ಪ್ರತಿ ವರ್ಷ ಮಕ್ಕಳ ಕ್ಯಾನ್ಸರ್ ಪ್ರಕರಣ ಹೆಚ್ಚಳ: ಕಿದ್ವಾಯಿ ಆಸ್ಪತ್ರೆಯಿಂದ ಆತಂಕಕಾರಿ ವರದಿ..!

| Updated By: ರಮೇಶ್ ಬಿ. ಜವಳಗೇರಾ

Updated on: Sep 24, 2024 | 9:35 PM

ಅನಾರೋಗ್ಯ ವಾತಾವರಣದಲ್ಲಿ ನಾವಿವತ್ತು ಜೀವಿಸುತ್ತಿದ್ದೇವೆ. ಕಳಪೆ ಆಹಾರ ಹೊಟ್ಟೆ ಸೇರಿದ್ರೆ, ಕಲುಷಿತ ಗಾಳಿ ಆರೋಗ್ಯ ಹದಗೆಡಿಸಿದೆ. ಹಿಂದಿದ್ದ ಆಹಾರ ಕ್ರಮ ಬದಲಾಗಿದೆ. ಜಂಕ್ ಫುಡ್ ಇಷ್ಟ ಪಡುವ ನಾಲಿಗೆಗೆ ಮನೆಯೂಟ ರುಚಿಸುತ್ತಿಲ್ಲ..ಹಿಂದೆ ಆಹಾರವಿಲ್ಲದೆ ಜನ ಸಾಯುತ್ತಿದ್ದರೆ, ಈಗ ಆಹಾರ ಅಧಿಕವಾಗಿ ಖಾಯಿಲೆಗಳು ಹುಟ್ಟಿಕೊಳ್ತಿದೆ. ಕೇಳರಿಯದ ಖಾಯಿಲೆಗಳ ಮಧ್ಯೆ ಮಕ್ಕಳಿಗೆ ಕ್ಯಾನ್ಸರ್ ಬಾಧಿಸುತ್ತಿರುವ ಆತಂಕಕಾರಿ ವಿಚಾರ ಹೊರಬಿದ್ದಿದೆ.

ಪ್ರತಿ ವರ್ಷ ಮಕ್ಕಳ ಕ್ಯಾನ್ಸರ್ ಪ್ರಕರಣ ಹೆಚ್ಚಳ: ಕಿದ್ವಾಯಿ ಆಸ್ಪತ್ರೆಯಿಂದ ಆತಂಕಕಾರಿ ವರದಿ..!
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, (ಸೆಪ್ಟೆಂಬರ್ 24): ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್​ಗೆ ತುತ್ತಾಗುವ ಮಕ್ಕಳ ಸಂಖ್ಯೆ ಅಧಿಕಗೊಂಡಿದೆ. ವರ್ಷದಿಂದ ವರ್ಷಕ್ಕೆ ಪ್ರಕರಣಗಳು ಡಬ್ಬಲ್ ಆಗುತ್ತಿದೆ. ಅತಿ ಹೆಚ್ಚು ಮಕ್ಕಳ ಬ್ಲಡ್ ಕ್ಯಾನ್ಸರ್​ಗೆ ತುತ್ತಾಗುತ್ತಿದ್ದಾರೆ. ಬ್ಲಡ್ ಕ್ಯಾನ್ಸರ್ ಗುಣಲಕ್ಷಣಗಳು ತಿಳಿಯದೇ ಮದ್ದು ಮಾಡಿ, ನಾಲ್ಕನೇ ಸ್ಟೇಜ್​ಗೆ ತೋರಿಸುವ ಕಾರಣ ಮೃತ್ಯು ಸಂಖ್ಯೆ ಅಧಿಕಗೊಂಡಿದೆ. ಕಿದ್ವಾಯಿ ಆಸ್ಪತ್ರೆಯೊಂದರಲ್ಲೇ ಪ್ರತಿ ವರ್ಷ 1 ಸಾವಿರ ಮಕ್ಕಳ ಕ್ಯಾನ್ಸರ್ ಪ್ರಕರಣ ದಾಖಲಾಗ್ತಿದೆ. ಬ್ಲಡ್ ಕ್ಯಾನ್ಸರ್, ಲ್ಯುಕಿಮಿಯಾ, ಲಿಂಫೋಮಾ, ಬ್ರೈನ್ ಟ್ಯೂಮರ್ ಅಂತಹ ಭಯಾನಕ ಕ್ಯಾನ್ಸರ್​​ ಮಕ್ಕಳು ತುತ್ತಾಗುತ್ತಿದ್ದಾರೆ ಎಂದು ಕಿದ್ವಾಯಿ ಆಸ್ಪತ್ರೆಯಿಂದ ಆತಂಕಕಾರಿ ವರದಿ ಬಹಿರಂಗವಾಗಿದೆ.

