ಚಿಕ್ಕಮಗಳೂರು: ಟಿಪ್ಪು ನಿಜಕನಸು ಪುಸ್ತಕದಲ್ಲಿ (Tippu Nijakanasugalu) ಉಲ್ಲೇಖಿಸಲಾದ ಮಂಡ್ಯದ ಉರಿಗೌಡ, ದೊಡ್ಡ ನಂಜೇಗೌಡ (Urigowda and Dodda Nanjegowda) ಪಾತ್ರಗಳು ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿವೆ. ಈ ಇಬ್ಬರ ವಿಷಯ ಆದಿಚುಂಚನಗಿರಿ ಮಠದ ಅಂಗಳವನ್ನೂ ತಲುಪಿದೆ. ಈ ವಿಚಾರವಾಗಿ ಬಿಜೆಪಿ (BJP) ನಾಯಕ, ಶಾಸಕ ಸಿಟಿ ರವಿ (CT Ravi) ಮತ್ತೆ ಮಾತನಾಡಿದ್ದು, ಉರಿಗೌಡ, ದೊಡ್ಡ ನಂಜೇಗೌಡ ಐತಿಹಾಸಿಕ ವ್ಯಕ್ತಿಗಳು ಎಂಬ ಸಾಕ್ಷ್ಯ ಇದೆ. 30 ವರ್ಷಗಳ ಹಿಂದೆಯೇ ಸುವರ್ಣ ಮಂಡ್ಯ ಪುಸ್ತಕದಲ್ಲಿ ಉರಿಗೌಡ, ನಂಜೇಗೌಡ ಬಗ್ಗೆ ಉಲ್ಲೇಖವಿದೆ. ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಮಾಹಿತಿ ಸಂಗ್ರಹಿಸಿದ ಬಳಿಕ ಆದಿಚುಂಚನಗಿರಿಯ ನಿರ್ಮಲಾನಂದ ಶ್ರೀಗಳ ಜೊತೆ ಮಾತನಾಡುತ್ತೇವೆ ಎಂದು ಹೇಳಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸ್ಥಳೀಯವಾಗಿ ಮಾಹಿತಿ ಕಲೆ ಹಾಕುವ ಕೆಲಸ ನಡೆಯುತ್ತಿದೆ. ಮಾಹಿತಿ ಕಲೆ ಹಾಕಲು ಒಂದು ತಂಡ ಕೆಲಸ ಮಾಡುತ್ತಿದೆ. ಮಾಹಿತಿ ಸಿಕ್ಕ ಬಳಿಕ ಸ್ವಾಮೀಜಿ ಜೊತೆ ಚರ್ಚೆ ಮಾಡುತ್ತೇವೆ. ಟಿಪ್ಪು ಕುರಿತ ಸಾಕಷ್ಟು ಮಾಹಿತಿಗಳು ಸಿಕ್ಕಿದೆ. ಟಿಪ್ಪು ಆಡಳಿತದಲ್ಲಿ ನಡೆದ ದೌರ್ಜನ್ಯಗಳ ಕುರಿತು ಮಾಹಿತಿ ಇದೆ ಎಂದು ಹೇಳಿದರು.
ಇದನ್ನೂ ಓದಿ: ಶೋಭಕ್ಕ, ಅಶ್ವತ್ಥ್, ಸಿ.ಟಿ.ರವಿ ಹೊಸ ಇತಿಹಾಸ ಸೃಷ್ಟಿ ಮಾಡಿ ಒಕ್ಕಲಿಗ ಸಮುದಾಯಕ್ಕೆ ಅಪಮಾನ: ಡಿಕೆ ಶಿವಕುಮಾರ್ ಕಿಡಿ
ಉರಿಗೌಡ, ದೊಡ್ಡ ನಂಜೇಗೌಡರ ಪೋಟೋ ವಿವಾದ ಬಗ್ಗೆ ಮಾತನಾಡಿದ ಅವರು ಉರಿಗೌಡ, ದೊಡ್ಡ ನಂಜೇಗೌಡರ ಸಾಂದರ್ಭಿಕ ಫೋಟೋ ಬಳಕೆ ಆಗುತ್ತಿದೆ. ಉರಿಗೌಡ ಹಾಗೂ ದೊಡ್ಡ ನಂಜೇಗೌಡರು ಆಗ ಫೋಟೋ ತೆಗೆಸಿಕೊಂಡಿದ್ರಾ? ಸಾಂದರ್ಭಿಕ ಚಿತ್ರ ಬಳಸಿಕೊಂಡಿದ್ದಾರೆ ಅದರಲ್ಲೇನಿದೆ. ಟಿಪ್ಪು ಸುಲ್ತಾನ್ ಸುಂದರವಾಗಿ ಇರಲೇ ಇಲ್ಲ, ಆತ ಕುರೂಪಿಯಾಗಿದ್ದನು. ಟಿಪ್ಪು ಹುಲಿ ಕೊಲ್ಲುತ್ತಿರುವ ಫೋಟೋವನ್ನು ಯಾರಾದರೂ ತೆಗೆದಿದ್ರಾ? ಸಾಂದರ್ಭಿಕ ಚಿತ್ರ ಬಳಸಿಕೊಂಡಿದ್ದಾರೆ ಅಷ್ಟೇ ಎಂದರು.
ಕನ್ನಡಿಗರಿಗೆ ಟಿಪ್ಪು ಸುಲ್ತಾನ್ ನೆಂಟನಲ್ಲ, ಅವನು ಆಕ್ರಮಣಕಾರ. ಇತಿಹಾಸ ಅರ್ಥೈಸಿಕೊಳ್ಳದವರು ಎಡಬಿಡಂಗಿಯಾಗಿ ಹೇಳುತ್ತಾರೆ. ಮೈಸೂರು ಒಡೆಯರಿಗೆ ಮೋಸ ಮಾಡಿದ್ದು ಟಿಪ್ಪು ಸುಲ್ತಾನ್. ಅರಸರಿಗೆ ನಿಷ್ಠಾವಂತರಾಗಿದ್ದವರನ್ನು ಟಿಪ್ಪು ಹತ್ಯೆ ಮಾಡಿದ್ದನು. ಟಿಪ್ಪು ಕನ್ನಡ ವಿರೋಧಿ ಎಂಬುವುದಕ್ಕೆ ಪಾರ್ಷಿ ಭಾಷೆ ಹೇರಿದ್ದನು. ಒಕ್ಕಲಿಗರು ನಾಡು ಮತ್ತು ಒಡೆಯರ್ ಸಂಸ್ಥಾನದ ಜೊತೆ ಇದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಒಳ್ಳೆಯ ಕೆಲಸ ಆಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:01 pm, Wed, 22 March 23