ಉತ್ತರ ಕನ್ನಡ: ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ ಕ್ಷೇತ್ರದಲ್ಲಿ ಚುನಾವಣೆ ಬಹಿಷ್ಕಾರದ ಕೂಗು; ಸೇತುವೆ ನಿರ್ಮಿಸಿ ಮತ ಕೇಳಿ ಎಂದು ಬ್ಯಾನರ್

ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್​ ವಿರುದ್ದ ಜಿಲ್ಲೆಯ ಶಿರಸಿ ತಾಲೂಕಿನ ಅಜ್ಜರಣಿ ಮತ್ತು ಮತಗುಣಿಯ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಕೂಗು ಕೇಳಿಬಂದಿದೆ. ಹೌದು ‘ಸೇತುವೆ ನಿರ್ಮಿಸಿ ಮತ ಕೇಳಿ' ಎಂಬ ಬ್ಯಾನರ್​ನ್ನು ಗ್ರಾಮದ ಹೆಬ್ಬಾಗಿಲಿಗೆ ಅಳವಡಿಸುವ ಮೂಲಕ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.

ಉತ್ತರ ಕನ್ನಡ: ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ ಕ್ಷೇತ್ರದಲ್ಲಿ ಚುನಾವಣೆ ಬಹಿಷ್ಕಾರದ ಕೂಗು; ಸೇತುವೆ ನಿರ್ಮಿಸಿ ಮತ ಕೇಳಿ ಎಂದು ಬ್ಯಾನರ್
ಸಚಿವ ಹೆಬ್ಬಾರ ವಿರುದ್ದ ಚುನಾವಣಾ ಬಹಿಷ್ಕಾರ
Follow us
ಕಿರಣ್ ಹನುಮಂತ್​ ಮಾದಾರ್
|

Updated on:Mar 22, 2023 | 12:41 PM

ಉತ್ತರ ಕನ್ನಡ: ವಿಧಾನಸಭಾ ಚುನಾವಣೆಗೆ(Karnataka Assembly Election) ಕೆಲವೇ ದಿನಗಳು ಬಾಕಿ ಇರುವಾಗಲೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಚುನಾವಣೆ ಬಹಿಷ್ಕಾರದ ಕೂಗು ಆರಂಭವಾಗಿದೆ. ಅದರಂತೆ ಇದೀಗ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್​ ವಿರುದ್ದ ಜಿಲ್ಲೆಯ ಶಿರಸಿ ತಾಲೂಕಿನ ಅಜ್ಜರಣಿ ಮತ್ತು ಮತಗುಣಿಯ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಕೂಗು ಕೇಳಿಬಂದಿದೆ. ಹೌದು ‘ಸೇತುವೆ ನಿರ್ಮಿಸಿ ಮತ ಕೇಳಿಎಂಬ ಬ್ಯಾನರ್​ನ್ನು ಗ್ರಾಮದ ಹೆಬ್ಬಾಗಿಲಿಗೆ ಅಳವಡಿಸುವ ಮೂಲಕ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. ವರದಾ ನದಿ ಹಿನ್ನೀರು ನಿಲ್ಲುವ ಸ್ಥಳದಲ್ಲಿ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರು ಈ ಹಿಂದೆ ಒತ್ತಾಯಿಸಿದ್ದರು. ಮಳೆಗಾಲ ಸಂದರ್ಭದಲ್ಲಿ ವರದಾ ನದಿಯ ಹಿನ್ನೀರಿನಿಂದ ಈ ಗ್ರಾಮ ಸಂಪರ್ಕ ಕಳೆದುಕೊಳ್ಳುತ್ತದೆ. ಈ ಹಿನ್ನಲೆ ಮೂರು ವರ್ಷಗಳ ಹಿಂದೆ ಸೇತುವೆ ಕಾಮಗಾರಿಗೆ ಸಚಿವ ಹೆಬ್ಬಾರ್ ಗುದ್ದಲಿ ಪೂಜೆ ಮಾಡಿದ್ದರು ಆದರೆ ಸೇತುವೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ನಿರ್ಲಕ್ಷ್ಯ ತೋರಿಸಿದ್ದಾರೆ. ಇದೀಗ ಜನ ಸಂಚಾರಕ್ಕೆ ಸೇತುವೆ ನಿರ್ಮಿಸಿ ಮತ ಕೇಳಿ ಎಂದು ಊರಿನ ಜನರು ಆಗ್ರಹಿಸಿದ್ದಾರೆ.

ಮೂಲಸೌಕರ್ಯ ಆಗ್ರಹಿಸಿ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ, ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ನಂದಿಗಾವೆ, ದಂಡುಬೆಟ್ಟಹಾರದ ಗ್ರಾಮಸ್ಥರು ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. ಕಳೆದ ಬಾರಿ ಸುರಿದ ಮಳೆಯಿಂದ ಗ್ರಾಮಗಳ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಎಷ್ಟು ಬಾರಿ ಮನವಿ ಸಲ್ಲಿಸಿದರೂ ಜನಪ್ರತಿನಿಧಿಗಳು ಕಿವಿಗೊಟ್ಟಿಲ್ಲಈ ಹಿನ್ನಲೆ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಚುನಾವಣೆ ಬಹಿಷ್ಕರಿಸುವುದಾಗಿ  ಹೇಳಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:53 am, Wed, 22 March 23