Chitradurga News: ದೇವಸಮುದ್ರದಲ್ಲಿ ಪೊಲೀಸರ ದಾಳಿ, ಮನೆಯಲ್ಲಿ 81 ನಾಡಬಾಂಬ್ ಪತ್ತೆ
ಆಂಧ್ರದಿಂದ ನಾಡಬಾಂಬ್ ಸಾಗಣೆ ಜಾಲವನ್ನು ಚಿತ್ರದುರ್ಗ ಪೊಲೀರು ಬೇಧಿಸಿದ್ದು, ಒಂದು ಮನೆಯಲ್ಲಿ ಬರೋಬ್ಬರಿ 81 ನಾಡಬಾಂಬ್ ಪತ್ತೆಯಾಗಿವೆ.
ಚಿತ್ರದುರ್ಗ, (ಜುಲೈ 19): ಹಂದಿ ಬೇಟೆಗೆ ಆಂಧ್ರದಿಂದ ನಾಡಬಾಂಬ್ ಸಾಗಣೆ ಜಾಲವನ್ನು ಪೊಲೀರು ಬೇಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ದೇವಸಮುದ್ರ ಗ್ರಾಮದ ಮನೆಯೊಂದರ ಮೇಲೆ ಪೊಲೀಸರು ದಾಳಿ ಮಾಡಿದ್ದು, 81 ನಾಡಬಾಂಬ್ ವಶಡಿಸಿಕೊಂಡಿದ್ದಾರೆ. ದೇವಸಮುದ್ರದ ಸುಮನ್ ಎಂಬುವರ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದು, ಈ ವೇಳೆ ಕಾಡುಪ್ರಾಣಿ ಬೇಟೆಗೆ ಸಂಗ್ರಹಿಸಿಟ್ಟಿದ್ದ ನಾಡಬಾಂಬ್ ಪತ್ತೆಯಾಗಿವೆ. ನಾಡಬಾಂಬ್ ಸಂಗ್ರಹಿಸಿಟ್ಟಿದ್ದ ಆರೋಪಿ ಸುಮನ್, ಆಂಧ್ರ ಮೂಲದ ಗಂಗಣ್ಣ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಸಿಕ್ಕಿರುವ ನಾಡಬಾಂಬ್ಗಳ್ನು ಬಾಂಬ್ ಸ್ಕ್ವಾಡ್ ದಳವು ಚಿತ್ರದುರ್ಗ ತಾಲೂಕಿನ ಸಿಬಾರ ಗ್ರಾಮದ ಬಳಿ ನಿಷ್ಕ್ರಿಯಗೊಳಿಸಿದೆ. ಮೊಳಕಾಲ್ಮೂರು ಸಿಪಿಐ ಸತೀಶ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಈ ಸಂಬಂಧ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಉದ್ಯಮಿ ಮನೆಗೆ ನುಗ್ಗಿ ಕಳ್ಳತನ ಪ್ರಕರಣ; ಮೂವರು ಆರೋಪಿಗಳನ್ನ ಬಂಧಿಸಿದ ಪೊಲೀಸರು