AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ವಾಲಿಬಾಲ್ ಆಟಗಾರ್ತಿಯ ತಲೆ ಕತ್ತರಿಸಿ ಕೊಂದ ತಾಲಿಬಾನ್; ಅಫ್ಘಾನ್​ ಮಹಿಳೆಯರಿಗೆ ನರಕ ದರ್ಶನ

Afghanistan Crisis: ಅಫ್ಘಾನಿಸ್ತಾನದ ರಾಷ್ಟ್ರೀಯ ವಾಲಿಬಾಲ್ ತಂಡದ ಆಟಗಾರ್ತಿಯಾಗಿರುವ ಮಹಾಜಾಬಿನ್ ಹಕೀಮಿ ಎಂಬಾಕೆಯನ್ನು ಅಕ್ಟೋಬರ್ ತಿಂಗಳ ಆರಂಭದಲ್ಲಿ ಹತ್ಯೆ ಮಾಡಲಾಗಿದೆ. ಆದರೆ, ಉಗ್ರರು ಆಕೆಯ ಕುಟುಂಬದವರಿಗೆ ಈ ಬಗ್ಗೆ ಮಾತನಾಡದಂತೆ ಬೆದರಿಕೆ ಹಾಕಿದ್ದರು.

Shocking News: ವಾಲಿಬಾಲ್ ಆಟಗಾರ್ತಿಯ ತಲೆ ಕತ್ತರಿಸಿ ಕೊಂದ ತಾಲಿಬಾನ್; ಅಫ್ಘಾನ್​ ಮಹಿಳೆಯರಿಗೆ ನರಕ ದರ್ಶನ
ತಾಲಿಬಾನ್ ಉಗ್ರರಿಂದ ಕೊಲೆಯಾದ ಅಫ್ಘಾನಿಸ್ತಾನದ ವಾಲಿಬಾಲ್ ಕ್ರೀಡಾಪಟು
TV9 Web
| Edited By: |

Updated on: Oct 21, 2021 | 5:53 PM

Share

ಕಾಬೂಲ್: ಅಫ್ಘಾನಿಸ್ತಾನವನ್ನು (Afghanistan) ತಾಲಿಬಾನ್ ಉಗ್ರರು (Taliban Terrorists) ವಶಪಡಿಸಿಕೊಂಡ ನಂತರ ಅಲ್ಲಿನ ಪರಿಸ್ಥಿತಿಯೇ ಬದಲಾಗಿದೆ. ಅಫ್ಘಾನ್​ನ ಮಹಿಳೆಯರು ಮತ್ತು ಮಕ್ಕಳು ತಾಲಿಬಾನ್ ಸರ್ಕಾರದ ಅಧೀನದಲ್ಲಿ ಬದುಕುವುದು ಕೂಡ ಕಷ್ಟವಾಗಿದೆ. ಮಹಿಳೆಯರು ಮತ್ತು ಹೆಣ್ಣುಮಕ್ಕಳ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಕಿತ್ತುಕೊಂಡಿರುವ ತಾಲಿಬಾನ್ ಉಗ್ರರು ಅವರ ಪಾಲಿಗೆ ದೇಶವನ್ನು ನರಕವಾಗಿಸಿದ್ದಾರೆ. ಇದೀಗ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ರಾಷ್ಟ್ರೀಯ ಮಹಿಳಾ ವಾಲಿಬಾಲ್ ತಂಡದ (Afghanistan Volleyball Team) ಆಟಗಾರ್ತಿಯ ತಲೆ ಕತ್ತರಿಸಿ ಹತ್ಯೆ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ವಾಲಿಬಾಲ್ ತಂಡದ ಕೋಚ್, ರಾಷ್ಟ್ರೀಯ ವಾಲಿಬಾಲ್ ತಂಡದ ಆಟಗಾರ್ತಿಯಾಗಿರುವ ಮಹಾಜಾಬಿನ್ ಹಕೀಮಿ ಎಂಬಾಕೆಯನ್ನು ಅಕ್ಟೋಬರ್ ತಿಂಗಳ ಆರಂಭದಲ್ಲಿ ಹತ್ಯೆ ಮಾಡಲಾಗಿದೆ. ಆದರೆ, ಉಗ್ರರು ಆಕೆಯ ಕುಟುಂಬದವರಿಗೆ ಈ ಬಗ್ಗೆ ಮಾತನಾಡದಂತೆ ಬೆದರಿಕೆ ಹಾಕಿದ್ದರಿಂದ ಯಾರಿಗೂ ಈ ಭೀಕರ ಹತ್ಯೆಯ ಬಗ್ಗೆ ತಿಳಿಯಲಿಲ್ಲ ಎಂದು ತಿಳಿಸಿದ್ದಾರೆ.

