ನಿಮ್ಮ ಮಕ್ಕಳ ಪ್ರತಿಭೆಯನ್ನು ಎಲ್ಲೆಡೆ ಸಾರಲು ನಾವು ಸಿದ್ಧ, ನೀವು ಕೂಡ ರೆಡಿನಾ?, ಹಾಗಾದರೆ ಇನ್ನೇಕೆ ತಡ. ಈ ಬಾರಿಯ ಮಕ್ಕಳ ದಿನಾಚರಣೆಯನ್ನು ಸ್ವಲ್ಪ ವಿಶೇಷವಾಗಿ ಆಚರಿಸಲು ಟಿವಿ9 ಕನ್ನಡ ಡಿಜಿಟಲ್ ಸಿದ್ಧವಾಗಿದೆ. ನವೆಂಬರ್ 14 ರಂದು ನಡೆಯುವ ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳಿಗಾಗಿ ಒಂದು ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ.
14 ವರ್ಷದೊಳಗಿನ ಮಕ್ಕಳು ನಿಮ್ಮ ಮನೆಯಲ್ಲಿದ್ದರೆ ಸಾಮಾಜಿಕ, ಸಾಹಿತ್ಯ, ಕಲೆ, ತಂತ್ರಜ್ಞಾನ, ವಿಜ್ಞಾನ, ಹೀಗೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರೆ ನಿಮ್ಮ ಮಕ್ಕಳ ಪ್ರತಿಭೆಯನ್ನು ಎಲ್ಲೆಡೆ ಸಾರಲು ಇದೊಂದು ಉತ್ತಮ ಅವಕಾಶ.
ನೀವು ಮಾಡಬೇಕಾಗಿದ್ದಿಷ್ಟೆ:
ನಿಮ್ಮ ಮಗುವಿನ ಸಾಧನೆಯ ವಿವರ, ಮಗು ಗಳಿಸಿದ ಸಾಧನೆಯ ಸರ್ಟಿಫಿಕೇಟ್, ಮಗುವಿನ ಒಂದು ಭಾವಚಿತ್ರ, ತಂದೆ-ತಾಯಿಯ ಹೆಸರು, ವಿಳಾಸದ ಜತೆಗೆ ಮಗುವಿನ ಪ್ರಾವಿಣ್ಯತೆ ಸಂಗೀತ ಮತ್ತು ಮನರಂಜನೆ ಕುರಿತಾಗಿದ್ದರೆ ಒಂದು 2-3 ನಿಮಿಷದ ವಿಡಿಯೋವನ್ನು ಮಾಡಿ ಟಿವಿ9 ಡಿಜಿಟಲ್ಗೆ ಇ-ಮೇಲ್ ಮೂಲಕ ಕಳುಹಿಸಿ.
ಅದರಲ್ಲಿ ಆಯ್ದ ಪ್ರತಿಭೆಗಳನ್ನು ಟಿವಿ9 ಕನ್ನಡ ಡಿಜಿಟಲ್ನಲ್ಲಿ ಪ್ರಕಟಿಸಲಾಗುವುದು. ನೀವು ನವೆಂಬರ್ 13ರಂದು ಭಾನುವಾರ ಮಧ್ಯಾಹ್ನ 12 ಗಂಟೆಯೊಳಗೆ ನಮಗೆ ಕಳುಹಿಸಬೇಕು.
ನಮ್ಮ ಇ-ಮೇಲ್ ವಿಳಾಸ: tv9kannadadigital@gmail.com
Published On - 4:28 pm, Mon, 7 November 22