ಚಿಕ್ಕಮಗಳೂರು, ಡಿ.31: ಮಲ್ಲೇಗೌಡ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದ ಮಹಿಳೆ ಹೊಟ್ಟೆ ನೋವಿನಿಂದ ನರಳಾಡಿ ಪ್ರಾಣ (Death) ಬಿಟ್ಟಿರುವ ಘಟನೆ ಚಿಕ್ಕಮಗಳೂರಿನಲ್ಲಿ (Chikkamagaluru) ನಡೆದಿದೆ. ಇನ್ನು ಮಲ್ಲೇಗೌಡ ಜಿಲ್ಲಾಸ್ಪತ್ರೆ (Mallegowda District Hospital) ವೈದ್ಯರ ನಿರ್ಲಕ್ಷ್ಯದಿಂದಲೇ ಮಹಿಳೆ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ರಂಜಿತಾ ಬಾಯಿ (21) ಮೃತ ಮಹಿಳೆ.
ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ಸಖರಾಯಪಟ್ಟಣದ ವಡೇರಹಳ್ಳಿ ತಾಂಡ್ಯದ ರಂಜಿತಾ ಬಾಯಿ ದಾಖಲಾಗಿದ್ದರು. ನಿನ್ನೆ ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದ್ರೆ, ತಡರಾತ್ರಿ ರಂಜಿತಾ ಬಾಯಿ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೊಟ್ಟೆ ನೋವಿನಿಂದ ರಂಜಿತಾ ನರಳಾಡಿದ್ದಾರೆ. ಬಾಣಂತಿ ನರಳಾಡಿದ್ರೂ ವೈದ್ಯರು ಚಿಕಿತ್ಸೆ ನೀಡಿಲ್ಲ. ಹೀಗಾಗಿ ರಂಜಿತಾ ಬಾಯಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ವರ್ಷದ ಹಿಂದೆಯಷ್ಟೇ ರಂಜಿತಾ ಬಾಯಿ ಹಾಗೂ ಶಶಿಧರ್ ನಾಯಕ್ ವಿವಾಹವಾಗಿದ್ರು. ಪತ್ನಿ ಸಾವಿಗೆ ನ್ಯಾಯ ನೀಡುವಂತೆ ಮಹಿಳೆಯ ಪೋಷಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ಆಡಿ ಬಂದು ತಕ್ಷಣ ನೀರು ಕುಡಿದ ಬಾಲಕ, ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಿಂದ ಸಾವು
ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಇಬ್ಬರು ಯುವಕರ ಗಲಾಟೆಗೆ ಅಮಾಯಕ ವೃದ್ಧ ಬಲಿಯಾಗಿದ್ದಾರೆ. ಗಲಾಟೆ ನೋಡುತ್ತ ನಿಂತಿದ್ದ ಅಗ್ರಹಾರದ ನಿವಾಸಿ ಲಿಂಗಣ್ಣ (70) ಅವರಿಗೆ ಬ್ಯಾಟ್ ತಗುಲಿದ್ದು ವೃದ್ಧ ಮೃತಪಟ್ಟಿದ್ದಾರೆ. ವೆಂಕಟೇಶ್ ಹಾಗೂ ಆಕಾಶ್ ಎಂಬ ಇಬ್ಬರು ಯುವಕರ ನಡುವೆ ಗಲಾಟೆ ನಡೆಯುತ್ತಿತ್ತು. ಈ ವೇಳೆ ಕ್ರಿಕೆಟ್ ಬ್ಯಾಟ್‌ನಿಂದ ಆಕಾಶ್ ಮೇಲೆ ವೆಂಕಟೇಶ್ ಹಲ್ಲೆಗೆ ಯತ್ನಿಸಿದ್ದ. ಆಗ ಆಕಾಶ್ ಹಲ್ಲೆಯಿಂದ ತಪ್ಪಿಸಿಕೊಂಡಿದ್ದು ಬ್ಯಾಟ್ ಲಿಂಗಣ್ಣ ಅವರ ಮೇಲೆ ಹೋಗಿ ಬಿದ್ದಿದೆ. ಬ್ಯಾಟ್ ಏಟಿನಿಂದ ಗಾಯಗೊಂಡ ಲಿಂಗಣ್ಣ ಅವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬ್ಯಾಟ್ ಬೀಸಿದ ವೆಂಕಟೇಶ್ನನ್ನು ಪೊಲೀಸರು ಬಂಧಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