4 ತಿಂಗಳ ಹಿಂದೆಯೇ ಆ ಮರ ಕಡಿಸುವಂತೆ ಮೊರೆಯಿಟ್ಟಿದ್ದರು! ಆದರೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಕೊನೆಗೂ 2 ಹಿರಿಯ ಜೀವ ಹೋಯ್ತು!

ನಾಲ್ಕು ತಿಂಗಳ ಹಿಂದೆಯೇ ಮರ ತೆರವುಗೊಳಿಸುವಂತೆ ಮೃತ ಮಹಿಳೆಯರು ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿರುವ ವಿಡಿಯೋ ಈಗ ಲಭ್ಯವಾಗಿದೆ. ಮಹಿಳೆಯರು ಮನವಿ ಮಾಡಿಕೊಂಡಿದ್ದರೂ ಅಧಿಕಾರಿಗಳು ಮರ ತೆರವು ಮಾಡದೇ ನಿರ್ಲಕ್ಷ್ಯವಹಿಸಿರುವುದೇ ಸಾವಿಗೆ ಕಾರಣ ಎನ್ನಲಾಗಿದೆ.

4 ತಿಂಗಳ ಹಿಂದೆಯೇ ಆ ಮರ ಕಡಿಸುವಂತೆ ಮೊರೆಯಿಟ್ಟಿದ್ದರು! ಆದರೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಕೊನೆಗೂ 2 ಹಿರಿಯ ಜೀವ ಹೋಯ್ತು!
ಮನೆ ಮೇಲೆ ಮರ ಬಿದ್ದು ಇಬ್ಬರು ಮಹಿಳೆಯರ ಸಾವು
Edited By:

Updated on: Aug 10, 2022 | 3:13 PM

ಚಿಕ್ಕಮಗಳೂರು: ರಾಜ್ಯದಲ್ಲಿ ರಣ ಮಳೆಯ(Karnataka Rains) ಅಬ್ಬರ ಜೋರಾಗಿದ್ದು ಬಹಳ ಅನಾಹುತಗಳು ಸಂಭವಿಸುತ್ತಿವೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೆ ತಲಗೂರು ಗ್ರಾಮದಲ್ಲಿ ಮನೆ ಮೇಲೆ ಮರ ಬಿದ್ದು ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಆದ್ರೆ ಈಗ ಸಿಕ್ಕ ಆ ಒಂದು ವಿಡಿಯೋ ಹೇಳುತ್ತಿದೆ ಮಹಿಳೆಯರ ಸಾವಿಗೆ ಕಾರಣ ಯಾರು ಅಂತ?

ನಾಲ್ಕು ತಿಂಗಳ ಹಿಂದೆಯೇ ಮರ ತೆರವುಗೊಳಿಸುವಂತೆ ಮೃತ ಮಹಿಳೆಯರು ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿರುವ ವಿಡಿಯೋ ಈಗ ಲಭ್ಯವಾಗಿದೆ. ಮಹಿಳೆಯರು ಮನವಿ ಮಾಡಿಕೊಂಡಿದ್ದರೂ ಅಧಿಕಾರಿಗಳು ಮರ ತೆರವು ಮಾಡದೇ ನಿರ್ಲಕ್ಷ್ಯವಹಿಸಿರುವುದೇ ಸಾವಿಗೆ ಕಾರಣ ಎನ್ನಲಾಗಿದೆ. ಅರಣ್ಯ ಇಲಾಖೆ ಬೇಜವಾಬ್ದಾರಿತನಕ್ಕೆ ಸರಿತಾ(37), ಚಂದ್ರಮ್ಮ (55) ಎಂಬ ಇಬ್ಬರು ಮಹಿಳೆಯರು ಬಲಿಯಾಗಿದ್ದಾರೆ.

ನಾನು ಓದುತ್ತ ಕುಳಿತಿದ್ದೆ ಅಮ್ಮ, ಅಜ್ಜಿ ಪಕ್ಕದ ಕೋಣೆಯಲ್ಲಿ ಮಲಗಿದ್ದರು. ನನ್ನ ಕಣ್ಣೆದುರೇ ಮರ ಬಿದ್ದು ಅಮ್ಮ ಸತ್ತು ಹೋದರು. ಕೂಲಿ ಮಾಡಿ ಕಷ್ಟಪಟ್ಟು ನಮ್ಮನ್ನ ಓದಿಸುತ್ತಿದ್ದರು. ಮರ ತೆಗೆಸಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಪರಿ ಪರಿಯಾಗಿ ಬೇಡಿಕೊಂಡಿದ್ದರು ಎಂದು ಘಟನೆ ನೆನೆದು ಮೃತ ಸರಿತಾ ಪುತ್ರ ದೀಕ್ಷಿತ್ ಕಣ್ಣೀರಿಟ್ಟಿದ್ದಾನೆ.

