ಚಿಕ್ಕಮಗಳೂರು: ಮಳೆನಾಡು ಎಂದೇ ಖ್ಯಾತಿ ಪಡೆದಿರುವ ಚಿಕ್ಕಮಗಳೂರು(Chikkamagaluru) ಜಿಲ್ಲೆಯಲ್ಲಿ ಈ ವರ್ಷ ವರುಣ ದೈವ ಕಣ್ಣ ಮುಚ್ಚಾಲೆ ಆಟವಾಡ ತೊಡಗಿದ್ದಾನೆ. 30 ವರ್ಷದ ಬಳಿಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿದ್ದು, ಮಳೆ ಇಲ್ಲದೆ ಕಾಫಿನಾಡಿನ ಜನತೆ ಕಂಗೆಟ್ಟು ಹೋಗಿದ್ದಾರೆ. ಪ್ರತಿ ವರ್ಷ ಜಿಲ್ಲೆಯಲ್ಲಿ, ಜೂನ್ ವರೆಗೂ ಆಗುತ್ತಿದ್ದ ವಾಡಿಕೆ ಮಳೆಯಲ್ಲಿ 30% ರಷ್ಟು ಮಳೆ ಮಾತ್ರ ಆಗಿದ್ದು, ಈ ಭಾಗದ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನಲೆ ಮಳೆನಾಡಿನಲ್ಲಿ ಮಳೆಗಾಗಿ ಶಕ್ತಿ ದೇವತೆ ಸನ್ನಿಧಿಯಾದ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.
ಜುಲೈ ಮೊದಲ ವಾರದಿಂದ ವರುಣನ ಕೃಪೆಗಾಗಿ ಹೋಮ ಹವನ
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪ್ರತಿ ವರ್ಷ ಸುರಿಯಬೇಕಿದ್ದ ವಾಡಿಕೆ ಮಳೆಯ ಪ್ರಮಾಣದಲ್ಲಿ ಈ ವರ್ಷ ಜೂನ್ ತಿಂಗಳ ಕೊನೆಯಾದ್ರು, ಶೇಕಡ 30% ರಷ್ಟು ಮಳೆಯಾಗಿದೆ. ರಾಜ್ಯಾದ್ಯಂತ ವರುಣ ಮುನಿಸಿಕೊಂಡಿದ್ದು, ಕೃಪೆ ತೋರುತ್ತಿಲ್ಲ. ಇದರಿಂದ ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಮಳೆಗಾಗಿ ಪ್ರತಿ ನಿತ್ಯ ವಿಶೇಷ ಪೂಜೆಯನ್ನ ಮಾಡುತ್ತಿದ್ದು, ಜುಲೈ ಮೊದಲ ವಾರ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಮಳೆಗಾಗಿ ವಿಶೇಷ ಹೋಮ ಹವನ ನಡೆಯಲಿದೆ.
ರಾಜ್ಯಾದ್ಯಂತ ಮುನಿಸಿಕೊಂಡ ವರುಣ
ಇನ್ನು ರಾಜ್ಯಾದ್ಯಂತ ವರುಣ ಮುನಿಸಿಕೊಂಡಿದ್ದು, ಮಳೆಗಾಗಿ ರಾಜ್ಯದ ಜನತೆ ಕಾದು ಕುಳಿತಿದ್ದು ದೇವರ ಮೊರೆ ಹೋಗಿದ್ದಾರೆ .ರಾಜ್ಯದಲ್ಲಿ ಜಲಕ್ಷಾಮದ ಆತಂಕ ಎದುರಾಗಿದ್ದು . ಮಳೆಗಾಗಿ ಶಕ್ತಿ ದೇವತೆಗಳ ಸನ್ನಿಧಿಯಲ್ಲಿ ನಡೆಯುತ್ತಿರುವ ವಿಶೇಷ ಪೂಜೆ ,ಹೋಮಗಳು ವರುಣ ದೈವದ ಕೋಪವನ್ನ ತಣಿಸಿ ಮಳೆ ಸುರಿಸುವಂತೆ ಮಾಡುತ್ತಾ ಕಾದುನೋಡಬೇಕಿದೆ…
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
.