ಅಫ್ಘಾನಿಸ್ತಾನದ ಕುಂಡುಜ್ ಮಸೀದಿ ಸ್ಫೋಟ: ಕನಿಷ್ಠ 100 ಮಂದಿ ಸಾವು, ಹಲವರಿಗೆ ಗಾಯ

Afghanistan "ಇಲ್ಲಿಯವರೆಗೆ ನಮ್ಮ ಆಸ್ಪತ್ರೆಯಲ್ಲಿ 35 ಮೃತ ದೇಹಗಳು ಮತ್ತು 50 ಕ್ಕೂ ಹೆಚ್ಚು ಗಾಯಗೊಂಡ ಜನರನ್ನು ನಾವು ಸ್ವೀಕರಿಸಿದ್ದೇವೆ" ಎಂದು ಹೆಸರು ಹೇಳಲು ಬಯಸದ ಕುಂಡುಜ್ ಸೆಂಟ್ರಲ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಅಫ್ಘಾನಿಸ್ತಾನದ ಕುಂಡುಜ್ ಮಸೀದಿ ಸ್ಫೋಟ: ಕನಿಷ್ಠ 100 ಮಂದಿ ಸಾವು, ಹಲವರಿಗೆ  ಗಾಯ
ಕುಂಡುಜ್ ಮಸೀದಿ ದಾಳಿಯಲ್ಲಿ ಗಾಯಗೊಂಡವರನ್ನು ಸಾಗಿಸುತ್ತಿರುವುದು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Oct 08, 2021 | 6:24 PM

ಕಾಬೂಲ್: ಅಫ್ಘಾನಿಸ್ತಾನದ(Afghanistan)  ಕುಂಡುಜ್ (Kunduz )ನಗರದ ಮಸೀದಿಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ . “ಇಲ್ಲಿಯವರೆಗೆ ನಮ್ಮ ಆಸ್ಪತ್ರೆಯಲ್ಲಿ 35 ಮೃತ ದೇಹಗಳು ಮತ್ತು 50 ಕ್ಕೂ ಹೆಚ್ಚು ಗಾಯಗೊಂಡ ಜನರನ್ನು ನಾವು ಸ್ವೀಕರಿಸಿದ್ದೇವೆ” ಎಂದು ಹೆಸರು ಹೇಳಲು ಬಯಸದ ಕುಂಡುಜ್ ಸೆಂಟ್ರಲ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್ (MSF) ನಡೆಸುತ್ತಿರುವ ಇನ್ನೊಂದು ಆಸ್ಪತ್ರೆ ಕನಿಷ್ಠ 15 ಜನರ ಮೃತದೇಹಗಳನ್ನು ಸ್ವೀಕರಿಸಿದೆ ಎಂದು ಮೂಲಗಳು ತಿಳಿಸಿವೆ. ಕುಂಡುಜ್‌ನಲ್ಲಿ “ನಮ್ಮ ಶಿಯಾ ದೇಶವಾಸಿಗಳ ಮಸೀದಿಯಲ್ಲಿ ಸ್ಫೋಟ ಸಂಭವಿಸಿದಾಗ” ಹಲವಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಜಬಿಹುಲ್ಲಾ ಮುಜಾಹಿದ್  ಹೇಳಿದ್ದರು.

ದಾಳಿಯ ಹೊಣೆಗಾರಿಕೆಯನ್ನು ತಕ್ಷಣವೇ ಹೇಳಿಕೊಳ್ಳಲಾಗಿಲ್ಲ, ಆದರೆ ತಾಲಿಬಾನ್‌ನ ಕಡು ಪ್ರತಿಸ್ಪರ್ಧಿಗಳಾದ ಇಸ್ಲಾಮಿಕ್ ಸ್ಟೇಟ್ ಗುಂಪು ಇದೇ ರೀತಿಯ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಕುಂಡುಜ್‌ನ ನಿವಾಸಿಗಳು ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಶಿಯಾ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಹೇಳಿರುವುದಾಗಿ ಎಎಫ್‌ಪಿ ವರದಿ ಮಾಡಿದೆ.

