ಶೃಂಗೇರಿ ಅಪ್ರಾಪ್ತೆ ಅತ್ಯಾಚಾರ ಪ್ರಕರಣ; ಹಣಕ್ಕಾಗಿ ಮಗಳ ಮಾನವನ್ನೇ ಕಾಮುಕರಿಗೆ ಬಲಿ ಕೊಟ್ಟದ್ದು ಚಿಕ್ಕಮ್ಮ ಅಲ್ಲ ಹೆತ್ತ ತಾಯಿ

ಶೃಂಗೇರಿ ಅಪ್ರಾಪ್ತೆ ಅತ್ಯಾಚಾರ ಪ್ರಕರಣ; ಹಣಕ್ಕಾಗಿ ಮಗಳ ಮಾನವನ್ನೇ ಕಾಮುಕರಿಗೆ ಬಲಿ ಕೊಟ್ಟದ್ದು ಚಿಕ್ಕಮ್ಮ ಅಲ್ಲ ಹೆತ್ತ ತಾಯಿ
ಸಂತ್ರಸ್ತೆ ಬಾಲಕಿಯ ಹೆತ್ತಮ್ಮ

ಚಿಕ್ಕಮಗಳೂರಿನಲ್ಲಿ 2 ತಿಂಗಳ ಹಿಂದೆ ಬೆಳಕಿಗೆ ಬಂದಿದ್ದ ಅತ್ಯಾಚಾರ ಪ್ರಕರಣದಿಂದ ಸಮಾಜ ತಲೆ ತಗ್ಗಿಸುವಂತಾಗಿತ್ತು. ಅಪ್ರಾಪ್ತೆಯನ್ನು ಕಾಮುಕರು ಹುರಿದು ಮುಕ್ಕಿದ್ರು ಅನ್ನೋ ವಿಚಾರವಂತೂ ಬೆಚ್ಚಿ ಬೀಳಿಸಿತ್ತು. ಸದ್ಯ ತನಿಖೆಯ ಆಳಕ್ಕೆ ಇಳಿದ ಪೊಲೀಸರಿಗೆ ಮತ್ತೊಂದು ಸ್ಫೋಟಕ ಮಾಹಿತಿ ಲಭ್ಯವಾಗಿದೆ.

Ayesha Banu

|

Mar 25, 2021 | 8:06 AM

ಚಿಕ್ಕಮಗಳೂರಿನಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಸ್ಫೋಟಕ ವಿಚಾರ ಬಯಲಾಗಿದೆ. ಸದ್ಯ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇಂತಹ ಮಾಹಿತಿ ಸಿಕ್ಕಿದೆ. ಅಷ್ಟಕ್ಕೂ ಬಾಲಕಿ ಕಾಮಪಿಪಾಸುಗಳ ಬಲೆಗೆ ಬೀಳಲು ಕಾರಣವಾಗಿದ್ದು ಆಕೆಯ ತಾಯಿಯೇ ಅನ್ನೋದು ಸ್ವತಃ ಪೊಲೀಸರನ್ನೇ ದಂಗು ಬಡಿಸಿದೆ.

ಅಷ್ಟಕ್ಕೂ ಸತತ 5 ತಿಂಗಳಿಂದ ಒಂದು ವಿಡಿಯೋ ಇಟ್ಕೊಂಡು ಆ ಬಾಲಕಿಯೊಬ್ಬಳನ್ನ ಬ್ಲಾಕ್ ಮೇಲ್ ಮಾಡಿ ಕಾಮದಾಹ ತೀರಿಸಿಕೊಂಡಿದ್ದರು ಕಿರಾತಕರು. ಮೊದಲು ಈ ವಿಚಾರ ಗೊತ್ತಿದ್ದರೂ ಕಾಂಚಾಣದ ಆಸೆಗೆ ಪ್ರಕರಣವನ್ನ ಮುಚ್ಚಿ ಹಾಕೋ ಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಆದ್ರೆ ಯಾವುದೇ ರಾಜಿಗೆ ಬಗ್ಗದೇ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ದೂರು ದಾಖಲಿಸಿದ್ರು. ಪ್ರಕರಣದ ತನಿಖಾಧಿಕಾರಿಯಾಗಿದ್ದ ಸರ್ಕಲ್ ಇನ್ಸ್​ಪೆಕ್ಟರ್ ಕರ್ತವ್ಯ ಲೋಪ ಎಸಗಿರೋದು ಕಂಡುಬಂದ ಹಿನ್ನೆಲೆಯಲ್ಲಿ ಸಸ್ಪೆಂಡ್ ಮಾಡಲಾಯ್ತು.. ಇನ್ನೂ ಸಬ್ ಇನ್ಸ್ ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದವರನ್ನ ಬೇರೆಡೆಗೆ ವರ್ಗಾವಣೆ ಮಾಡಲಾಯ್ತು.

