ಲಾಕ್ಡೌನ್ನಿಂದ ಬೀದಿಗೆ ಬಿದ್ದಿದ್ದ ನಿರಾಶ್ರಿತರ ಕಣ್ಣೊರೆಸಿ ನೆರವಿಗೆ ನಿಂತ ಯುವಕರ ತಂಡ
ಚಿಕ್ಕಮಗಳೂರು: ಒಪ್ಪೊತ್ತಿನ ಊಟ.. ಉಡೋಕೆ ಬಟ್ಟೆ.. ತಿನ್ನೋಕೆ ಅನ್ನ.. ಕುಡಿಯೋಕೆ ನೀರು ಕೊಟ್ಟವರೇ ದೇವರು.. ಲಾಕ್ಡೌನ್ ಅನ್ನೋದು ಜನರ ಅನ್ನವನ್ನ ಕಸಿದುಕೊಂಡಿದೆ. ನಿರ್ಗತಿಕರು, ನಿರಾಶ್ರಿತರ ಬದುಕು ಬೀದಿಗೆ ಬಿದ್ದಿದೆ. ವಯೋ ವೃದ್ಧರ ಕಣ್ಣಾಲಿಯಲ್ಲಿ ನೀರು ಜಿನುಗ್ತಿದೆ. ಕಣ್ಣೀರೊರೆಸೋ ಕೈಗಳಿಲ್ಲದೆ ಎಷ್ಟೋ ಜೀವಗಳು ಬಳಲಿಹೋಗಿವೆ. ದೇಶದಲ್ಲಿ ಕೊರೊನಾ ಅನ್ನೋ ಕ್ರೂರಿ ಅದೆಷ್ಟೋ ಜನರ ಬದುಕನ್ನೇ ಹೊಸಕಿ ಹಾಕಿದೆ. ಹಸಿವು ಅನ್ನೋ ಕೂಪಕ್ಕೆ ತಳ್ಳಿದೆ. ಕೈಯಲ್ಲಿದ್ದ ಕೆಲಸ ಕಸಿದುಕೊಂಡಿದೆ. ಭಿಕ್ಷುಕರು, ಅನಾಥರು, ನಿರ್ಗತಿಕರು, ಕಾರ್ಮಿಕರು, ಬುದ್ಧಿಮಾಂದ್ಯರು ಪರಿಸ್ಥಿತಿಯ ಕೈಗೊಂಬೆಯಾಗಿ ಬೀದಿಗೆ […]
ಚಿಕ್ಕಮಗಳೂರು: ಒಪ್ಪೊತ್ತಿನ ಊಟ.. ಉಡೋಕೆ ಬಟ್ಟೆ.. ತಿನ್ನೋಕೆ ಅನ್ನ.. ಕುಡಿಯೋಕೆ ನೀರು ಕೊಟ್ಟವರೇ ದೇವರು.. ಲಾಕ್ಡೌನ್ ಅನ್ನೋದು ಜನರ ಅನ್ನವನ್ನ ಕಸಿದುಕೊಂಡಿದೆ. ನಿರ್ಗತಿಕರು, ನಿರಾಶ್ರಿತರ ಬದುಕು ಬೀದಿಗೆ ಬಿದ್ದಿದೆ. ವಯೋ ವೃದ್ಧರ ಕಣ್ಣಾಲಿಯಲ್ಲಿ ನೀರು ಜಿನುಗ್ತಿದೆ. ಕಣ್ಣೀರೊರೆಸೋ ಕೈಗಳಿಲ್ಲದೆ ಎಷ್ಟೋ ಜೀವಗಳು ಬಳಲಿಹೋಗಿವೆ.
ದೇಶದಲ್ಲಿ ಕೊರೊನಾ ಅನ್ನೋ ಕ್ರೂರಿ ಅದೆಷ್ಟೋ ಜನರ ಬದುಕನ್ನೇ ಹೊಸಕಿ ಹಾಕಿದೆ. ಹಸಿವು ಅನ್ನೋ ಕೂಪಕ್ಕೆ ತಳ್ಳಿದೆ. ಕೈಯಲ್ಲಿದ್ದ ಕೆಲಸ ಕಸಿದುಕೊಂಡಿದೆ. ಭಿಕ್ಷುಕರು, ಅನಾಥರು, ನಿರ್ಗತಿಕರು, ಕಾರ್ಮಿಕರು, ಬುದ್ಧಿಮಾಂದ್ಯರು ಪರಿಸ್ಥಿತಿಯ ಕೈಗೊಂಬೆಯಾಗಿ ಬೀದಿಗೆ ಬಿದ್ದಿದ್ದಾರೆ. ಯಾರೋ ಕೊಟ್ಟಿದ ಊಟ ತಿಂದು ಹೊಟ್ಟೆ ಗಟ್ಟಿ ಮಡ್ಕೊಳ್ತಿದ್ರು ಆದ್ರೆ, ಕೈಯೆತ್ತಿ ಕೊಡುತ್ತಿದ್ದ ಮನಸುಗಳು ಮನೆಯಲ್ಲಿ ಕೂತಿದ್ದಾ ಅನ್ನಕ್ಕೂ ಕತ್ತರಿ ಬಿತ್ತು. ಆದರೆ ಈಗ ಇಂತವರ ನೆರವಿಗೆ ಒಂದು ತಂಡ ಮುಂದಾಗಿದೆ.
