದೆ. ಗುಂಡಿ ವೃತ್ತದಲ್ಲಿ ರಾಪಿಡ್ ಆಕ್ಷನ್ ಪೋರ್ಸ್ ಸಿಬ್ಬಂದಿ ಶಸ್ತ್ರ ಸಜ್ಜಿತರಾಗಿ ನಿಂತಿದ್ದಾರೆ. ಫೋರ್ಸ್ ಸಿಬ್ಬಂದಿ ಹಾಗೂ ವಾಹನಗಳ ಸಮೇತ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮೊನ್ನೆ ಗಲಾಟೆ ತೀವ್ರಗೊಂಡ ಹಿನ್ನಲೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಸಂಭನೀಯ ಗಲಾಟೆ ಎದುರಿಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸರ್ವ ಸನ್ನದ್ದವಾಗಿದೆ. ಆಯ್ದ ಕಾಲೇಜು ಮತ್ತು ಹಾಗೂ ಗುಂಡಿ ವೃತ್ತದಲ್ಲಿ ಹೆಚ್ವಿನ ಸೆಕ್ಯೂರಿಟಿ ಒದಗಿಸಲಾಗಿದೆ.

ಚಿಕ್ಕಮಗಳೂರು: ಪ್ರತಿಭಟನಾನಿರತ ವಿದ್ಯಾರ್ಥಿನಿಯರಿಗೆ ಪಿಎಫ್​ಐನಿಂದ ಮಾರ್ಗದರ್ಶನ
ಚಿಕ್ಕಮಗಳೂರಿನ ಎಂಇಎಸ್ ಕಾಲೇಜಿನಲ್ಲಿ ಹಿಜಾಬ್‌ಗೆ ಒತ್ತಾಯಿಸಿ ವಿದ್ಯಾರ್ಥಿನಿಯರ ಪ್ರತಿಭಟನೆ ನಡೆಸಲಾಗಿದೆ. ಕಾಲೇಜಿನೊಳಗೆ ವಿದ್ಯಾರ್ಥಿನಿಯರಿಂದ ಪ್ರತಿಭಟನೆ ನಡೆಯುತ್ತಿದ್ದರೆ ಇತ್ತ MES ಕಾಲೇಜು ಹೊರಗೆ ಪೋಷಕರಿಂದ ಪ್ರತಿಭಟನೆ ನಡೆಯುತ್ತಿದೆ.

ಪೊಲೀಸರ ಎದುರೇ ಪ್ರತಿಭಟನಾನಿರತ ವಿದ್ಯಾರ್ಥಿನಿಯರಿಗೆ ಪಿಎಫ್​ಐನಿಂದ ಮಾರ್ಗದರ್ಶನ ನೀಡಲಾಗಿದೆ. ಚಿಕ್ಕಮಗಳೂರಿನ ಎಂಇಎಸ್​ ಕಾಲೇಜು ಆವರಣದಲ್ಲಿ ಘಟನೆ ನಡೆದಿದೆ. ಕಾಲೇಜು ಆವರಣ ಪ್ರವೇಶಿಸಿದರೂ ಪೊಲೀಸರು ಮೂಕಪ್ರೇಕ್ಷಕರಾಗಿದ್ದಾರೆ. PFI ಮುಖಂಡರನ್ನ ಕಾಲೇಜು ಆಡಳಿತ ಮಂಡಳಿ ಕಾಲೇಜಿನ ಒಳಗೆ ಬಿಟ್ಟಿದೆ. ಪಿಎಫ್​ಐ ಮುಖಂಡರು ಕಾಲೇಜು ಆವರಣ ಪ್ರವೇಶಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಪಿಎಫ್​ಐ ವಿರುದ್ಧ ಹಿಂದೂ ಪರ ಸಂಘಟನೆಗಳ ಮುಖಂಡರ ಆಕ್ರೋಶ ಕೇಳಿಬಂದಿದೆ.

