ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲೂಕಿನ ಚೀರನಹಳ್ಳಿಯಲ್ಲಿ ನಾಯಿ ಮೇಲೆ ಚಿರತೆ ಅಟ್ಯಾಕ್ ಮಾಡಿದೆ. ನಾಯಿಯ ಸಮೀಪದಲ್ಲೇ ಕಾರ್ಮಿಕರೂ ನಿದ್ರಿಸುತ್ತಿದ್ದರು. ರಾಜೀವ್ ಎಂಬುವವರ ಅಡಿಕೆ ಚೇಣಿಮನೆಯಲ್ಲಿ ಚಿರತೆ ಪತ್ತೆಯಾಗಿದ್ದು, ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ನಾಯಿ ಮೇಲೆ ಚಿರತೆ ದಾಳಿ ಮಾಡಿದಾಗ ಅದೃಷ್ಟವಶಾತ್ ನಾಯಿ ತಪ್ಪಿಸಿಕೊಂಡಿದೆ. ಆ ಸದ್ದಿನಲ್ಲಿ ಸ್ಥಳದಲ್ಲಿದ್ದ ಕಾರ್ಮಿಕರಿಗೆ ಎಚ್ಚರವಾಗಿದ್ದು, ಅವರು ಬೊಬ್ಬೆ ಹೊಡೆದಿದ್ದಾರೆ. ಆ ಶಬ್ಧಕ್ಕೆ ಚಿರತೆ ಸ್ಥಳದಿಂದ ಕಾಲ್ಕಿತ್ತಿದೆ. ಚಿರತೆ ಸೆರೆಹಿಡುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.
ಚಿರತೆ ದಾಳಿ ಮಾಡಿರುವ ವಿಡಿಯೋ ಇಲ್ಲಿದೆ:
ಭಾರಿ ಮಳೆ; ಕವಿಕಲ್ ಗಂಡಿ ಬಳಿ ಕುಸಿದ ರಸ್ತೆ:
ಮುಳ್ಳಯ್ಯನಗಿರಿ ಭಾಗದಲ್ಲಿ ನಿನ್ನೆ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ, ಚಿಕ್ಕಮಗಳೂರು ತಾಲೂಕಿನ ಕವಿಕಲ್ ಗಂಡಿ ಬಳಿ ರಸ್ತೆ ಕುಸಿದಿದೆ. ಭಾರಿ ಪ್ರಮಾಣದಲ್ಲಿ ರಸ್ತೆಯ ಮಣ್ಣು ಕೊಚ್ಚಿ ಹೋಗಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಟ್ಟಿದ್ದ ತಡೆಗೋಡೆ ಕುಸಿತವಾಗಿದ್ದು, ದತ್ತಪೀಠಕ್ಕೆ ಹೋಗುವ ಮಾರ್ಗದ ರಸ್ತೆಯಲ್ಲಿ ಹಾನಿಯಾಗಿದೆ. ಹೊನ್ನಮ್ಮನಹಳ್ಳ ಜಲಪಾತದ ಬಳಿಯೂ ತಡೆಗೋಡೆ ಕುಸಿದಿದ್ದು, ಮಾಜಿ ಸಚಿವ ಸಗೀರ್ ಅಹಮದ್ ಗೆ ಸೇರಿದ ಕಾಫಿ ತೋಟಕ್ಕೂ ಹಾನಿಯಾಗಿದೆ.
ಬೀರುಗೂರಿನಲ್ಲಿ ಕಾಡಾನೆ ಹಿಂಡು ದಾಳಿ, ಭತ್ತದ ಬೆಳೆ ನಾಶ:
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬೀರುಗೂರಿನಲ್ಲಿ ಕಾಡಾನೆ ಹಿಂಡು ದಾಳಿಯಿಂದಾಗಿ ಭತ್ತದ ಬೆಳೆ ನಾಶವಾಗಿದೆ. ಅಣ್ಣಪ್ಪ ಶೆಟ್ಟಿ ಎಂಬುವವರಿಗೆ ಸೇರಿದ ಭತ್ತದ ಬೆಳೆ ಹಾನಿಯಾಗಿದ್ದು, ಆನೆ ಕಾಡಿಗೆ ಅಟ್ಟುವಂತೆ ಅರಣ್ಯ ಸಿಬ್ಬಂದಿಗೆ ರೈತರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:
Shocking News: ವಾಲಿಬಾಲ್ ಆಟಗಾರ್ತಿಯ ತಲೆ ಕತ್ತರಿಸಿ ಕೊಂದ ತಾಲಿಬಾನ್; ಅಫ್ಘಾನ್ ಮಹಿಳೆಯರಿಗೆ ನರಕ ದರ್ಶನ
ಪಿಸ್ತೂಲ್ ತೋರಿಸಿ ದರೋಡೆ ಮಾಡುತ್ತಿದ್ದ ಇಬ್ಬರ ಬಂಧನ: 2 ಕೆಜಿ ಚಿನ್ನ, 5 ಕೆಜಿ ಬೆಳ್ಳಿ ವಶಕ್ಕೆ