ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ನಿರ್ಬಂಧ; ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶ

ಬೆಳಗ್ಗೆ 6 ರಿಂದ 9 ಗಂಟೆವರೆಗೆ 150 ವಾಹನ, 600 ಪ್ರವಾಸಿಗರು ಮತ್ತು ಮಧ್ಯಾಹ್ನ 2 ರಿಂದ 4ರವರೆಗೆ 150 ವಾಹನ, 600 ಪ್ರವಾಸಿಗರು ಎಂದು ನಿಗದಿ ಪಡಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶ ಹೊರಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ನಿರ್ಬಂಧ; ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶ
ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ನಿರ್ಬಂಧ
Follow us
TV9 Web
| Updated By: preethi shettigar

Updated on:Aug 14, 2021 | 1:09 PM

ಚಿಕ್ಕಮಗಳೂರು: ಮುಳ್ಳಯ್ಯನಗಿರಿಗೆ ದಿನಕ್ಕೆ 1200 ಪ್ರವಾಸಿಗರಿಗಷ್ಟೇ ಅವಕಾಶ ನೀಡಲಾಗಿದ್ದು, 300 ವಾಹನಗಳು ಮಾತ್ರ ಬರಲು ಕ್ರಮ ತೆಗೆದುಕೊಳ್ಳಲಾಗಿದೆ. ಅಲ್ಲದೆ ಚಿಕ್ಕಮಗಳೂರು ಜಿಲ್ಲೆಯ ಇತರೆ ಪ್ರವಾಸಿ ತಾಣಕ್ಕೂ(Tourist Spot) ನಿಯಮಿತ ಸಂಖ್ಯೆಯಲ್ಲಿ ಮಾತ್ರ ಪ್ರವಾಸಿಗರು ಬರಲು ಅವಕಾಶ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಎಂದು ತಿಳಿಸಿದ್ದಾರೆ.

ಬೆಳಗ್ಗೆ 6 ರಿಂದ 9ಗಂಟೆವರೆಗೆ 150 ವಾಹನ, 600 ಪ್ರವಾಸಿಗರು ಮತ್ತು ಮಧ್ಯಾಹ್ನ 2 ರಿಂದ 4ರವರೆಗೆ 150 ವಾಹನ, 600 ಪ್ರವಾಸಿಗರು ಎಂದು ನಿಗದಿ ಪಡಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶ ಹೊರಡಿಸಿದ್ದಾರೆ.

ಕಳೆದೊಂದು ತಿಂಗಳಲ್ಲಿ ಮುಳ್ಳಯ್ಯನಗಿರಿಗೆ 87 ಸಾವಿರ ಪ್ರವಾಸಿಗರು ಬಂದಿದ್ದರು. ಹೀಗಾಗಿ ಕೊರೊನಾ ಹೆಚ್ಚುತ್ತಿರುವ ಸಮಯವನ್ನು ಗಣನೆಗೆ ತೆಗೆದುಕೊಂಡು ಪ್ರವಾಸಿಗರನ್ನು ನಿರ್ಬಂಧಿಸಲು ಜಿಲ್ಲಾಡಳಿತ ಆಗ್ರಹಿಸಿದೆ.

mullayanagiri

ಮುಳ್ಳಯ್ಯನಗಿರಿಗೆ ದಿನಕ್ಕೆ 1200 ಪ್ರವಾಸಿಗರಿಗಷ್ಟೇ ಅವಕಾಶ

ಚಿಕ್ಕಮಗಳೂರು:ಅಯ್ಯನಕೆರೆಯಲ್ಲಿ ಎಂಜಾಯ್ ಮಾಡುತ್ತಿರುವ ಪ್ರವಾಸಿಗರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ಐತಿಹಾಸಿಕ ಅಯ್ಯನಕೆರೆ. 100 ಎಕರೆಗೂ ಹೆಚ್ಚಿನ ವಿಸ್ತಿರ್ಣವುಳ್ಳ ಕೆರೆ. ಅಂದಾಜು 5 ರಿಂದ 6 ಸಾವಿರ ಹೆಕ್ಟೇರ್ ನೀರಾವರಿ ಕಲ್ಪಿಸೋ ಜೀವನಾಡಿ. ಮಲೆನಾಡಿನ ಮಳೆ ಅಬ್ಬರಕ್ಕೆ ಕಳೆದ ಮೂರ್ನಾಲ್ಕು ದಿನಗಳಿಂದ ಆಕರ್ಷಣೆಯ ಕೇಂದ್ರ ಬಿಂದುವಾಗಿ ಪ್ರವಾಸಿ ತಾಣವಾಗಿದೆ. ಅಲ್ದೆ, ಏಳು ಗುಡ್ಡಗಳ ಮಧ್ಯೆ ಇರೋ ಈ ಕೆರೆ ಕೋಡಿ ಬಿದ್ದಿರೋದ್ರಿಂದ, ನೀರಿನ ಸೌಂದರ್ಯ ಸವಿಯಲು ಪ್ರವಾಸಿಗರ ದಂಡೇ ಹರಿದು ಬರ್ತಿದೆ. ಅಲ್ಲದೆ, ಕೆರೆ ತುಂಬಿ ಹರಿಯುತ್ತಿರುವುದರಿಂದ ಈ ಭಾಗದ ರೈತರು, ಜನಸಾಮಾನ್ಯರಿಗಂತೂ ಸಂಭ್ರಮವೋ ಸಂಭ್ರಮ.