ಬೀದಿಗೆ ಬಿದ್ದ ಜೀವಗಳಿಗೆ ಯುವಕರ ತಂಡ ಸಹಾಯ ಹಸ್ತ! ಲಾಕ್ಡೌನ್ ಆದ ನಂತರ ಕಳೆದೊಂದು ತಿಂಗಳಿಂದ 47ಕ್ಕೂ ಹೆಚ್ಚು ನಿರಾಶ್ರಿತರಿಗೆ ಚಿಕ್ಕಮಗಳೂರು ಜಿಲ್ಲೆಯ ಎಐಟಿ ವೃತ್ತದಲ್ಲಿರೋ ನಿರಾಶ್ರಿತ ಕೇಂದ್ರದಲ್ಲಿ ಬದಕನ್ನ ಕಟ್ಟಿಕೊಡಲಾಗಿದೆ. ಲಾಕ್ಡೌನ್ನಿಂದಾಗಿ ಕೆಲಸವಿಲ್ಲದೆ ಕಂಗಾಲಾಗಿದ್ದ ಹಿರಿಯ ಜೀವಗಳನ್ನ ಯುವಕರ ತಂಡ ಕೈ ಹಿಡಿದು ಮೇಲೆತ್ತಿದೆ. ಪ್ರತಿಯೊಬ್ಬರಿಗೂ ಕೆಲಸ ನೀಡಲಾಗಿದ್ದು ನಿರಾಶ್ರಿತರ ಕೇಂದ್ರದಲ್ಲಿ ಅವಕಾಶ ಕಲ್ಪಿಸಿದ್ದಾರೆ. ಎಲ್ರೂ ಅವರವರ ಕಾಲಮೇಲೆ ನಿಲ್ಲುವಂತೆ ಮಾಡಿದ್ದಾರೆ.
ಈ ನಿರಾಶ್ರಿತ ಕೇಂದ್ರದಲ್ಲಿದ್ದ 50 ಜನರ ಪೈಕಿ ಇಬ್ಬರು ಬುದ್ಧಿಮಾಂಧ್ಯರು ನಾಪತ್ತೆಯಾಗಿದ್ದಾರೆ. ಒಬ್ಬರು ಅನಾರೋಗ್ಯಿದಿಂದ ಆಸ್ಪತ್ರೆ ಸೇರಿದ್ದಾರೆ. ಈಗ ಇಲ್ಲಿರೋ 47 ಜನರಿಗೆ ಗಾರೆ ಕೆಲಸ, ಎಲೆಕ್ಟ್ರಿಕ್ ಕೆಲಸ, ವಾದ್ಯ ನುಡಿಸೋರು, ಫ್ಲಂಬರ್, ಟೈಲರ್, ಚಿಪ್ಸ್ ಮಾಡೋರು ಸೇರಿ ನುರಿತ ಕೆಲಸಗಾರರಿದ್ದಾರೆ.
ದೈಹಿಕವಾಗಿ ಸದೃಢವಾಗಿಯೂ ಇದ್ದಾರೆ. ಹೀಗಾಗಿ ಯುವಕರ ಸಹಾಹಸ್ತ ತಂಡ ನಿರ್ಗತಿಕರಿಗೆ ಅವರವರ ಕ್ಷೇತ್ರದಲ್ಲೇ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಎಲ್ರೂ ಮತ್ತೆ ಬೀದಿಗೆ ಬಂದು ಭಿಕ್ಷೆ ಬೇಡುವುದು ಕಂಡು ಬಂದರೆ ಜೈಲಿಗೆ ಹಾಕ್ತಾರೆಂದು ತಿಳುವಳಿಕೆ ನೀಡಿದ್ದಾರೆ.
ಒಟ್ಟಾರೆ, ಇಷ್ಟು ದಿನ ಬೇರೆಯವರನ್ನೇ ನಂಬಿಕೊಂಡು ಕೈಚಾಚುತ್ತಿದ್ದ ಜೀವಗಳು ಖುಷಿಯಾಗಿವೆ. ಲಾಕ್ಡೌನ್ ಅನ್ನೋ ಲಾಕಪ್ನಲ್ಲಿ ಸಿಲುಕ್ಕಿದ್ದೋರು ತಮ್ಮದೇ ಕೆಲಸ ಮಾಡುತ್ತಾ ತಮ್ಮ ಕಾಲ ಮೇಲೆ ತಾವು ನಿಂತಿದ್ದಾರೆ. ಕಣ್ಣೀರಲ್ಲಿ ಕೈತೊಳೆಯುತ್ತಿರದ್ದೋರಿಗೆ ನೆರವಾದ ಯುವಕ ತಂಡಕ್ಕೊಂದು ಹ್ಯಾಟ್ಸ್ ಆಫ್ https://www.facebook.com/Tv9Kannada/videos/675422006556184/