ಚಿಕ್ಕಮ್ಮ ಅಲ್ಲ ಅಮ್ಮ ಆಗ ತನಿಖೆ ಹೆಚ್ಚುವರಿ ಪೊಲೀಸ್ ಅಧಿಕಾರಿ ಹೆಗಲೇರಿತ್ತು. ಮೊದಲಿಗೆ ಬಾಲಕಿ ಚಿಕ್ಕಮ್ಮ ಅಂತಾ ಹೇಳಿಕೊಂಡಿದ್ದ ಮಹಿಳೆ ಈ ನೀಚಕೃತ್ಯದ ರೂವಾರಿ ಅನ್ನೋದು ಗೊತ್ತಾಯಿತು. ಹಣದಾಸೆಗೆ ಬಾಲಕಿಯನ್ನ ಹೆದರಿಸಿ, ಕಾಮ ಕ್ರೌಯಕ್ಕೆ ದೂಡಿ, ಲಕ್ಷಗಟ್ಟಲೇ ಹಣ ಪಡೆದಿರೋದು ತನಿಖೆಯಿಂದ ಗೊತ್ತಾಯಿತು. ಇದೀಗ ಚಿಕ್ಕಮ್ಮ ಅಂತಾ ಹೇಳಿಕೊಂಡಿದ್ದ ಮಹಿಳೆ ನಿಜಕ್ಕೂ ಬಾಲಕಿಯ ಚಿಕ್ಕಮ್ಮ ಅಲ್ಲ ಅವಳು ಸಂತ್ರಸ್ತೆಯ ಹೆತ್ತಮ್ಮ ಅನ್ನೋ ಸತ್ಯ ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ.

ಹಾವೇರಿ ಜಿಲ್ಲೆ ಮೂಲದವರಾಗಿರೋ ಮಹಿಳೆ ಅಲ್ಲೇ ಮದುವೆಯಾಗಿದ್ದಳು. ಆಗ ಜನಿಸಿದ ಮಗುವೇ ಇದೀಗ ಅತ್ಯಾಚಾರಕ್ಕೆ ಒಳಗಾದ ಬಾಲಕಿ. ಬಳಿಕ ಗಂಡನನ್ನು ಬಿಟ್ಟು ಶೃಂಗೇರಿಗೆ ಬಂದ ಮಹಿಳೆ ಮತ್ತೊಂದು ಮದುವೆಯಾದ್ಳು. ಈ ವೇಳೆ ತನಗೆ ಮಗು ಇದೆ ಅನ್ನೋ ವಿಚಾರವನ್ನ ಎಲ್ಲೂ ಕೂಡ ಬಾಯಿ ಬಿಟ್ಟಿರಲಿಲ್ಲ. ಕೊನೆಗೆ ಎರಡನೇ ಗಂಡನನ್ನ ಕೂಡ ಬಿಟ್ಟು ಬಾಲಕಿ ಜೊತೆ ಪತ್ಯೇಕವಾಗಿ ವಾಸ ಮಾಡತೊಡಗಿದ್ಳು. ಈ ವೇಳೆ ಪ್ರಮುಖ ಆರೋಪಿಗಳಾಗಿರೋ ಅಭಿ, ಯೋಗೇಶ್ ಜೊತೆ ಸೇರಿ ಮಗಳ ನಗ್ನ ವಿಡಿಯೋ ಮಾಡಿಟ್ಟುಕೊಂಡು ಸತತ ಅತ್ಯಾಚಾರದ ಕೂಪಕ್ಕೆ ತಳ್ಳಿದ್ದಳು ಎನ್ನಲಾಗಿದೆ. ಹೀಗೆ ಬಾಲಕಿ ಮೇಲೆ ಎರಗಿದ ಬರೋಬ್ಬರಿ 32 ಮಂದಿಯನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಒಟ್ನಲ್ಲಿ ಮಗಳ ಬಾಳು ಹಸನಾಗಿಸಲು ಶ್ರಮಿಸಬೇಕಿದ್ದ ತಾಯಿಯೇ ಇಂತಹ ನೀಚ ಕೃತ್ಯ ಎಸಗಿರುವುದು ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ. ಮೊದಲೇ ಅಪ್ಪನನ್ನ ಕಳೆದುಕೊಂಡಿದ್ದ ಬಾಲಕಿ ಈಗ ಅಮ್ಮನಿಂದ್ಲೂ ದೂರವಾಗಿ ಬದುಕಬೇಕಾಗಿ ಬಂದಿದ್ದು ಮಾತ್ರ ವಿಪರ್ಯಾಸ.

ಇದನ್ನೂ ಓದಿ: ಶೃಂಗೇರಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ; ಮತ್ತೆ ಐವರು ಆರೋಪಿಗಳ ಬಂಧನ

ಅಪ್ರಾಪ್ತೆ ಮೇಲೆ ಸರಣಿ ಅತ್ಯಾಚಾರ; ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಧರಣಿ

Follow us on

Related Stories

Most Read Stories

Click on your DTH Provider to Add TV9 Kannada