ಚಿಕ್ಕಮಗಳೂರು: ಸ್ವೀಟ್ ಅಂಗಡಿಯಲ್ಲಿ ಗೋಮಾಂಸ ಮಾರಾಟ, ಇಬ್ಬರ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 13, 2025 | 5:16 PM

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್‌ನಲ್ಲಿ ಸ್ವೀಟ್ ಅಂಗಡಿಯಲ್ಲಿ ಗೋಮಾಂಸದ ಅಕ್ರಮ ಮಾರಾಟ ನಡೆಯುತ್ತಿರುವುದು ಬಹಿರಂಗಗೊಂಡಿದೆ. ಅಸ್ಸಾಂನಿಂದ ಬಂದ ಇಬ್ಬರು ವ್ಯಕ್ತಿಗಳು ಸ್ವೀಟ್ ಮಾರಾಟದ ಜೊತೆಗೆ ಗೋಮಾಂಸವನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಗೋಮಾಂಸವನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಚಿಕ್ಕಮಗಳೂರು: ಸ್ವೀಟ್ ಅಂಗಡಿಯಲ್ಲಿ ಗೋಮಾಂಸ ಮಾರಾಟ, ಇಬ್ಬರ ಬಂಧನ
ಚಿಕ್ಕಮಗಳೂರು: ಸ್ವೀಟ್ ಅಂಗಡಿಯಲ್ಲಿ ಗೋಮಾಂಸ ಮಾರಾಟ, ಇಬ್ಬರ ಬಂಧನ
Follow us on

ಚಿಕ್ಕಮಗಳೂರು, ಜನವರಿ 13: ಸದ್ಯ ಕರ್ನಾಟಕದಲ್ಲಿ ಹಸುಗಳ ಕೆಚ್ಚಲು ಕೊಯ್ದು ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಚಾಮರಾಜಪೇಟೆಯಲ್ಲಿನ ಘೋರ ಕೃತ್ಯ, ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಈ ಮಧ್ಯೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್‌ ಗ್ರಾಮದಲ್ಲಿ ಮಾರ್ಕೆಟ್​​ನಲ್ಲಿ ಸ್ವೀಟ್ ಅಂಗಡಿ ಹಾಕಿಕೊಂಡು ಗೋಮಾಂಸ (Beef) ಮಾರಾಟ ಮಾಡುತ್ತಿದ್ದ ಅಸ್ಸಾಂ ಮೂಲದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರ ಇಬ್ಬರು ವ್ಯಕ್ತಿಗಳು ಅಸ್ಸಾಂನಿಂದ ಬಂದು ಬಣಕಲ್‌ ಗ್ರಾಮದ ಸಂತೆಯಲ್ಲಿ ಸ್ವೀಟ್ ಅಂಗಡಿ ಜೊತೆಗೆ ಗೋಮಾಂಸ ಮಾರಾಟ ಮಾಡುತ್ತಿದ್ದರು. ಅಕ್ರಮ ಬಾಂಗ್ಲಾದೇಶದ ನಿವಾಸಿಗಳು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ವೀಟ್ ಡಬ್ಬದ ಪಕ್ಕದಲ್ಲಿರುವ ಬ್ಲ್ಯಾಕ್​ ಬ್ಯಾಗ್​ನಲ್ಲಿ ಗೋಮಾಂಸ ಪತ್ತೆಯಾಗಿದ್ದು, ಗೋಮಾಂಸ ಸಮೇತ ಮಾರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

KSRTC ಬಸ್​ ಸಂಚಾರದ ವೇಳೆ ಇಬ್ಬರು ಕುಡುಕರಿಂದ ರಂಪಾಟ: ಕಂಡಕ್ಟರ್​ ಮೇಲೆ ಹಲ್ಲೆಗೆ ಯತ್ನ

ಮತ್ತೊಂದು ಪ್ರಕರಣದಲ್ಲಿ ಕೆಎಸ್​ಆರ್​ಟಿಸಿ ಬಸ್​ ಸಂಚಾರದ ವೇಳೆ ಇಬ್ಬರು ಕುಡುಕರಿಂದ ರಂಪಾಟ ಮಾಡಲಾಗಿದ್ದು, ಮಧ್ಯರಾತ್ರಿ ಬಸ್​ನಲ್ಲೇ ಮದ್ಯಪಾನ ಮಾಡಿ ಇಬ್ಬರು ಯುವಕರು ಕಿರಿಕ್ ಮಾಡಿರುವಂತಹ ಘಟನೆ ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಮಧ್ಯರಾತ್ರಿ ನಡೆದಿದೆ.

ಇದನ್ನೂ ಓದಿ: ಗಂಡ್ಮಕ್ಳು ಮಾತ್ರ ಕೆಟ್ಟವರು, ಹುಡ್ಗಿರು ಏನೇ ಮಾಡಿದ್ರೂ ಲೆಕ್ಕಕ್ಕೆ ಬರಲ್ಲ..ವಿಡಿಯೋ ಮಾಡಿ ಪ್ರಾಣ ಬಿಟ್ಟ ಯುವಕ

ಹಾವೇರಿ ಜಿಲ್ಲೆಯ ಯಲಬುರ್ಗಾದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ KA 37F0894 ಸಂಖ್ಯೆಯ ಬಸ್​​​​ನಲ್ಲಿ ಕುಡಿದು ಯುವಕರು ಗಲಾಟೆ ಮಾಡಿದ್ದಾರೆ. ಕಿಡಿಗೇಡಿಗಳು ಶಿವಮೊಗ್ಗ ಮೂಲದ ಸೂಳೆಬೈಲು ಗ್ರಾಮದ ನಿವಾಸಿಗಳು ಎನ್ನಲಾಗಿದೆ.

ಬುದ್ಧಿ ಹೇಳಲು ಬಂದ ಬಸ್​ ಕಂಡಕ್ಟರ್​ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಕುಡುಕರ ಗಲಾಟೆಯಿಂದಾಗಿ ಸಖರಾಯಪಟ್ಟಣ ಪೊಲೀಸ್ ಠಾಣೆ ಬಳಿ ಚಾಲಕ ಬಸ್ ನಿಲ್ಲಿಸಿದ್ದಾರೆ. ಸಮಾಧಾನ ಪಡಿಸಲು ಯತ್ನಿಸಿದ ಪೊಲೀಸರ ಜೊತೆಯೂ ಕಿರಿಕ್​ ಮಾಡಿದ್ದು, ಪೊಲೀಸರ ಮೇಲೂ ಹಲ್ಲೆಗೆ ಯತ್ನಿಸಿದ್ದ ಇಬ್ಬರು ಕುಡುಕರನ್ನು
ಸಖರಾಯಪಟ್ಟಣ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:14 pm, Mon, 13 January 25