Karnataka Assembly Elections: 4,989 ನಾಮಪತ್ರಗಳು ಕ್ರಮಬದ್ಧ: 5 ಕ್ಷೇತ್ರಗಳ ಪರಿಶೀಲನೆ ಬಾಕಿ
ಕರ್ನಾಟಕ ವಿಧಾನಸಭಾ ಚುನಾವಣೆ ಇನ್ನೇನು ಸಮಿಪಿಸುತ್ತಿದ್ದು, ಕಾವು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿಯೊಂದು ಕ್ಷೇತ್ರದ ಅಭ್ಯರ್ಥಿಗಳು ಆಯಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸಂಪೂರ್ಣ ಮುಗಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಇನ್ನೇನು ಸಮಿಪಿಸುತ್ತಿದ್ದು, ಕಾವು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಧಿಕಾರಕ್ಕೆ ಬರಲು ಪ್ರತಿಯೊಂದು ಪಕ್ಷಗಳು ತಂತ್ರ-ಪ್ರತಿತಂತ್ರಗಳನ್ನು ರೂಪಿಸುತ್ತಿವೆ. ಇದರ ಮಧ್ಯೆ ಪ್ರತಿಯೊಂದು ಕ್ಷೇತ್ರದ ಅಭ್ಯರ್ಥಿಗಳು ಆಯಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸಂಪೂರ್ಣ ಮುಗಿದೆ. ಮೇ 10ರಂದು ರಾಜ್ಯದ 224 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, 224 ಕ್ಷೇತ್ರಗಳಲ್ಲಿ ಒಟ್ಟು 4,989 ನಾಮಪತ್ರಗಳು ಕ್ರಮಬದ್ಧವಾಗಿದೆ. 5 ವಿಧಾನಸಭಾ ಕ್ಷೇತ್ರಗಳಾದ ಸವದತ್ತಿ, ಔರಾದ್, ಹಾವೇರಿ, ರಾಯಚೂರು ಮತ್ತು ಶಿವಾಜಿನಗರ ಕ್ಷೇತ್ರಗಳ ನಾಮಪತ್ರಗಳ ಪರಿಶೀಲನೆ ಮಾತ್ರ ಬಾಕಿ ಇದೆ. ಒಟ್ಟು 3044 ಅಭ್ಯರ್ಥಿಗಳು ಚುನಾವಣೆ ಅಖಾಡದಲ್ಲಿದ್ದಾರೆ.
ನಾಮಪತ್ರ ವಿವರ ಹೀಗಿದೆ
- ಒಟ್ಟು 224 ಕ್ಷೇತ್ರಗಳಲ್ಲಿ ಒಟ್ಟು 4989 ನಾಮಪತ್ರಗಳು ಕ್ರಮಬದ್ಧ
- ಬಿಜೆಪಿ- 219
- ಕಾಂಗ್ರೆಸ್ -218
- ಜೆಡಿಎಸ್ -207
- ಎಎಪಿ- 207
- ಬಿಎಸ್ಪಿ – 135
- ಸಿಪಿಎಂ -4
- ಪಕ್ಷೇತರರು -1334
- ನೋಂದಾಯಿತ, ಮಾನ್ಯತೆ ರಹಿತ ಪಕ್ಷಗಳು- 720
- ಕಣದಲ್ಲಿ 3044 ಅಭ್ಯರ್ಥಿಗಳು
- ನೋಂದಾಯಿತ, ಮಾನ್ಯತೆ ರಹಿತ ಪಕ್ಷಗಳು 720
ಇದನ್ನೂ ಓದಿ: ಬಡವರು ಬಡವರಾಗಿಯೇ ಇರಲಿ ಎಂದು ಬಯಸಿದ್ದ ಕಾಂಗ್ರೆಸ್; ವಿಜಯೇಂದ್ರ ವಾಗ್ದಾಳಿ
ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ತಿರಸ್ಕೃತ ಭೀತಿ: ವಿಚಾರಣೆಗೆ ಹಾಜರಾಗುವಂತೆ ನೋಟಿಸ್
ಬೆಳಗಾವಿ ಜಿಲ್ಲೆ ಸವದತ್ತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ತಿರಸ್ಕೃತ ಭೀತಿ ಎದುರಾಗಿದೆ. ನಾಮಪತ್ರ ಸಲ್ಲಿಕೆ ವೇಳೆ 2018ರ ಅಫಿಡೆವಿಟ್ ನಮೂನೆ ಸಲ್ಲಿಕೆ ಆರೋಪ ಕೇಳಿಬಂದಿದೆ. ರತ್ನಾ ಮಾಮನಿ ದಾಖಲೆ ನಿಯಮಬದ್ಧವಾಗಿ ಇಲ್ಲವೆಂಬ ಆರೋಪಿಸಲಾಗಿದೆ. ಈ ಕುರಿತಾಗಿ ಆಪ್ ಅಭ್ಯರ್ಥಿ ಬಾಪುಗೌಡ, ‘ಕೈ’ ಅಭ್ಯರ್ಥಿ ವಿಶ್ವಾಸ ವೈದ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಚುನಾವಣಾಧಿಕಾರಿ ನಾಳೆ ಬೆಳಗ್ಗೆ 10 ಗಂಟೆಗೆ ವಿಚಾರಣೆ ನಿಗದಿಪಡಿಸಿದ್ದಾರೆ. ರತ್ನಾ ಮಾಮನಿಗೆ ವಿಚಾರಣಾ ನೋಟಿಸ್ ನೀಡಲಾಗಿದೆ.
