ACB Raid: ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಅಬಕಾರಿ ಡಿಸಿ ನಾಗಶಯನ

ACB Raid: ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಅಬಕಾರಿ ಡಿಸಿ ನಾಗಶಯನ
ಎಸಿಬಿ ದಾಳಿ

ಎಸಿಬಿ ಡಿವೈಎಸ್ಪಿ ಮಂಜುನಾಥ್, ಸಿಪಿಐ ಮಧುಸೂದನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಬಾರ್ ಮಾಲೀಕ, ಉದ್ಯಮಿ, ಮಾಜಿ‌ ಜಿ.ಪಂ‌ ಸದಸ್ಯ ಬಾಬುರೆಡ್ಡಿ ಬಳಿ 2ಲಕ್ಷ 28ಸಾವಿರ ರೂ. ಪಡೆಯುವ ವೇಳೆ ಅಬಕಾರಿ ಡಿಸಿ ನಾಗಶಯನ ಎಸಿಬಿ ಬಲೆಗೆ ಬಿದ್ದಿದ್ದಾರೆ.

TV9kannada Web Team

| Edited By: Ayesha Banu

May 10, 2022 | 9:53 PM

ಚಿತ್ರದುರ್ಗ: ಜಿಲ್ಲೆಯ ಅಬಕಾರಿ ಡಿಸಿ ಎಸಿಬಿ (ACB Raid) ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ನಗರದ ಜೆಸಿಆರ್ ಬಡಾವಣೆಯ ಕಚೇರಿಯಲ್ಲಿ ಅಬಕಾರಿ ಡಿಸಿ ನಾಗಶಯನ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಅಬಕಾರಿ ಡಿಸಿ ವಾಹನ ಚಾಲಕ ಮೌಸಿನ್ ಖಾನ್ ಬಳಿ ಬಾರ್ ಲೈಸನ್ಸ್ ರಿನಿವಲ್ ಗಾಗಿ 3ಲಕ್ಷ 28 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 1ಲಕ್ಷ 28 ಸಾವಿರ ರೂಪಾಯಿ ಮುಂಗಡ ಪಡೆದಿದ್ದರು. ಬಾರ್ ಮಾಲೀಕ, ಉದ್ಯಮಿ, ಮಾಜಿ‌ ಜಿ.ಪಂ‌ ಸದಸ್ಯ ಬಾಬುರೆಡ್ಡಿ ಬಳಿ 2ಲಕ್ಷ 28ಸಾವಿರ ರೂ. ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಎಸಿಬಿ ಡಿವೈಎಸ್ಪಿ ಮಂಜುನಾಥ್, ಸಿಪಿಐ ಮಧುಸೂದನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಅಬಕಾರಿ ಡಿಸಿ ನಾಗಶಯನ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಅಬಕಾರಿ ಡಿಸಿ ನಾಗಶಯನ ಪತ್ನಿ ಕವಿತಾ ಐಪಿಎಸ್ ಅಧಿಕಾರಿಯಾಗಿದ್ದಾರೆ. ಅಲ್ಲದೆ ನಾಗಶಯನ ರಾಜಕೀಯ ವಲಯದಲ್ಲೂ ಭಾರೀ ಪ್ರಭಾವಿಗಳ ಹಿನ್ನಲೆ ಹೊಂದಿದ್ದಾರೆ.

ಎಸಿಬಿ ಬಲೆಗೆ ಬಿದ್ದ ಮೈಸೂರು ಪಾಲಿಕೆ ಅಧಿಕಾರಿ ಇನ್ನು ಮತ್ತೊಂದು ಕಡೆ ಮೈಸೂರು ಪಾಲಿಕೆ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಎಸಿಬಿ ಎಸ್​ಪಿ ವಿ.ಜೆ.ಸುಜೀತ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ್ದು 3 ಸಾವಿರ ಲಂಚ ಪಡೆಯುವಾಗ ಪಾಲಿಕೆ ವಲಯ ಕಚೇರಿ 4ರ ಜೆಇ ಗುರುಸಿದ್ದಯ್ಯ ಎಸಿಬಿ ಬಲೆಗೆ ಬಿದ್ದಿದ್ದಾರೆ. ಗೋಕುಲಂ 2 ನೇ ಹಂತದ ಮನೆಗೆ ಪ್ಲಾನ್ ಮಂಜೂರು ಮಾಡಲು 6 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗುರುಸಿದ್ದಯ್ಯ 3 ಸಾವಿರ ಪಡೆದಿದ್ದರು. ತಮ್ಮ ಕಚೇರಿಯಲ್ಲೇ 3 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ ಆಗಿ ಸಿಕ್ಕಿಬಿದ್ದಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada