Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರು: ಕ್ರಿಶ್ಚಿಯನ್ ಇಲ್ಲದ ಗ್ರಾಮದಲ್ಲಿ ಚರ್ಚ್ ನಿರ್ಮಾಣ: ಹಿಂದೂಪರ ಸಂಘಟನೆ, ಗ್ರಾಮಸ್ಥರ ವಿರೋಧ

ಮನೆಗೆ ಮಂಜೂರಾಗಿರುವ ಜಾಗದಲ್ಲಿ ಅಕ್ರಮವಾಗಿ ಚರ್ಚ್ ನಿರ್ಮಾಣ ಮಾಡಲು ಮುಂದಾಗಿದ್ದು ಕ್ರಿಶ್ಚಿಯನ್ ಕುಟುಂಬದ ಮನೆಯಿಲ್ಲದ ಗ್ರಾಮದಲ್ಲಿ ಚರ್ಚ್ ನಿರ್ಮಾಣ ಮಾಡುತ್ತಿರುವುದಕ್ಕೆ ಹಿಂದೂಪರ ಸಂಘಟನೆ, ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು: ಕ್ರಿಶ್ಚಿಯನ್ ಇಲ್ಲದ ಗ್ರಾಮದಲ್ಲಿ ಚರ್ಚ್ ನಿರ್ಮಾಣ: ಹಿಂದೂಪರ ಸಂಘಟನೆ, ಗ್ರಾಮಸ್ಥರ ವಿರೋಧ
ಚರ್ಚ್
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಆಯೇಷಾ ಬಾನು

Updated on:Aug 07, 2023 | 11:16 AM

ಚಿಕ್ಕಮಗಳೂರು, ಆ.07: ಮಲೆನಾಡಲ್ಲಿ ಮತ್ತೆ ಮತಾಂತರದ ಕಿಚ್ಚು ಹತ್ತಿಕೊಂಡಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಲೋಕವಳ್ಳಿ ಗ್ರಾಮದಲ್ಲಿ ಚರ್ಚ್ ನಿರ್ಮಾಣಕ್ಕೆ ವಿರೋಧ ಭುಗಿಲೆದ್ದಿದೆ. ಒಂದೂ ಕ್ರಿಶ್ಚಿಯನ್ ಕುಟುಂಬದ ಮನೆಯಿಲ್ಲದ ಗ್ರಾಮದಲ್ಲಿ ಚರ್ಚ್ ನಿರ್ಮಾಣ ಮಾಡುತ್ತಿರುವುದಕ್ಕೆ ಹಿಂದೂಪರ ಸಂಘಟನೆ, ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಚರ್ಚ್ ಕಟ್ಟಡ ನಿರ್ಮಾಣ ಕಾಮಗಾರಿ ನಿಲ್ಲಿಸುವಂತೆ ಪಟ್ಟು ಹಿಡಿದಿದ್ದಾರೆ.

ಗ್ರಾಮಕ್ಕೆ ಸಂಬಂಧ ಪಡದ ಮೂಡಿಗೆರೆ ಸಮೀಪದ ಹಾಂದಿ ಗ್ರಾಮದ ರಂಗ ಎಂಬ ವ್ಯಕ್ತಿ ಕ್ರಿಶ್ಚಿಯನ್ ಕುಟುಂಬಗಳೇ ಇಲ್ಲದ ಲೋಕವಳ್ಳಿ ಗ್ರಾಮದಲ್ಲಿ ಚರ್ಚ್ ನಿರ್ಮಾಣಕ್ಕೆ ಮುಂದಾಗಿದ್ದಾರೆ.ರಂಗ ಕೂಡ ಮತಾಂತರ ಹೊಂದಿದವರಾಗಿದ್ದು ಸರ್ಕಾರದಿಂದ ಮನೆ ಕಟ್ಟಿಸಲು ಮಂಜೂರಾಗಿರುವ ಜಾಗದಲ್ಲಿ ಅಕ್ರಮವಾಗಿ ಚರ್ಚ್ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಲೋಕವಳ್ಳಿ ಗ್ರಾಮಕ್ಕೆ‌ ಹಳೆ ಮೂಡಿಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು ಭೇಟಿ ನೀಡಿದ್ದಾರೆ. ಇನ್ನು ಚರ್ಚ್ ನಿರ್ಮಾಣ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಗ್ರಾಮಸ್ಥರು ದೂರು ದಾಖಲಿಸಿದ್ದಾರೆ. ಅಕ್ರಮ ಮತಾಂತರಕ್ಕಾಗಿ ಚರ್ಚ್ ನಿರ್ಮಾಣದ ಆರೋಪ ಮಾಡಿದ್ದಾರೆ. ಕ್ರಿಶ್ಚಿಯನ್ ಸಮುದಾಯದ ಒಂದು ಕುಟುಂಬವಿಲ್ಲದ ಊರಿನಲ್ಲಿ ಚರ್ಚ್ ನಿರ್ಮಾಣಕ್ಕೆ ಮುಂದಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ: ಕುತೂಹಲ ಮೂಡಿಸಿದ ಬೊಮ್ಮಾಯಿ ದಿಲ್ಲಿ ಪ್ರವಾಸ

ಎರಡು ಕಾರುಗಳ ನಡುವೆ ಅಪಘಾತ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜೇನುಬೈಲು ಗ್ರಾಮದ ಬಳಿ ಓವರ್ ಟೆಕ್ ಮಾಡಲು ಹೋಗಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಎರಡು ಕಾರುಗಳ ನಡುವೆ ಡಿಕ್ಕಿಯಾಗಿದ್ದು ರಭಸಕ್ಕೆ ಕಾರು ಪಲ್ಟಿಯಾಗಿದೆ. ಭೀಕರ ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ‌ಯಾಗಿದೆ. ಎರಡು ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯ‌ಗಳಾಗಿವೆ. ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ನಾಲ್ವರನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜೇನುಬೈಲಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

Published On - 9:15 am, Mon, 7 August 23