ಅದೊಂದು ವಿಡಿಯೋದಿಂದ ಬಯಲಾಯಿತು ಅಧಿಕಾರಿಗಳ ದಿವ್ಯ ನಿರ್ಲಕ್ಷ

ನಾಲ್ಕು ತಿಂಗಳ ಹಿಂದೆಯೇ ಮನೆ ಮುಂದಿನ ಮರ ತೆರವುಗೊಳಿಸುವಂತೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮೃತ ಮಹಿಳೆಯರು ಮನವಿ ಮಾಡಿದ್ದ ವಿಡಿಯೋ ಲಭ್ಯವಾಗಿದೆ. ವಿಡಿಯೋದಲ್ಲಿ ಮಹಿಳೆಯರು ಅರಣ್ಯ ಇಲಾಖೆ ಹಾಗೂ ಸ್ಥಳೀಯ ತಹಶೀಲ್ದಾರ್ ಗೆ ಪರಿಪರಿಯಾಗಿ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಎಷ್ಟೆ ಮನವಿ ಮಾಡಿದ್ರೂ ಅಧಿಕಾರಿಗಳು ಕಿವಿಗೊಡದೆ ದಿವ್ಯ ನಿರ್ಲಕ್ಷ್ಯ ತೋರಿಸಿರುವುದು ವಿಡಿಯೋದಿಂದ ಗೊತ್ತಾಗುತ್ತೆ. ಮಹಿಳೆಯರು ಮನವಿ ಮಾಡಿದಾಗಲೇ ಅಧಿಕಾರಿಗಳು ಮರ ತೆರವು ಮಾಡಿದ್ದರೆ. ಇಂದು ಇಬ್ಬರು ಮಹಿಳೆಯರ ಸಾವು ಸಂಭವಿಸುತ್ತಿರಲಿಲ್ಲ, ಇಬ್ಬರು ಮಕ್ಕಳು ಅನಾಥರಾಗುತ್ತಿರಲಿಲ್ಲ. ವಿಡಿಯೋ ಸಾಕ್ಷಿಯಿಂದ ಅಧಿಕಾರಿಗಳ ನಿರ್ಲಕ್ಷ್ಯ ಬಯಲಾಗಿದೆ. ಇನ್ನು ಘಟನೆಯಲ್ಲಿ ಸುನಿಲ್ ಮತ್ತು ದೀಕ್ಷಿತ್ ಎಂಬ ಮಕ್ಕಳು ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಬಾಲಕಿ ನೀರುಪಾಲಾಗಿ ಮೂರು ದಿನ ಕಳೆದರೂ ಪತ್ತೆಯಾಗಿಲ್ಲ

ಉಡುಪಿ: ಬೈಂದೂರಿ ತಾಲೂಕಿನ ಬೀಜಮಕ್ಕಿಯಲ್ಲಿ ಬಾಲಕಿ ನೀರಿನಲ್ಲಿ ಕೊಚ್ಚಿ ಹೋಗಿ ಮೂರು ದಿನಗಳಾದರೂ ಪತ್ತೆಯಾಗಿಲ್ಲ. ಸನ್ನಿಧಿ ಮನೆಗೆ ಬಂದರೂ ಘಟನೆ ನಡೆದ ಸ್ಥಳಕ್ಕೆ ಸಚಿವರು ಭೇಟಿ ನೀಡಿಲ್ಲ. ಹೀಗಾಗಿ ಸಚಿವರ ನಡೆ ವಿರುದ್ಧ ಮನೆಯವರು ಆಕ್ರೋಶ ಹೊರ ಹಾಕಿದ್ದಾರೆ. ಕೇವಲ ಪೋಟೋಗೆ ಪೋಸ್ ನೀಡುವುದಕ್ಕೆ ಮಾತ್ರ ಬರ್ತಾರೆ. ಸಚಿವರು ನೀರಿಗೆ ಇಳಿಯಬೇಕು ಆಗ ಮಾತ್ರ ಪರಿಸ್ಥಿತಿ ಅರ್ಥವಾಗುತ್ತದೆ. ಸಚಿವರು ನೀರಿಗೆ ಇಳಿದು ನನ್ನ ಮಗುವನ್ನು ಹುಡುಕಿಕೊಡಿ. ಕೇವಲ ಮನೆಗೆ ಬಂದು ಹೋದ್ರೆ ಏನು ಪ್ರಯೋಜನ. ಚುನಾವಣೆ ಸಂದರ್ಭದಲ್ಲಿ ಮಾತ್ರ ಬರ್ತಾರೆ ಅಷ್ಟೇ ಎಂದು ಸನ್ನಿಧಿ ದೊಡ್ಡಮ್ಮ ಆಕ್ರೋಶ ಹೊರ ಹಾಕಿದ್ದಾರೆ.

Published On - 3:04 pm, Wed, 10 August 22