ಪ್ರೀತಿಸಿ ಮದ್ವೆಯಾಗಿದ್ದವಳನ್ನ 10 ಬಾರಿ ಇರಿದು ಕೊಂದ ಪತಿ: ಪ್ರೀತಿಕೊಂದ ಕೊಲೆಗಾರನಿಗೆ ಶೋಧ

ಇಬ್ಬರು ಪರಸ್ಪರ ಪ್ರೀತಿಸತ್ತಿದ್ದರು. ಆದ್ರೆ ಮದುವೆಗೆ ಹುಡುಗಿ ಮನೆಯಲ್ಲಿ ವಿರೋಧವಿತ್ತು.ಆದರೂ ಸಹ ಯುವಕ ಎಲ್ಲರನ್ನು ಮನವೊಲಿಸಿ ಕಳೆದ ನಾಲ್ಕು ವರ್ಷದ ಹಿಂದೆಷ್ಟೇ ಪ್ರೀತಿ ಮಾಡಿದಾಕೆ ಜೊತೆ ವಿವಾಹವಾಗಿದ್ದ. ಆದ್ರೆ, ಇದೀಗ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಸದ್ಯ ಎಸ್ಕೇಪ್ ಆಗಿರುವ ಪ್ರೀತಿ ಕೊಂದ ಕೊಲೆಗಾರನಿಗೆ ಪೊಲೀಸರು ಶೋಶ ನಡೆಸಿದ್ದಾರೆ.

ಪ್ರೀತಿಸಿ ಮದ್ವೆಯಾಗಿದ್ದವಳನ್ನ 10 ಬಾರಿ ಇರಿದು ಕೊಂದ ಪತಿ: ಪ್ರೀತಿಕೊಂದ ಕೊಲೆಗಾರನಿಗೆ ಶೋಧ
Keerthi And Avinash
Updated By: ರಮೇಶ್ ಬಿ. ಜವಳಗೇರಾ

Updated on: May 28, 2025 | 4:25 PM

ಚಿಕ್ಕಮಗಳೂರು, (ಮೇ 28): ಪ್ರೀತಿಸಿ (Love) ಮದುವೆಯಾಗಿದ್ದ ಪತ್ನಿಯನ್ನು (Wife) ಚಾಕು ಮನಸ್ಸೋ ಇಚ್ಛೆ ಇರಿದು ಹತ್ಯೆಗೈದಿರುವ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಕೈಮರಾ ಚೆಕ್ ಪೋಸ್ಟ್ ಬಳಿ ನಡೆದಿದೆ. ಹತ್ಯೆಯಾದ ಮಹಿಳೆಯನ್ನು ಕೀರ್ತಿ (26) ಎಂದು ಗುರುತಿಸಲಾಗಿದೆ. ಇನ್ನು ಪತಿ ಅವಿನಾಶ್ (32) ಎನ್ನುವಾತ ಚಾಕುವಿನಿಂದ ಬರೋಬ್ಬರಿ ಹತ್ತು ಬಾರಿ ಚುಚ್ಚಿ ಕೊಂದು ಎಸ್ಕೇಪ್ ಆಗಿದ್ದಾನೆ. ಕೀರ್ತಿ ಪೋಷಕರ ವಿರೋಧದ ನಡುವೆಯೂ ಆಕೆಯನ್ನು ನಾಲ್ಕು ವರ್ಷದ ಹಿಂದೆಯೇ ಪ್ರೀತಿಸಿ ಮದುವೆಯಾಗಿದ್ದ. ಆದ್ರೆ, ಇಬ್ಬರು ನಡುವೆ ಶುರುವಾದ ಸಣ್ಣ ಜಗಳದಲ್ಲಿ ಅವಿನಾಶ್, ಪ್ರೀತಿ ನಂಬಿ ಬಂದಿದ್ದ ಕೀರ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಕೀರ್ತಿ ಹಾಗೂ ಅವಿನಾಶ್ ಪರಸ್ಪರ ಪ್ರೀತಿಸಿದ್ದು, ನಾಲ್ಕು ವರ್ಷದ ಹಿಂದೆಷ್ಟೇ ಮದುವೆಯಾಗಿದ್ದು, ದಂಪತಿಗೆ ಎರಡೂವರೆ ವರ್ಷದ ಹೆಣ್ಣು ಸಹ ಮಗುವಿದೆ. ಅಲ್ಲದೇ ಕಳೆದ ವಾರ ಇಬ್ಬರೂ ಸಂಬಂಧಿಕರ ಮದುವೆಯಲ್ಲಿ ಖುಷಿ ಖುಷಿಯಲ್ಲಿ ಪಾಲ್ಗೊಂಡಿದ್ದರು. ಆದ್ರೆ, ಅದೋನಾಯ್ತೋ ಏನೋ ಇಬ್ಬರ ನಡುವೆ ಗಲಾಟೆಯಾಗಿದ್ದು, ಈ ವೇಳೆ ಅವಿನಾಶ್​, ಪತ್ನಿ ಕೀರ್ತಿಗೆ ಚಾಕುವಿನಿಂದ ಮನಸ್ಸೋ ಇಚ್ಛೇ ದಾಳಿ ಮಾಡಿ ಕೊಲೆ ಮಾಡಿದ್ದಾನೆ. ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕೀರ್ತಿ ಮೃತದೇಹವನ್ನು ರವಾನೆ ಮಾಡಲಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ಬೆಳಗಾವಿ: ವರನ ತಾಯಿ ಕುರುಡಿ ಎಂದು ಮದ್ವೆ ಹಿಂದಿನ ದಿನ ಆತ್ಮಹತ್ಯೆ ಮಾಡಿಕೊಂಡ ವಧು

ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಮಾಡಿ ಪರಾರಿಯಾಗಿರುವ ಅವಿನಾಶ್​ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆದ್ರೆ, ಕೊಲೆ ನಿಖರ ಕಾರಣ ಏನು ಎನ್ನುವುದೇ ನಿಗೂಢವಾಗಿದೆ. ಅವಿನಾಶ್​ ಸಿಕ್ಕ ಬಳಿಕ ತನಿಖೆಯಲ್ಲಿ ಹತ್ಯೆಗೆ ನಿಜವಾದ ಕಾರಣ ತಿಳಿಯಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.