ಚಿಕ್ಕಮಗಳೂರಿನಲ್ಲಿ ಯಾವುದೇ ಶಂಕಿತರನ್ನ ಬಂಧಿಸಿಲ್ಲ, ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ: ಎಸ್ಪಿ ಉಮಾ ಪ್ರಶಾಂತ್​

ಶಂಕಿತ ಉಗ್ರರಿಗೂ ಚಿಕ್ಕಮಗಳೂರಿನಲ್ಲಿ ಬಂಧಿಸಿದವರಿಗೂ ಸಂಬಂಧವಿಲ್ಲ. ಸುಳ್ಳು ಸುದ್ದಿಯನ್ನ ಹಬ್ಬಿಸುವ ಕೆಲಸ ನಡೆಯುತ್ತಿದೆ. ಅಂತವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್​ ಮಾಹಿತಿ ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಯಾವುದೇ ಶಂಕಿತರನ್ನ ಬಂಧಿಸಿಲ್ಲ, ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ: ಎಸ್ಪಿ ಉಮಾ ಪ್ರಶಾಂತ್​
ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Jul 20, 2023 | 4:30 PM

ಚಿಕ್ಕಮಗಳೂರು, ಜುಲೈ 20: ಶಂಕಿತ ಉಗ್ರರಿಗೂ ಚಿಕ್ಕಮಗಳೂರಿನಲ್ಲಿ ಬಂಧಿಸಿದವರಿಗೂ ಸಂಬಂಧವಿಲ್ಲ ಎಂದು ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ (Uma Prashanth)​ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಸುಳ್ಳು ಸುದ್ದಿಯನ್ನ ಹಬ್ಬಿಸುವ ಕೆಲಸ ನಡೆಯುತ್ತಿದೆ. ಅಂತವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಉನ್ನತ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎಂದರು.

ಶಂಕಿತ ಉಗ್ರರ ಬಂಧನಕ್ಕೂ ಚಿಕ್ಕಮಗಳೂರಿನಲ್ಲಿ ಬಂಧನವಾದ ಇಬ್ಬರಿಗೂ ಸಂಬಂಧವಿಲ್ಲ. ಬೇರೆ ಪ್ರಕರಣ ಸಂಬಂಧಿಸಿದಂತೆ ಇಬ್ಬರನ್ನ ಬೆಂಗಳೂರಿನ ಸಿಸಿಬಿ ಬಂಧನ ಮಾಡಿದೆ. ಇಲ್ಲಿಯವರೆಗೂ ಯಾವುದೇ ಶಂಕಿತ ಉಗ್ರರನ್ನ ಚಿಕ್ಕಮಗಳೂರಿನಲ್ಲಿ ಬಂಧನ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಂಧಿತ ಶಂಕಿತ ಭಯೋತ್ಪಾದಕರು 7 ದಿನ ಸಿಸಿಬಿ ವಶಕ್ಕೆ: ರಾಜ್ಯದೆಲ್ಲೆಡೆ ಹೈ ಅಲರ್ಟ್

ಡಕಾಯಿತಿ ಪ್ರಕರಣ ಸಂಬಂಧ ಜುಲೈ 16ರಂದು ಬೆಂಗಳೂರು ಪೊಲೀಸರಿಂದ ಮಹಿಳೆ ಸೇರಿ ಇಬ್ಬರ ಬಂಧನ ಮಾಡಲಾಗಿತ್ತು. ಬೆಂಗಳೂರು ಮೂಲದ ಮಹಿಳೆ ಸೈಯದಾ, ಖಾಲಿದ್ ಬಂಧಿತರು. ಚಿಕ್ಕಮಗಳೂರಿನ ಕೈಮರ ಚೆಕ್​ಪೋಸ್ಟ್​ ಬಳಿ ಕುರುವಂಜಿ ಹೋಂ ಸ್ಟೇನಲ್ಲಿ ಸೆರೆ ಹಿಡಿದು ಪೊಲೀಸರು ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂದು ಉಮಾ ಪ್ರಶಾಂತ್​ ಹೇಳಿದರು.

ದಾವಣಗೆರೆ ಮೂಲದ ಫಯಾಜ್​ವುಲ್ಲಾನನ್ನು ವಶಕ್ಕೆ ಪಡೆದ ಸಿಸಿಬಿ

ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ ಬಂಧನವಾದ ಹಿನ್ನೆಲೆ, ದಾವಣಗೆರೆ ಮೂಲದ ಫಯಾಜ್​ವುಲ್ಲಾನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು ಸಂಶಯಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಫಯಾಜ್​ ವಿರುದ್ಧ 5 ಪ್ರಕರಣ ದಾಖಲಾಗಿತ್ತು. ಆಯುಧ ಮಾರಾಟ ವಿಚಾರವಾಗಿ ಫಯಾಜ್​ ವಿರುದ್ಧ ಪ್ರಕರಣ ದಾಖಲಾಗಿದ್ದು, ಸದ್ಯ ಜಾಮೀನು ಮೇಲೆ ಹೊರಗಿದ್ದ. ಈಗ ಮತ್ತೆ ವಶಕ್ಕೆ ಪಡೆದು ಸಿಸಿಬಿ ತಂಡ ತನಿಖೆಗೆ ಮುಂದಾಗಿದೆ.

ಇದನ್ನೂ ಓದಿ: 2008ರ ಬೆಂಗಳೂರು ಸರಣಿ ಸ್ಪೋಟದ ರುವಾರಿ ನಾಸೀರ್​ನ ಮತ್ತೊಂದು ಸಂಚು ಬಯಲು

ವಿಜಯಪುರದಲ್ಲಿ ಕಟ್ಟೆಚ್ಚರ 

ಐವರು ಶಂಕಿತ ಉಗ್ರರ ಬಂಧನದಿಂದಾಗಿ ರಾಜ್ಯದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ  ಪೊಲೀಸ್ ಇಲಾಖೆ ಅಲರ್ಟ್​ ಆಗಿದ್ದು, ರೈಲು ನಿಲ್ದಾಣದಲ್ಲಿ ಬಾಂಬ್ ಪತ್ತೆ ದಳ, ಶ್ವಾನದಳದಿಂದ ತಪಾಸಣೆ ಮಾಡಿದೆ. ಜೊತೆಗೆ ರೈಲ್ವೆ ಪ್ರಯಾಣಿಕರ ಬ್ಯಾಗ್‌ಗಳನ್ನು ಸಹ ಪರಿಶೀಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:30 pm, Thu, 20 July 23

ತಾಜಾ ಸುದ್ದಿ