ಜ್ಯೂಸ್ ಅಂದ್ಕೊಂಡು ಕಳೆನಾಶಕ ಕುಡಿದಿದ್ದ ಬಾಲಕ ಬೆಂಗಳೂರಿನಲ್ಲಿ ಸಾವು

|

Updated on: Nov 12, 2019 | 12:20 PM

ಚಿಕ್ಕಮಗಳೂರು: ಜ್ಯೂಸ್ ಎಂದು ತಿಳಿದು ಕಳೆನಾಶಕ ಸೇವಿಸಿದ್ದ ಮೂರು ವರ್ಷದ ಕಂದಮ್ಮ ಸಾವಿಗೀಡಾಗಿದ್ದಾನೆ. ಪ್ರವೀಣ್-ಪೂಜಿತಾ ದಂಪತಿಯ ಪುತ್ರ ಅಗಸ್ತ್ಯ(3) ಮೃತಪಟ್ಟ ಬಾಲಕ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಸಾವಿಗೀಡಾಗಿದ್ದಾನೆ. 18 ದಿನಗಳ ಚಿಕಿತ್ಸೆ ಫಲ ನೀಡಲಿಲ್ಲ: ಅಗಸ್ತ್ಯ, ಅಕ್ಟೋಬರ್​ 24ರಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಯಲ್ಲಿ ಕಳೆನಾಶಕ ಸೇವಿಸಿದ್ದ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.

ಜ್ಯೂಸ್ ಅಂದ್ಕೊಂಡು ಕಳೆನಾಶಕ ಕುಡಿದಿದ್ದ ಬಾಲಕ ಬೆಂಗಳೂರಿನಲ್ಲಿ ಸಾವು
Follow us on

ಚಿಕ್ಕಮಗಳೂರು: ಜ್ಯೂಸ್ ಎಂದು ತಿಳಿದು ಕಳೆನಾಶಕ ಸೇವಿಸಿದ್ದ ಮೂರು ವರ್ಷದ ಕಂದಮ್ಮ ಸಾವಿಗೀಡಾಗಿದ್ದಾನೆ. ಪ್ರವೀಣ್-ಪೂಜಿತಾ ದಂಪತಿಯ ಪುತ್ರ ಅಗಸ್ತ್ಯ(3) ಮೃತಪಟ್ಟ ಬಾಲಕ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಸಾವಿಗೀಡಾಗಿದ್ದಾನೆ.

18 ದಿನಗಳ ಚಿಕಿತ್ಸೆ ಫಲ ನೀಡಲಿಲ್ಲ:
ಅಗಸ್ತ್ಯ, ಅಕ್ಟೋಬರ್​ 24ರಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಯಲ್ಲಿ ಕಳೆನಾಶಕ ಸೇವಿಸಿದ್ದ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.

Published On - 11:55 am, Tue, 12 November 19