ಇನ್ನು, ಚಂದ್ರದ್ರೋಣ ಪರ್ವತ ಶ್ರೇಣಿಗೆ ಭೇಟಿ ನೀಡೋ ಪ್ರವಾಸಿಗರು ಇಲ್ಲಿಗೂ ಭೇಟಿ ನೀಡಿ ಕಾಲ ಕಳೀತಾರೆ. ಅದ್ರಲ್ಲೂ ಇಲ್ಲಿ ಯುವಕ-ಯುವತಿಯರು, ಪ್ರೇಮಿಗಳ ಸಂಖ್ಯೆಯೇ ಹೆಚ್ಚು. ವೀಕೆಂಡ್‍ನಲ್ಲಿ ಇಲ್ಲಿಗೆ ಆಗಮಿಸೋ ಪ್ರವಾಸಿಗರು ದಿನವಿಡೀ ಕೆರೆ ಬಳಿ ಕುಣಿದು ಕುಪ್ಪಳಿಸ್ತಾರೆ. ಮತ್ತೊಂದೆಡೆ ಸಾಹಸಿ ಈಜುಪಟುಗಳು ಹತ್ತಾರು ಅಡಿ ಆಳವಿರೋ ಕೆರೆಯಲ್ಲಿ ತಮ್ಮ ಸಾಹಸವನ್ನ ತೋರಿಸ್ತಾರೆ. ಇಷ್ಟೇ ಅಲ್ಲ, ಇಲ್ಲಿ ಹರಿಯೋ ನೀರು ಕಡೂರು ತಾಲೂಕಿನ ಬಹುತೇಕ ಭಾಗಕ್ಕೆ ಕುಡಿಯೋ ನೀರಿನ ಸೌಲಭ್ಯ ಕಲ್ಪಿಸಿದೆ. ಇಲ್ಲಿನ ಊರುಕಾಲುವೆ, ಬಸವನಕಾಲುವೆ, ಕಡೇ ಕಾಲುವೆ, ಗೌರಿ ಹಳ್ಳಿ ನಾಲ್ಕು ಕಾಲುವೆಗಳಾಗಿ ಹರಿಯೋ ನೀರು ಸಾವಿರಾರು ಜನರಿಗೆ ಬದುಕುವ ಚೈತನ್ಯ ತಂದಿದೆ.

ಸದ್ಯ, ಪ್ರವಾಸಿ ತಾಣವಾಗಿರೋ ಈ ಸ್ಥಳ, ಪ್ರವಾಸಿಗರನ್ನ ಕೈ ಬಿಸಿ ಕರೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಕೆರೆಯ ಸೌಂದರ್ಯದ ರಾಶಿ ಕೂಡ ಕಣ್ಣಲ್ಲಿ ಕಟ್ಟುವಂತಿದೆ. ಈಗಾಗಲೇ ಅಯ್ಯನಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗ್ತಿದ್ದು, ಪ್ರವಾಸಿಗರಿಗೆ ಮತ್ತಷ್ಟು ಕಿಕ್ ಕೊಡುತ್ತಿದೆ.

ಇದನ್ನೂ ಓದಿ: ಲಾಕ್​ಡೌನ್ ನಿಂದ ಹೆಚ್ಚಾಯ್ತು ‘ಭೂಲೋಕದ ಸ್ವರ್ಗ’ ಮುಳ್ಳಯ್ಯನಗಿರಿಯ ಸೊಬಗು!

Wow!.. ಭಾರಿ ಮಳೆಗೆ ಭೋರ್ಗರೆದು ಧುಮ್ಮಿಕ್ಕುತ್ತಿದೆ ಕಾಫಿನಾಡಿನ ಪ್ರಸಿದ್ಧ ಕಲ್ಲತ್ತಿಗಿರಿ ಜಲಪಾತ

Published On - 1:00 pm, Sat, 14 August 21