ಅಶ್ರಫ್ ಘನಿ ಸರ್ಕಾರದ ಪತನದ ಮೊದಲು ಕಾಜೂಬ್ ಮುನ್ಸಿಪಾಲಿಟಿ ವಾಲಿಬಾಲ್ ಕ್ಲಬ್‌ಗಾಗಿ ಮಹಜಾಬಿನ್ ಆಟವಾಡಿದ್ದರು. ಇವರು ಕ್ಲಬ್​ನ ಸ್ಟಾರ್ ಆಟಗಾರರಲ್ಲಿ ಒಬ್ಬರಾಗಿದ್ದರು. ಆದರೆ, ಕೆಲವು ದಿನಗಳ ಹಿಂದೆ ಮಹಜಾಬಿನ್ ತಲೆ ಕತ್ತರಿಸಿದ ಮತ್ತು ರಕ್ತಸಿಕ್ತವಾದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. ಇದು ಬಹಳ ಚರ್ಚೆಗೆ ಕಾರಣವಾಗಿತ್ತು.

ಆಗಸ್ಟ್​ನಲ್ಲಿ ತಾಲಿಬಾನ್ ಸಂಪೂರ್ಣ ನಿಯಂತ್ರಣ ಸಾಧಿಸುವ ಮುನ್ನ ತಂಡದ ಇಬ್ಬರು ಆಟಗಾರರು ಮಾತ್ರ ದೇಶದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು ಎಂದು ಅಫ್ಘಾನ್ ಮಹಿಳಾ ರಾಷ್ಟ್ರೀಯ ವಾಲಿಬಾಲ್ ತಂಡದ ಕೋಚ್ ಹೇಳಿದ್ದಾರೆ. ಮಹಜಾಬಿನ್ ಹಕೀಮಿ ಅಫ್ಘಾನ್​ನಲ್ಲಿ ಉಳಿದ ಅನೇಕ ಮಹಿಳಾ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದರು. ಅಫ್ಘಾನ್ ದೇಶವನ್ನು ತಾಲಿಬಾನ್ ವಶಕ್ಕೆ ಪಡೆದ ನಂತರ ಮಹಿಳಾ ಕ್ರೀಡಾಪಟುಗಳನ್ನು ಪತ್ತೆಹಚ್ಚಲು ಸಾಕಷ್ಟು ಪ್ರಯತ್ನಿಸಿದೆ. ಈಗಾಗಲೇ ಹಲವು ಕ್ರೀಡಾಪಟುಗಳು ದೇಶ ಬಿಟ್ಟು ಹೋಗಿರುವುದರಿಂದ ಉಗ್ರರ ಕೈಗೆ ಯಾರೂ ಸಿಕ್ಕಿರಲಿಲ್ಲ. ಮಹಜಾಬಿನ್ ಅವರ ಭೀಕರ ಕೊಲೆ ಅಫ್ಘಾನಿಸ್ತಾನದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕಳೆದ ವಾರ, ಫಿಫಾ ಮತ್ತು ಕತಾರ್ ಸರ್ಕಾರವು ಅಫ್ಘಾನಿಸ್ತಾನದಿಂದ ರಾಷ್ಟ್ರೀಯ ಫುಟ್​ಬಾಲ್ ತಂಡದ ಸದಸ್ಯರು ಮತ್ತು ಅವರ ಕುಟುಂಬದ ಸದಸ್ಯರನ್ನು ಒಳಗೊಂಡಂತೆ 100 ಮಹಿಳಾ ಫುಟ್​ಬಾಲ್ ಆಟಗಾರರನ್ನು ಸ್ಥಳಾಂತರಿಸಿತ್ತು. ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ನಂತರ ಕ್ರೀಡೆ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಹಿಳೆಯರು ತೊಡಗಿಸಿಕೊಳ್ಳುವುದು ಸ್ಥಗಿತಗೊಂಡಿವೆ. ಬಹುಪಾಲು ಅಫ್ಘಾನ್ ಹುಡುಗಿಯರು ಮಾಧ್ಯಮಿಕ ಶಾಲೆಗೆ ಹೋಗುವುದನ್ನು ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದ ಕುಂಡುಜ್ ಮಸೀದಿ ಸ್ಫೋಟ: ಕನಿಷ್ಠ 100 ಮಂದಿ ಸಾವು, ಹಲವರಿಗೆ ಗಾಯ

Shocking News: ಇಟ್ಟಿಗೆ ಎಸೆದು ಮನುಷ್ಯನ ಪ್ರಾಣ ತೆಗೆದ ಕೋತಿ!; ದೆಹಲಿಯಲ್ಲೊಂದು ಶಾಕಿಂಗ್ ಘಟನೆ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