ಮಕ್ಕಳ ಬಿಸಿಯೂಟಕ್ಕೂ ತಟ್ಟಿದ ಬೆಲೆ ಏರಿಕೆ ಬಿಸಿ!

| Updated By: sandhya thejappa

Updated on: Nov 08, 2021 | 1:55 PM

ತರಕಾರಿಗಳನ್ನ ಬಳಸಿ ಅಡುಗೆ ಮಾಡಲು ಸೂಚಿಸಲಾಗಿದೆ. ಆದರೆ ಬೆಲೆ ಏರಿಕೆಯಿಂದ ಮಕ್ಕಳಿಗೆ ಕೊಡುವ ಬಿಸಿಯೂಟ ಸಪ್ಪೆಯಾಗಿದೆ.

ಮಕ್ಕಳ ಬಿಸಿಯೂಟಕ್ಕೂ ತಟ್ಟಿದ ಬೆಲೆ ಏರಿಕೆ ಬಿಸಿ!
ಬಿಸಿಯೂಟ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು: ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ನೀಡುವಂತೆ ಸರ್ಕಾರ ಸೂಚಿಸಿದೆ. ಆದರೆ ಬೆಲೆ ಏರಿಕೆ ಬಿಸಿ ಶಾಲೆಗಳಲ್ಲಿ ಮಕ್ಕಳ ಬಿಸಿಯೂಟಕ್ಕೂ ತಟ್ಟಿದ್ದು, ಸರ್ಕಾರ ನಿಗದಿ ಪಡಿಸಿರುವ ಹಣದಲ್ಲಿ ಮಕ್ಕಳಿಗೆ ರುಚಿರುಚಿಯಾದ ಅಡುಗೆ ಮಾಡುವುದು ಕಷ್ಟವಾಗಿದೆ. ಮಕ್ಕಳಿಗೆ ಅನ್ನ, ಸಾಂಬಾರ್, ಬಿಸಿಬೇಳೆ ಬಾತ್, ಉಪ್ಪಿಟ್ಟು, ಪಲಾವ್ ಸೇರಿದಂತೆ ವಿವಿಧ ಖಾದ್ಯಗಳನ್ನ ತಯಾರಿಸಬೇಕು. ತರಕಾರಿಗಳನ್ನ ಬಳಸಿ ಅಡುಗೆ ಮಾಡಲು ಸೂಚಿಸಲಾಗಿದೆ. ಆದರೆ ಬೆಲೆ ಏರಿಕೆಯಿಂದ ಮಕ್ಕಳಿಗೆ ಕೊಡುವ ಬಿಸಿಯೂಟ ಸಪ್ಪೆಯಾಗಿದೆ.

ಮಕ್ಕಳ ವಯಸ್ಸಿನ ಆಧಾರದ ಮೇಲೆ ಸರ್ಕಾರ ಹಣ ನಿಗದಿ ಪಡಿಸಿದೆ. 1ರಿಂದ 5ನೇ ತರಗತಿ ಮಕ್ಕಳಿಗೆ 4.97 ರೂಪಾಯಿ, 6ರಿಂದ 8ನೇ ತರಗತಿಯ ಮಕ್ಕಳಿಗೆ 7.45 ರೂಪಾಯಿ, 9ರಿಂದ 10ನೇ ತರಗತಿ ಮಕ್ಕಳಿಗೆ 11.41 ರೂ. ಹಣವನ್ನು ಸರ್ಕಾರ ನಿಗದಿ ಪಡಿಸಿದೆ. ಆದರೆ ಇದೀಗ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆ ಸರ್ಕಾರ ನೀಡುವ ಹಣದಲ್ಲಿ ಮಕ್ಕಳಿಗೆ ರುಚಿಯಾದ ಊಟ ನೀಡುವುದು ಕಷ್ಟಕರವಾಗಿದೆ.

ಸರ್ಕಾರ ನಿಗದಿ ಪಡಿಸಿದ ಹಣದಲ್ಲಿ ಮಕ್ಕಳಿಗೆ ಅಕ್ಕಿ, ಬೇಳೆ, ತರಕಾರಿ, ಎಣ್ಣೆ, ಖಾರದ ಪುಡಿ, ಅಡುಗೆ ಅನಿಲ ಸೇರಿರುತ್ತವೆ. ಆದರೆ ತರಕಾರಿ ಬೆಲೆ ಏರಿಕೆಯಾಗಿದೆ. ಹೀಗಾಗಿ ಸರ್ಕಾರ ನೀಡುವ ಹಣದಲ್ಲಿ ಮಕ್ಕಳಿಗೆ ಊಟ ಹಾಕುವುದು ಸವಾಲಿನ ಕೆಲಸವಾಗಿದೆ. ಕಡಿಮೆ ಬೆಲೆಯ ಅಡುಗೆ ವಸ್ತುಗಳನ್ನು ಅಡುಗೆ ತಯಾರಕರು ತರಬೇಕು. ಇಲ್ಲದಿದ್ದರೆ ಕಡಿಮೆ ಪ್ರಮಾಣದಲ್ಲಿ ತರಕಾರಿ ಬಳಸಬೇಕಾಗುತ್ತದೆ. ಹೀಗಾಗಿ ಮಕ್ಕಳಿಗೆ ಕೊಡುವ ಬಿಸಿಯೂಟ ಸಪ್ಪೆಯಾಗುತ್ತಿದೆ.

ಇದನ್ನೂ ಓದಿ

Virat Kohli: ಆರ್​ಸಿಬಿ ಹೊಸ ನಾಯಕನ ಸ್ಥಾನಕ್ಕೆ ಇಬ್ಬರು ಆಟಗಾರರ ಶಾರ್ಟ್​ ಲಿಸ್ಟ್ ರೆಡಿ: ಸದ್ಯದಲ್ಲೇ ಘೋಷಣೆ

ಮೇಕೆದಾಟು ಯೋಜನೆ ರಾಜ್ಯದ ಪ್ರತಿಯೊಬ್ಬರ ಅಪೇಕ್ಷೆ, ಕಾಂಗ್ರೆಸ್​ಗೆ ಈಗೇಕೆ ಮೇಕೆದಾಟು ನೆನಪಿಗೆ ಬಂತು? – ಸಚಿವ ಈಶ್ವರಪ್ಪ ಪ್ರಶ್ನೆ