ಟಿವಿ ರಿಮೋಟ್​ಗಾಗಿ ಅಣ್ಣ-ತಮ್ಮ ಜಗಳ: ಸಿಟ್ಟಿಗೆದ್ದು ಕತ್ತರಿ‌ ಎಸೆದೆ ತಂದೆ, ಹಿರಿಮಗ ಸಾವು

| Updated By: ರಮೇಶ್ ಬಿ. ಜವಳಗೇರಾ

Updated on: Oct 15, 2023 | 1:59 PM

ಟಿವಿ ರಿಮೋಟ್​​ ವಿಚಾರಕ್ಕೆ ಇಬ್ಬರು ಮಕ್ಕಳ ನಡುವೆ ಗಲಾಟೆ ನಡೆದಿದ್ದು, ಇದರಿಂದ ಕೋಪಗೊಂಡ ತಂದೆ ಎಸೆದಿದ್ದ ಕತ್ತರಿ ಹಿರಿಮಗನನ್ನು ಬಲಿಪಡೆದುಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಟಿವಿ ರಿಮೋಟ್​ಗಾಗಿ ಅಣ್ಣ-ತಮ್ಮ ಜಗಳ: ಸಿಟ್ಟಿಗೆದ್ದು ಕತ್ತರಿ‌ ಎಸೆದೆ ತಂದೆ, ಹಿರಿಮಗ ಸಾವು
ವಿದ್ಯಾರ್ಥಿ ಸಾವು
Follow us on

ಚಿತ್ರದುರ್ಗ, (ಅಕ್ಟೋಬರ್ 15): ‘ಸಿಟ್ಟಿನ ಕೈಗೆ ಬುದ್ಧಿ ಕೊಡಬಾರದು’ ಮಾತೇ ಇದೆ. ಒಂದು ವೇಳೆ ಸಿಟ್ಟಿನ ಕೈಗೆ ಬಿದ್ಧಿ ಕೊಟ್ಟರೆ ಏನೆಲ್ಲಾ ಅನಾಹುತ ಆಗಬಹುದು ಎನ್ನುವುದಕ್ಕೆ ಈ ಸುದ್ದಿ ಉದಾಹರಣೆ. ಹೌದು….ಟಿವಿ ರಿಮೋಟ್​ಗಾಗಿ ಅಣ್ಣ-ತಮ್ಮನ ನಡುವೆ ಜಗಳ ನಡೆದಿದ್ದು, ಈ ವೇಳೆ ಸಿಟ್ಟಿಗೆದ್ದ ತಂದೆ ಕೈಗೆ ಸಿಕ್ಕ ಕತ್ತರಿಯನ್ನು ಜೋರಾಗಿ ಎಸೆದಿದ್ದು, ಅದು ಹೋಗಿ ಹಿರಿಮಗ ಚಂದ್ರಶೇಖರ್ ಕುತ್ತಿಗೆಗೆ ಬಿದ್ದು ಮೃತಪಟ್ಟಿದ್ದಾನೆ. ಈ ದುರ್ಘಟನೆ ಚಿತ್ರದುರ್ಗ (Chitradruga) ಜಿಲ್ಲೆಯ ಮೊಳಕಾಲ್ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಂದ್ರಶೇಖರ್ (16) ಅಪ್ಪನ ಕೋಪಕ್ಕೆ ಬಲಿಯಾದ ಯುವಕ.

ಚಂದ್ರಶೇಖರ್(16), ಸಹೋದರ ಪವನ್ (14) ಟಿವಿ ರಿಮೋಟ್ ಗಾಗಿ ಗಲಾಟೆ ಮಾಡಿಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ತಂದೆ ಲಕ್ಷ್ಮಣಬಾಬು, ಕೈಗೆ ಸಿಕ್ಕ ಕತ್ತರಿ ಎಸೆದಿದ್ದಾನೆ. ಅದು ನೇರವಾಗಿ ಹೋಗಿ ಹಿರಿಮಗ ಚಂದ್ರಶೇಖರ್​ನ ಕುತ್ತಿಗೆಗೆ ತಾಗಿದೆ. ದುರದೃಷ್ಟವಶಾತ್ ತೀವ್ರ ರಕ್ತ ಸ್ರಾವವಾಗಿ ಚಂದ್ರಶೇಖರ್ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ರಾಯಚೂರು: ಯರಮರಸ್ ಬಳಿ ಅರೆಬೆತ್ತಲೆ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

ಪಾಳು ಬಿದ್ದ ಮನೆಯಲ್ಲಿ ನವಜಾತ ಶಿಶು ಪತ್ತೆ

ಬೆಂಗಳೂರು: ದೇವನಹಳ್ಳಿ ತಾಲೂಕಿನ ಬೊಮ್ಮವಾರ ಗ್ರಾಮದ ಪಾಳು ಬಿದ್ದ ಮನೆಯಲ್ಲಿ ನವಜಾತ ಶಿಶು ಪತ್ತೆಯಾಗಿದೆ. ಮಂಜುನಾಥ್ ಎಂಬುವವರಿಗೆ ಸೇರಿದ ಪಾಳುಬಿದ್ದ ಮನೆಯಲ್ಲಿ ಒಂದೆರೆಡು ದಿನದ ಹಿಂದೆ ಹುಟ್ಟಿರುವ ನವಜಾತ ಶಿಶು ಪತ್ತೆಯಾಗಿದೆ. ಇಂದು(ಭಾನುವಾರ) ಬೆಳಗ್ಗೆ ಮನೆ ಬಳಿ ನಾಯಿಗಳು ಕಚ್ಚುತ್ತಿದ್ದ ವೇಳೆ ಮಗು ಕಿರುಚಾಡಿದ್ದರಿಂದ ಸ್ಥಳೀಯರು ಹೋಗಿ ನೋಡಿದ್ದಾರೆ. ಸ್ಥಳಕ್ಕೆ ಮಕ್ಕಳ ಸಂರಕ್ಷಣಾಧಿಕಾರಿಗಳು ಹಾಗೂ ಪೊಲೀಸರ ಭೇಟಿ ಪರಿಶೀಲನೆ ನಡೆಸಿದರು. ಇನ್ನು ಮಗು ಇಲ್ಲಿಗೆ ಯಾರು ತಂದು ಹಾಕಿದ್ರು? ಯಾರದ್ದು ಇದು ಮಗ? ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರೈಲಿಗೆ ಸಿಲುಕಿ ಅಪರಿಚಿತ ಯುವಕ ಸಾವು

ರೈಲಿಗೆ ಸಿಲುಕಿ ಅಪರಿಚಿತ ಯುವಕ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲೂಕಿನ ಹನಕೆರೆ ಬಳಿಯ ರೈಲು ನಿಲ್ದಾಣದಲ್ಲಿ ನಡೆದಿದೆ. ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಮಾರ್ಗದಲ್ಲಿ ಈ ದುರ್ಘಟನೆ ಸಂಭವಿಸಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ರೈಲ್ವೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ, ಮೃತ ದೇಹವನ್ನು ಮಿಮ್ಸ್ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.

ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:00 pm, Sun, 15 October 23