ಚುನಾವಣಾಧಿಕಾರಿ ಡಾ.ರಾಜೀವ್ ಕೂಲೇರ್ ಹೇಳಿದಿಷ್ಟು
ಈ ಕುರಿತಾಗಿ ಸವದತ್ತಿ ಚುನಾವಣಾಧಿಕಾರಿ ಡಾ.ರಾಜೀವ್ ಕೂಲೇರ್ ಪ್ರತಿಕ್ರಿಯೆ ನೀಡಿದ್ದು, ಪರಿಷ್ಕೃತ ಅಫಿಡವಿಟ್ ಅಪ್‌ಲೋಡ್ ಮಾಡಲು ಅವಕಾಶ ಇದೆ. ನಾಮಪತ್ರ ಪರಿಶೀಲನೆ ಮುನ್ನ ಅಪ್‌ಲೋಡ್ ಮಾಡಲು ಅವಕಾಶವಿದೆ. ಬೆಳಗಾವಿ ಜಿಲ್ಲೆ ಸವದತ್ತಿ ಕ್ಷೇತ್ರದಲ್ಲಿ 16 ನಾಮಪತ್ರ ಸಲ್ಲಿಕೆಯಾಗಿವೆ. ನಾಮಪತ್ರ ಪರಿಶೀಲನೆ ವೇಳೆ ಎರಡು ಆಕ್ಷೇಪಣೆಗಳು ಬಂದಿದ್ದವು. ಆಕ್ಷೇಪಣೆಗಳ ವಿಚಾರಣೆಗೆ ನಾಮಪತ್ರ ಪರಿಶೀಲನೆ ಮುಂದೂಡಿದ್ದೇವೆ ಎಂದರು.
ಇದನ್ನೂ ಓದಿ: ನನ್ನ ಉಸಿರು ಇರೋವರೆಗೂ ವರುಣ ಜನರನ್ನು ಕೈಬಿಡುವುದಿಲ್ಲ ಎಂದ ಬಿವೈ ವಿಜಯೇಂದ್ರ
ನಾಳೆ ಬೆಳಗ್ಗೆ 10 ಗಂಟೆಗೆ ವಿಚಾರಣೆ ನಡೆಸುತ್ತೇವೆ. ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರಕ್ಕೆ ಆಕ್ಷೇಪಣೆ ಬಂದಿದೆ. ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ್, ಆಪ್ ಅಭ್ಯರ್ಥಿ ಬಾಪುಗೌಡ ಆಕ್ಷೇಪಣೆ ಮಾಡಿದ್ದಾರೆ. ಅಫಿಡವಿಟ್ ನಿಯಮಬದ್ಧವಾಗಿ ಇಲ್ಲ ಎಂದು ಆಕ್ಷೇಪಣೆ ಮಾಡಿದ್ದಾರೆ. ನಾಳೆ ಪರಿಶೀಲನೆ ಮಾಡುತ್ತೇವೆ ಎಂದು ಚುನಾವಣಾಧಿಕಾರಿ ಡಾ.ರಾಜೀವ್ ಹೇಳಿದರು.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:49 pm, Fri, 21 April 23