ರಾಯಚೂರು: 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ಪ್ರತಿಭಟನೆ
ರಾಯಚೂರಿನ SSRG ಕಾಲೇಜಿನಲ್ಲಿ ಹಿಜಾಬ್ ವಿಚಾರಕ್ಕೆ ಸಂಬಂಧಿಸಿ ಆಕ್ರೋಶ ಭುಗಿಲೆದ್ದಿದೆ. 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ಪ್ರತಿಭಟನೆ ನಡೆಸಲಾಗಿದೆ. ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಧರಣಿ ನಡೆಸುತ್ತಿದ್ದಾರೆ. ಎಸ್ಎಸ್ಆರ್‌ಜಿ ಮಹಿಳಾ ಕಾಲೇಜಿಗೆ ಪೊಲೀಸರು ಭೇಟಿ ನೀಡಿದ್ದಾರೆ. ವಿದ್ಯಾರ್ಥಿನಿಯರನ್ನು ಮನವೊಲಿಸಲು ಪ್ರಯತ್ನಿಸಿದ್ದಾರೆ.

ಶಿವಮೊಗ್ಗ: ಉರ್ದು ಶಾಲೆಯ ಕಾಂಪೌಂಡ್​ಗೆ ಹಾಕಿದ್ದ ಪೋಸ್ಟರ್ ತೆರವು
ಶಿವಮೊಗ್ಗದ ಲಷ್ಕರ್ ಮೊಹಲ್ಲಾದಲ್ಲಿ ಫಿಎಫ್​ಐ ಸಂಸ್ಥೆಯ ಪೋಸ್ಟರ್ ಹಾಕಿದ ಹಿನ್ನಲೆ ಕೆಲಹೊತ್ತು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಬಡಾವಣೆ ಉರ್ದು ಶಾಲೆಯ ಕಾಂಪೌಂಡ್​ಗೆ ಹಾಕಿದ್ದ ಪೋಸ್ಟರ್ ಪೊಲೀಸರ ಸಮ್ಮುಖದಲ್ಲಿ ತೆರವು ಮಾಡಲಾಗಿದೆ. ಸ್ಥಳಕ್ಕೆ ಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿದ್ಯಾರ್ಥಿನಿಯರು ತರಗತಿಗಳನ್ನ ಬಹಿಷ್ಕರಿಸಿ ಮನಗೆ ತೆರಳಿದ ಘಟನೆ ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ. ಬೆಳಗ್ಗೆ ತರಗತಿ ಬಹಿಷ್ಕರಿಸಿ ಹೊರಬಂದಿದ್ದ ವಿದ್ಯಾರ್ಥಿನಿಯರು ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಿದ್ದರು. ಮತ್ತೆ ಕಾಲೇಜಿಗೆ ತೆರಳಿ ಹಿಜಾಬ್ ಧರಿಸಿ ಪಾಠ ಕೇಳಲು ಒತ್ತಾಯ ಮಾಡಲಾಗಿದೆ. ಕಾಲೇಜು ಆಡಳಿತ ಮಂಡಳಿ ವಿರೋಧ ಹಿನ್ನೆಲೆ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಮನೆಗೆ ಹೊರಟಿದ್ದಾರೆ.

ಇದನ್ನೂ ಓದಿ: Karnataka Hijab Hearing Live: ಹಿಜಾಬ್ – ಕೇಸರಿ ಶಾಲು ವಿವಾದ: ಹೈಕೋರ್ಟ್​ನಲ್ಲಿ ವಿಚಾರಣೆ ಆರಂಭ

ಇದನ್ನೂ ಓದಿ: Karnataka Hijab Row: ಕಾಲೇಜುಗಳು ಆರಂಭ ಹಿನ್ನೆಲೆ; ಮುನ್ನೆಚ್ಚರಿಕೆ ಕ್ರಮವಾಗಿ ಕೆಲ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ

Published On - 3:35 pm, Wed, 16 February 22