ನೈತಿಕ ಪೊಲೀಸ್ ಗಿರಿ: ಜೈಲಿನಲ್ಲಿರುವ ಬಜರಂಗದಳ ಕಾರ್ಯಕರ್ತರನ್ನು ಭೇಟಿಯಾದ ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದಲ್ಲಿ ಫೆಬ್ರವರಿ 9ರಂದು ಅನ್ಯಕೋಮಿನ ಯುವಕನ ಮೇಲೆ ಹಲ್ಲೆ ಆರೋಪ ಹಿನ್ನೆಲೆ ಜೈಲು ಸೇರಿದ್ದ ಬಜರಂಗದಳ ಕಾರ್ಯಕರ್ತರನ್ನು ಇಂದು ಕೇಂದ್ರ ಸಚಿವೆ ಶೋಭಾ ಭೇಟಿ ಮಾಡಿದ್ದಾರೆ. ನಗರದ ರತ್ನಗಿರಿ ರಸ್ತೆಯಲ್ಲಿರುವ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ತೆರಳಿ ಯೋಗಕ್ಷೇಮ ವಿಚಾರಿಸಿದ್ದಾರೆ. ಜೊತೆಗೆ ಕಾನೂನು ಪ್ರಕ್ರಿಯೆ ಬಗ್ಗೆ ಚರ್ಚೆ ಮಾಡಿದ್ದಾರೆ.

ನೈತಿಕ ಪೊಲೀಸ್ ಗಿರಿ: ಜೈಲಿನಲ್ಲಿರುವ ಬಜರಂಗದಳ ಕಾರ್ಯಕರ್ತರನ್ನು ಭೇಟಿಯಾದ ಶೋಭಾ ಕರಂದ್ಲಾಜೆ
ಜಿಲ್ಲಾ ಕಾರಾಗೃಹಕ್ಕೆ ಶೋಭಾ ಕರಂದ್ಲಾಜೆ ಭೇಟಿ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಗಂಗಾಧರ​ ಬ. ಸಾಬೋಜಿ

Updated on: Feb 26, 2024 | 3:29 PM

ಚಿಕ್ಕಮಗಳೂರು, ಫೆಬ್ರವರಿ 26: ಲವ್ ಜಿಹಾದ್​ ಆರೋಪ ಹಿನ್ನೆಲೆ ಯುವಕನ ಮೇಲೆ ಹಲ್ಲೆ ಕೇಸ್​​ಗೆ ಬಂಧಿಸಿದಂತೆ ​ಹಲ್ಲೆ ಆರೋಪದಡಿ ಜೈಲು ಸೇರಿದ್ದ ಬಜರಂಗದಳ ಕಾರ್ಯಕರ್ತರನ್ನು ಚಿಕ್ಕಮಗಳೂರು ಜಿಲ್ಲಾ ಕಾರಾಗೃಹಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ಜೊತೆಗೆ ಕಾನೂನು ಪ್ರಕ್ರಿಯೆ ಬಗ್ಗೆ ಚರ್ಚೆ ಮಾಡಿದ್ದಾರೆ. ಫೆಬ್ರವರಿ 9ರಂದು ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದಲ್ಲಿ ಅನ್ಯಕೋಮಿನ ಯುವಕನ ಮೇಲೆ ಹಿಂದೂ ಕಾರ್ಯಕರ್ತರಿಂದ ನೈತಿಕ ಪೊಲೀಸ್‌ಗಿರಿ ಮಾಡಲಾಗಿದೆ ಎಂದು ಆರೋಪ ಮಾಡಲಾಗಿತ್ತು. ಈ ಹಿನ್ನೆಲೆ ಬಜರಂಗದಳ ಜಿಲ್ಲಾ ಸಂಚಾಲಕ ಸೇರಿದಂತೆ 7 ಜನರ ಬಂಧನವಾಗಿತ್ತು.

307 ಪ್ರಕರಣ ದಾಖಲಾಗಿತ್ತು. ಹಿಂದೂ ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸ್ ದಾಖಲಿಸಿರುವ ಆರೋಪ ಕೇಳಿ ಬಂದಿತ್ತು. ಏಳು ಮಂದಿ ಹಿಂದೂ ಸಂಘಟಕರಿಗೆ JMFC ಕೋರ್ಟ್ ನ್ಯಾಯಂಗ ಬಂಧನ ವಿಧಿಸಿತ್ತು.