ಕರ್ನಾಟಕದಲ್ಲಿ ವರ್ಷಕ್ಕೆ 3 ಸಾವಿರ ಪ್ರಕರಣಗಳು

ಪ್ರತಿ ವರ್ಷ ವಿಶ್ವದಾದ್ಯಂತ ಸುಮಾರು 5 ಲಕ್ಷ ಮಕ್ಕಳು ಹಾಗೂ ದೇಶದಲ್ಲಿ 50 ಸಾವಿರ ಮಕ್ಕಳು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕರ್ನಾಟಕದಲ್ಲಿ ಸುಮಾರು 3 ಸಾವಿರ ಪ್ರಕರಣಗಳು ದಾಖಲಾಗಿದ್ದು, ಕಿದ್ವಾಯಿ ಸ್ಮಾರಕ ಗಂಢಿ ಸಂಸ್ಥೆಯಲ್ಲಿ ಪ್ರತಿವರ್ಷ ಸುಮಾರು 800 ಮಕ್ಕಳುಕ್ಯಾನ್ಸರ್​ ಚಿಕಿತ್ಸೆಗಾಗಿ ದಾಖಲಾಗುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಚಿಕಿತ್ಸೆ ಹಾಗೂ ಆರೈಕೆಗೆ ಸಂಸ್ಥೆ ಪ್ರತ್ಯೇಕ ಕಪೂರ್ ಬ್ಲಾಕ್ ಹೊಂದಿದೆ. ಮಕ್ಕಳ ವಿಭಾಗದಲ್ಲಿ ನಿತ್ಯ 4ರಿಂದ 5 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಶೇ 80ರಷ್ಟು ಮಕ್ಕಳು ಈ ರೋಗದಿಂದ ಗುಣಮುಖರಾಗುತ್ತಿದ್ದಾರೆ. ದೇಶದಲ್ಲೂ ಗುಣಮುಖರಾಗುವವರ ಸಂಖ್ಯೆ ಹೆಚ್ಚುತ್ತಿದೆ. ಇನ್ನೂ ಉತ್ತಮ ಫಲಿತಾಂಶ ಬರಬೇಕೆಂದರೆ ರೋಗವನ್ನು ಆರಂಭದಲ್ಲೇ ಪತ್ತೆ ಮಾಡಿ, ಸುಲಭ ಮಾರ್ಗದಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ಕಿದ್ವಾಯಿ ಸಂಸ್ಥೆ ಸಲಹೆ ನೀಡಿದೆ.

ಇದನ್ನೂ ಓದಿ: ಬೆಂಗಳೂರು: ಸಾಂಕ್ರಾಮಿಕ ರೋಗಗಳ ಜತೆಗೆ ಹೆಚ್ಚಿದ ಚರ್ಮ ಸಮಸ್ಯೆಗಳು, ತಜ್ಞ ವೈದ್ಯರು ನೀಡಿದ ಸಲಹೆ ಇಲ್ಲಿದೆ

ರಿಪಿಟೆಡ್ ಇನ್ಫೆಕ್ಷನ್ ನಿಂದ ಜೆನೆಟಿಕಲ್ ಚೇಂಜ್ ಆಗಿ ಇಮ್ಯುನಿಟಿ ಪವರ್ ಕುಸಿದು ಮಕ್ಕಳು ಕ್ಯಾನ್ಸರ್​​ ತುತ್ತಾಗುತ್ತಿದ್ದಾರೆ. ಆರಂಭದಲ್ಲೇ ಕ್ಯಾನ್ಸರ್ ಪತ್ತೆ ಹಚ್ಚೋದು ಒಂದು ಸವಾಲಾಗಿದೆ ಎಂದು ಕ್ಯಾನ್ಸರ್ ಮಕ್ಕಳ ತಜ್ಞ ಅರುಣ್ ಹೇಳಿದ್ದಾರೆ.

ಮಕ್ಕಳ ಕ್ಯಾನರ್​​ ಕುರಿತು ಕಿದ್ವಾಯಿ ಸಂಸ್ಥೆಯಿಂದ ಜಾಗೃತಿ

ಮಕ್ಕಳ ಕ್ಯಾನ್ಸರ್​​ ಕುರಿತು ಕಿದ್ವಾಯಿ ಸಂಸ್ಥೆಯು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಬೆಂಗಳೂರು ನಗರದ ಮೆಟ್ರೋ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಚಿತ್ರ ರಚಿಸಿ ಮಕ್ಕಳಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಕ್ಯಾನ್ಸರ್​ಗೆ ಸಂಬಂಧಿದ ಸವಾಲುಗಳು ಮತ್ತು ಕಾಯಿಲೆಯನ್ನು ಬೇಗ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದು ಹೇಗೆ ಎಂಬುದರ ಕುರಿತು ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ.

ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ್​ ಲಕ್ಷಣಗಳು

ವಾರದಿಂದ ಕಾಡುವ ಜ್ವರ, ಎರಡು ವಾರಕ್ಕೂ ಹೆಚ್ಚು ಕುತ್ತಿಗೆ ಭಾಗದಲ್ಲಿ ಊತ ಇರುವುದು ಹಾಗೂ ಹೊಟ್ಟೆ ಅಥವಾ ದೇಹದ ಯಾವುದೇ ಭಾಗದಲ್ಲಿ ಗಡ್ಡೆ ಅಥವಾ ಊತ ಕಂಡು ಬರುವುದು, ಪದೇ ಪದೇ ವಾಂತಿ ಮತ್ತು ತಲೆ ನೋವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