ಚಿಕ್ಕಮಗಳೂರು: ಮರಕ್ಕೆ ಕಾರು ಡಿಕ್ಕಿಯಾಗಿ ದಂಪತಿ (Couple) ಸ್ಥಳದಲ್ಲೇ ಮೃತಪಟ್ಟಿದ್ದು, ಮಕ್ಕಳಿಬ್ಬರಿಗೆ ಗಾಯಗಳಾಗಿರುವಂತಹ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಬೆಟ್ಟದತಾವರೆಕೆರೆ ಗ್ರಾಮದ ಬಳಿ ನಡೆದಿದೆ. ಶ್ರೀನಿವಾಸ್, ಪತ್ನಿ ಶ್ವೇತಾ ಮೃತರು. ಮಕ್ಕಳಿಬ್ಬರಿಗೆ ಗಂಭೀರ ಗಾಯವಾಗಿದ್ದು, ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬೆಂಗಳೂರಿನಿಂದ ಕಾರಿನಲ್ಲಿ ಭದ್ರಾವತಿಗೆ ಕುಟುಂಬ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಮರಕ್ಕೆ ಕಾರು ಡಿಕ್ಕಿ ಆಗಿದೆ. ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಟಿಪ್ಪರ್ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಕಲಬುರಗಿ ನಗರದ ಉದನೂರು ಕ್ರಾಸ್ ಬಳಿ ನಡೆದಿದೆ. ರಾಣೋಜಿ ವಾಡಿ(42), ಪತ್ನಿ ರೇಣುಕಾ(35) ಮೃತರು. ಕಲಬುರಗಿ ತಾಲೂಕಿನ ಶರಣ ಸಿರಸಗಿ ಗ್ರಾಮದ ನಿವಾಸಿಗಳಾಗಿದ್ದಾರೆ. ಅಪಘಾತ ಬಳಿಕ ಟಿಪ್ಪರ್ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕಾರವಾರ: ಚಾಕುವಿನಿಂದ ಇರಿದು ಮಾನಸಿಕ ಅಸ್ವಸ್ಥ ಮಗನಿಂದ ತಂದೆಯ ಕೊಲೆ ಮಾಡಿರುವಂತಹ ದಾರುಣ ಘಟನೆ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ತೊಪ್ಪಲಕೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಪುತ್ರ ಭರತ್ ಮೇಸ್ತಾನಿಂದ ತಂದೆ ಪಾಂಡುರಂಗ ಮೇಸ್ತಾ(62) ಹತ್ಯೆ. ಆರೋಪಿ ಭರತ್ ಮಾನಸಿಕ ಅಸ್ವಸ್ಥನಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದ. ನಿತ್ಯ ತಂದೆ ಪಾಂಡುರಂಗ, ಪುತ್ರ ಭರತ್ ನಡುವೆ ಜಗಳವಾಗುತ್ತಿತ್ತು. ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ವಕೀಲರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಯುವತಿ
ಕಲಬುರಗಿ: ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮರತೂರು ಗ್ರಾಮದಲ್ಲಿ ನಡೆದಿದೆ. ಯಲ್ಲಾಲಿಂಗ ಹಲ್ಲೆಗೊಳಗಾದ ಕಾರ್ಯಕರ್ತ. ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದಕ್ಕೆ ಯಲ್ಲಾಲಿಂಗ ಮೇಲೆ ಹಲ್ಲೆ ಮಾಡಿದ್ದು, ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಹಲ್ಲೆ ಆರೋಪ ಮಾಡಲಾಗಿದೆ. ಗಾಯಾಳು ಯಲ್ಲಾಲಿಂಗ್ಗೆ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಗದಗ: ರಂಜಾನ್ ಹಬ್ಬಕ್ಕೆ ತನ್ನ ಮಗಳನ್ನು ಕರೆತರಲು ಪೋಷಕರು ಪ್ಲನ್ ಮಾಡಿಕೊಂಡಿದ್ದರು. ಇದಕ್ಕಾಗಿ ಎಲ್ಲಾ ತಯಾರಿಗಳನ್ನು ಮನೆಯವರು ನಡೆಸುತ್ತಿದ್ದರು. ಇಷ್ಟೊಂದು ಸಂತೋಷದಲ್ಲಿದ್ದ ತವರು ಮನೆಯಲ್ಲಿ ನೀರವ ಮೌನ ಆವರಿಸಿದೆ. ಪೋಷಕರು, ಸಂಬಂಧಿಗಳು ಕಣ್ಣಿರಿನಲ್ಲಿ ಕೈತೊಳೆಯುತ್ತಿದ್ದಾರೆ. ಹೌದು, ಒಂದೂವರೆ ತಿಂಗಳ ಹಿಂದೆಯಷ್ಟೇ ವಿವಾದವಾಗಿದ್ದ ನವವಿವಾಹಿತೆಯನ್ನು ಪತಿಯೇ ಕೊಲೆ ಮಾಡಿ ತನ್ನ ಕುಟುಂಬದೊಂದಿಗೆ ಪರಾರಿಯಾದ ಘಟನೆ ಗದಗದ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ.
ಇದನ್ನೂ ಓದಿ: ಚಿತ್ರದುರ್ಗ: ಚಳ್ಳಕೆರೆ ಮಾಜಿ ತಹಸೀಲ್ದಾರ್ ವಿರುದ್ಧ ವಂಚನೆ ಆರೋಪ, ದೂರು ದಾಖಲು
ನವವಿವಾಹಿತೆ ಶಹನಾಜ್ ಬೇಗಂ (24) ಒಂದೂವರೆ ತಿಂಗಳ ಹಿಂದೆಯಷ್ಟೇ ಧಾರವಾಡ ಜಿಲ್ಲೆ ಅಣ್ಣಿಗೇರಿ ಮೂಲದ ಶಹಬಾಜ್ ಮುಳಗುಂದ ಎಂಬಾತನನ್ನು ವಿವಾಹವಾಗಿದ್ದಳು. ಒಂದೆಡೆ ಶಹನಾಜ್ ಬೇಗಂ ತವರು ಮನೆಯಲ್ಲಿ ಮಗಳ ಮದುವೆಯಾದ ಸಂತಸವಿದ್ದರೆ, ಇನ್ನೊಂದೆಡೆ ರಂಜಾನ್ ಹಬ್ಬದ ಸಂಭ್ರಮ ಸಡಗರ. ಈ ಹಬ್ಬಕ್ಕೆ ನವವಿವಾಹಿತೆ ಶಹನಾಜ್ ಬೇಗಂಳನ್ನು ಕರೆತರುವ ಪ್ಲಾನ್ ಕೂಡ ಪೋಷಕರು ಹಾಕಿಕೊಂಡಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:26 pm, Fri, 21 April 23