ಹಾವೇರಿ ಜಿಲ್ಲೆಯಲ್ಲಿ ಮೊತ್ತೊಂದು ನೈತಿಕ ಪೊಲೀಸ್ ಗಿರಿ

ಹಾವೇರಿ: ಜಿಲ್ಲೆಯಲ್ಲಿ ಇತ್ತೀಚೆಗೆ ಮೊತ್ತೊಂದು ನೈತಿಕ ಪೊಲೀಸ್ ಗಿರಿ ನಡೆದಿತ್ತು. ಹಿಂದು ಯುವಕನ ಜೊತೆ ಮಾತನಾಡುತ್ತಾ ನಿಂತಿದ್ದಕ್ಕೆ ಅನ್ಯಕೋಮಿನ ಯುವತಿಯನ್ನು ಯುವಕರ ಗ್ಯಾಂಗ್ ಹಲ್ಲೆ ನಡೆಸಿತ್ತು. ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ಮೊತ್ತೊಂದು ನೈತಿಕ ಪೊಲೀಸ್ ಗಿರಿ ನಡೆದಿತ್ತು.

ಇದನ್ನೂ ಓದಿ: ಮಂಗಳೂರಿನಲ್ಲಿ ಯುವತಿ ನಾಪತ್ತೆ ಪ್ರಕರಣ: ಬಜರಂಗದಳ ದಾಳಿಗೆ ಹೆದರಿ ನಾಪತ್ತೆಯಾಗಿರುವ ಅನುಮಾನ

ಮುಸ್ಲಿಂ ಯುವತಿ ಹಿಂದು ಯುವಕನ ಜೊತೆ ನಗರದ ಶಿವನ ದೇವಸ್ಥಾನದ ಹತ್ತಿರ ಮಾತನಾಡುತ್ತಾ ನಿತ್ತಿದ್ದು ಕಂಡ 9 ಜನರ ಗ್ಯಾಂಗ್ ಏಕಾ ಏಕಿ ದಾಳಿ ನಡೆಸಿ ಯುವತಿಯನ್ನು ಎಳೆದಾಡಿ ಯುವಕ ಮತ್ತು ಯುವತಿ ಮೇಲೆ ಹಲ್ಲೆ ನಡೆಸಿದ್ದರು. ಈ ಕುರಿತು ಯುವತಿ ಬ್ಯಾಡಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, 7 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಕಲಬುರಗಿಗೆ ಕಾಲಿಟ್ಟಿದೆ ನೈತಿಕ ಪೊಲೀಸ್ ಗಿರಿ

ಕಲಬುರಗಿ: ಅನ್ಯ ಕೋಮಿನ ಮಹಿಳೆಯನ್ನು ಬೈಕ್ ಮೇಲೆ ಕರೆದುಕೊಂಡು ಹೋದ ವ್ಯಕ್ತಿಯನ್ನು ಥಳಿಸಿರೋ ಘಟನೆ ಇತ್ತೀಚೆಗೆ ಜಿಲ್ಲೆಯ ಜೇವರ್ಗಿ ತಾಲೂಕಿನ ಚಿಗರಳ್ಳಿ ಬಳಿ ನಡೆದಿತ್ತು. ಜೇವರ್ಗಿ ತಾಲೂಕಿನ ವರವಿ ಗ್ರಾಮದ ವ್ಯಕ್ತಿಯನ್ನು ಹಿಡಿದು, ಜುಲೈ 15 ರಂದು ಅನ್ಯ ಕೋಮಿನ ಮೂರ್ನಾಲ್ಕು ಯುವಕರು ಥಳಿಸಿದ್ದರು.

ಇದನ್ನೂ ಓದಿ: ಮಂಗಳೂರಿನಲ್ಲಿ ಯುವತಿ ನಾಪತ್ತೆ ಪ್ರಕರಣದ ಹಿಂದೆ ಲವ್ ಜಿಹಾದ್ ಶಂಕೆ

ಪರಿಚಿತ ಅನ್ಯ ಕೋಮಿನ ಮಹಿಳೆಯನ್ನು ಡ್ರಾಪ್ ನೀಡಲು ಬೈಕ್ ಮೇಲೆ ಕರೆದುಕೊಂಡು ಹೋಗುತ್ತಿದ್ದ. ಈ ಸಂದರ್ಭದಲ್ಲಿ ಬೈಕ್ ಅಡ್ಡಗಟ್ಟಿದ್ದ ಮೂರ್ನಾಲ್ಕು ಯುವಕರು ಹಲ್ಲೆ ಮಾಡಿದ್ದರು. ಅಸ್ವಸ್ಥ ಯುವಕನನ್ನು ಮಹರಾಷ್ಟ್ರದ ಸೊಲ್ಲಾಪುರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ಬಗ್ಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮತ್ತಷ್ಟು ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.