ರಕ್ತದಾನ ಅಗತ್ಯವಿದೆಯೇ ಎಂದು ಪರೀಕ್ಷಿಸಲು ಕುಂಡುಜ್ ಪ್ರಾಂತೀಯ ಆಸ್ಪತ್ರೆಗೆ ಧಾವಿಸಿದ ಸ್ಥಳೀಯ ಉದ್ಯಮಿ ಜಲ್ಮೈ ಅಲೋಕ್‌ಜಾಯ್ ಭಯಾನಕ ದೃಶ್ಯಗಳನ್ನು ವಿವರಿಸಿದರು. “ನಾನು 40 ಕ್ಕೂ ಹೆಚ್ಚು ಮೃತ ದೇಹಗಳನ್ನು ನೋಡಿದ್ದೇನೆ” ಎಂದು ಅವರು ಎಎಫ್‌ಪಿಗೆ ತಿಳಿಸಿದರು. “ಆಂಬ್ಯುಲೆನ್ಸ್ ಮೃತದೇಹವನ್ನು ಸಾಗಿಸಲು ಘಟನೆ ನಡೆದ ಸ್ಥಳಕ್ಕೆ ಹಿಂತಿರುಗುತ್ತಿತ್ತು ಎಂದು ಅವರು ಹೇಳಿದ್ದಾರೆ.

ನಗರದ ಎಂಎಸ್‌ಎಫ್ ಆಸ್ಪತ್ರೆಯ ಅಂತಾರಾಷ್ಟ್ರೀಯ ಸಹಾಯಕರೊಬ್ಬರು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

“ನೂರಾರು ಜನರು ಆಸ್ಪತ್ರೆಯ ಮುಖ್ಯ ದ್ವಾರದಲ್ಲಿ ಜಮಾಯಿಸಿ ತಮ್ಮ ಸಂಬಂಧಿಕರಿಗಾಗಿ ಅಳುತ್ತಿದ್ದಾರೆ ಆದರೆ ಶಸ್ತ್ರಸಜ್ಜಿತ ತಾಲಿಬಾನ್ ವ್ಯಕ್ತಿಗಳು ಇನ್ನೊಂದು ಸ್ಫೋಟವನ್ನು ನಡೆದರೆ ಎಂಬ ಭಯದಿಂದ ಜನರನ್ನು ಅಲ್ಲಿಂದ ಚದುರಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಅವರು ಹೇಳಿದರು.

ಸ್ಫೋಟ ಸಂಭವಿಸಿದ ಮಸೀದಿ ಪಕ್ಕ  ಹಲವಾರು ರಕ್ತಸಿಕ್ತ ದೇಹಗಳು ನೆಲದ ಮೇಲೆ ಬಿದ್ದಿರುವ ವಿಡಿಯೊ  ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿದೆ. ಇನ್ನೊಂದು ವೀಡಿಯೋದಲ್ಲಿ ಪುರುಷರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಜನರನ್ನು  ಸ್ಥಳದಿಂದ ದೂರ ಹೋಗುವಂತೆನಿರ್ದೇಶಿಸುತ್ತಿರುವುದು ಕಾಣಿಸುತ್ತದೆ. ಗಾಬರಿಗೊಂಡ ಜನಸಮೂಹ ಬೀದಿಗಳಲ್ಲಿ ನೆರೆದಿದೆ. ಕುಂಡುಜ್ ತಜಕಿಸ್ತಾನದೊಂದಿಗಿನ ಆರ್ಥಿಕ ಮತ್ತು ವ್ಯಾಪಾರ ವಿನಿಮಯದ  ಪ್ರಮುಖ ಸಾರಿಗೆ ಕೇಂದ್ರವಾಗಿದೆ.

ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ 5.2 ತೀವ್ರತೆಯ ಭೂಕಂಪ

Published On - 5:54 pm, Fri, 8 October 21