Bengaluru: ಲಂಚ ಆರೋಪ, ವಿದ್ಯಾರಣ್ಯಪುರ ಪೊಲೀಸರ ವಿರುದ್ಧ ಪ್ರಧಾನಿ ಮೋದಿಗೆ ದೂರು

ಸಾಮಾನ್ಯ ವ್ಯಕ್ತಿಯೊಬ್ಬರು ಬೆಂಗಳೂರು ಪೊಲೀಸರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೆ ದೂರು ನೀಡಿದ್ದಾರೆ. ಗಾಂಜಾ ಕೇಸ್​​​ ಸಂಬಂಧ ಲಂಚ ಪಡೆದಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ.

Bengaluru: ಲಂಚ ಆರೋಪ, ವಿದ್ಯಾರಣ್ಯಪುರ ಪೊಲೀಸರ ವಿರುದ್ಧ ಪ್ರಧಾನಿ ಮೋದಿಗೆ ದೂರು
ವಿದ್ಯಾರಣ್ಯಪುರ ಪೊಲೀಸರ ವಿರುದ್ಧ ಟ್ವಿಟರ್ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ದೂರು ನೀಡಿದ ವ್ಯಕ್ತಿ
Follow us
|

Updated on:Apr 21, 2023 | 7:24 PM

ಬೆಂಗಳೂರು: ಸಾಮಾನ್ಯ ವ್ಯಕ್ತಿಯೊಬ್ಬರು ಬೆಂಗಳೂರು ಪೊಲೀಸರ (Bengaluru Police) ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಪ್ರಧಾನಿ ನರೇಂದ್ರ ಮೋದಿ (Narendra Modi), ಅಮಿತ್ ಶಾ (Amit Shah) ಅವರಿಗೆ ದೂರು ನೀಡಿದ್ದಾರೆ. ಗಾಂಜಾ ಕೇಸ್​​​ ಸಂಬಂಧ ಲಂಚ ಪಡೆದಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ. ಗಾಂಜಾ ಪ್ರಕರಣ ಸಂಬಂಧ ವ್ಯಕ್ತಿಯೊಬ್ಬರನ್ನು ವಿಚಾರಣೆ ನಡೆಸಿದ್ದ ನಗರದ ವಿದ್ಯಾರಣ್ಯಪುರ ಠಾಣಾ ಪೊಲೀಸರು (Vidyaranyapura Police Station) ಲಂಚ ಸ್ವೀಕರಿಸಿದ್ದಾಗಿ ಮೆಂಟಲ್ ಜಿ.ಎಂ.ಆಸೀಫ್ ಎಂಬ ಟ್ವಿಟ್ಟರ್ ಅಕೌಂಟ್​ನಿಂದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.

ಗಾಂಜಾ ಪ್ರಕರಣ ಸಂಬಂಧ ವ್ಯಕ್ತಿಯೊಬ್ಬರನ್ನ ವಶಕ್ಕೆ ಪಡೆದ ವಿದ್ಯಾರಣ್ಯಪುರ ಠಾಣಾ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಳಿಕ 40 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು ಫೋನ್​ಪೇ ಮೂಲಕ ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಷ್ಟಕ್ಕೂ ಸುಮ್ಮನಾಗದ ಪೊಲೀಸರು, ಸದರಿ ವ್ಯಕ್ತಿಯ ಬಳಿ ಮತ್ತೆ ಹಣಕ್ಕೆ ಬೇಡಿಕೆ ಇಟ್ಟು 15 ಸಾವಿರ ರೂ. ಫೋನ್ ಪೇ ಮೂಲಕ ಹಾಕಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಕೆಎಸ್​​ಡಿಎಲ್​ ಟೆಂಡರ್​​ಗಾಗಿ ಲಂಚ ಸ್ವೀಕಾರ ಆರೋಪ: ಮಾಡಾಳ್ ಪ್ರಶಾಂತ್​ಗೆ ಜಾಮೀನು

ಸದ್ಯ ನೊಂದ ವ್ಯಕ್ತಿಯ ಫೋನ್ ಪೇ ಮೂಲಕ ಪೊಲೀಸರಿಗೆ ಹಣ ವರ್ಗಾಯಿಸಿದ್ದರ ಸ್ಕ್ರೀನ್​ಶಾಟ್ ತೆಗೆದು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಪ್ರಧಾನಮಂತ್ರಿ, ಕೇಂದ್ರ ಗೃಹಸಚಿವರು, ಕರ್ನಾಟಕ ಪೊಲೀಸ್ ಮಹಾನಿರ್ದೇಶಕರು ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಟ್ಯಾಗ್ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಕ್ರೈಂ ನ್ಯೂಸ್​ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:24 pm, Fri, 21 April 23