ತೇಗೂರಿನಲ್ಲಿ ಜೋಡೆತ್ತುಗಳ ಭರ್ಜರಿ ಓಟ, ಜಿದ್ದಿಗೆ ಬಿದ್ದು ಸ್ಪರ್ಧೆಗಿಳಿದ ಹೋರಿಗಳು

ತೇಗೂರಿನಲ್ಲಿ ಜೋಡೆತ್ತುಗಳ ಭರ್ಜರಿ ಓಟ, ಜಿದ್ದಿಗೆ ಬಿದ್ದು ಸ್ಪರ್ಧೆಗಿಳಿದ ಹೋರಿಗಳು

ಚಿಕ್ಕಮಗಳೂರು: ಖದರ್ ಅಂದ್ರೆ ಇದು. ಮಿಂಚಿನ ಓಟ ಅಂದ್ರೆ ಹಿಂಗೆ. ಜೋಡೆತ್ತುಗಳ ಪವರ್ ನೋಡಿದ್ರೆ ಎಂಥವ್ರಿಗೂ ರೋಮಾಂಚನವಾಗುತ್ತೆ. ಕೇಕೆ, ಶಿಳ್ಳೆ ಶಬ್ದ ಕೇಳಿದರಂತೂ ಹೋರಿಗಳ ಮೈಯಲ್ಲೆಲ್ಲಾ ಕರೆಂಟ್ ಪಾಸಾಗುತ್ತೆ.

ಚಿಕ್ಕಮಗಳೂರಿನ ತೇಗೂರಿನಲ್ಲಿ ಎತ್ತುಗಳಿಗಾಗಿಯೇ ಏರ್ಪಡಿಸಿದ್ದ ಜೋಡೆತ್ತಿನ ಗಾಡಿ ಸ್ಪರ್ಧೆಯ ಝಲಕ್‍ ಮೈ ರೋಮಾಂಚನ ವಾಗುವಂತೆ ಮಾಡಿತ್ತು. ಕನ್ನಡ ರಾಜ್ಯೋತ್ಸವ ಅಂಗವಾಗಿ ಅರಸು ಗೆಳೆಯರ ಬಳಗ ನಡೆಸೋ ಈ ಸ್ಪರ್ಧೆಗೆ ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ಹಾವೇರಿ, ಹುಬ್ಬಳ್ಳಿ ಸೇರಿ ರಾಜ್ಯದ ನಾನಾ ಭಾಗದಿಂದ 80ಕ್ಕೂ ಹೆಚ್ಚು ಜೋಡೆತ್ತುಗಳು ಆಗಮಿಸಿದ್ವು. ಜಿದ್ದಿಗೆ ಬಿದ್ದಂತೆ ಸ್ಪರ್ಧೆಗೆ ಇಳಿದ ಹೋರಿಗಳು ಗುರಿಯತ್ತ ನುಗ್ಗಿ ಬಂದ್ವು.

ಇಂಥ ಸ್ಪರ್ಧೆಗಾಗಿಯೇ ಕೆಲ ಎತ್ತುಗಳನ್ನ ರೈತರು ಮೀಸಲಿಡ್ತಾರೆ. ಕೆಲ ರೈತರು ಹೊಲ ಗದ್ದೆಗಳಲ್ಲಿ ಕೆಲಸ ಮುಗಿದ ನಂತರ ಇಂಥ ಓಟಗಳಲ್ಲಿ ಭಾಗವಹಿಸಿ ಖುಷಿಪಡ್ತಾರೆ. ಇನ್ನು ಸ್ಪರ್ಧೆಯ ಹದಿನೈದು ದಿನ ಮುಂಚಿತವಾಗೇ ಎತ್ತುಗಳಿಗೆ ವಿಶೇಷ ತರಬೇತಿ ನೀಡಲಾಗುತ್ತೆ. ಹಿಂಡಿ, ಬೂಸಾ, ರಾಗಿ ಹುಲ್ಲು, ಮೆಕ್ಕೆಜೋಳದ ಜೊತೆ ಮೊಟ್ಟೆ ಹಾಗೂ ಮೆಂತೆ ಮುದ್ದೆಯನ್ನ ನೀಡಿ ರೆಡಿ ಮಾಡ್ತಾರೆ. ಸ್ಪರ್ಧೆಯಲ್ಲಿ ಪ್ರಶಸ್ತಿ ಗೆಲ್ಲೋದ್ಕಿಂತ ಭಾಗವಹಿಸೋದೆ ರೈತರಿಗೆ ಸಂತಸ.

ಮಲೆನಾಡಿನಲ್ಲಿ ಅಪರೂಪವೆನಿಸಿದ್ದ ಈ ಜೋಡೆತ್ತಿನಗಾಡಿ ಸ್ಪರ್ಧೆಯನ್ನ ನೋಡಲು ಸುತ್ತಮುತ್ತಲ ಗ್ರಾಮಗಳ ಐದು ಸಾವಿರಕ್ಕೂ ಹೆಚ್ಚ ಜನ ಬರ್ತಾರೆ. ಒಟ್ನಲ್ಲಿ, ಗ್ರಾಮೀಣ ಕ್ರೀಡೆಗಳು ನಶಿಸ್ತಿರೋ ಇತ್ತೀಚಿನ ದಿನಗಳಲ್ಲಿ ಚಿಕ್ಕಮಗಳೂರಿನ ತೇಗೂರಿನಲ್ಲಿ ನಡೆದ ಈ ಸ್ಪರ್ಧೆ ಜನಮನ ಸೆಳೆಯಿತು.

Click on your DTH Provider to Add TV9 Kannada