ಹಣ ದುರುಪಯೋಗ ಆರೋಪ: ಮುರುಘಾ ಶ್ರೀ ವಿರುದ್ಧ ಚಿತ್ರದುರ್ಗ ಡಿಸಿಗೆ ದೂರು ನೀಡಿದ ಮಾಜಿ ಸಚಿವ ಹೆಚ್.ಏಕಾಂತಯ್ಯ

ಪೋಕ್ಸೋ ಪ್ರಕರಣದಲ್ಲಿ ಸಿಲುಕಿ ಜಾಮೀನ ಮೇಲೆ ಹೊರಬಂದಿರುವ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಬಸವ ಪುತ್ಥಳಿ ನಿರ್ಮಾಣದ ಹಣ ದುರುಪಯೋಗ ಮಾಡಿದ ಆರೋಪ ಸಂಬಂಧ ಚಿತ್ರದುರ್ಗ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ.

ಹಣ ದುರುಪಯೋಗ ಆರೋಪ: ಮುರುಘಾ ಶ್ರೀ ವಿರುದ್ಧ ಚಿತ್ರದುರ್ಗ ಡಿಸಿಗೆ ದೂರು ನೀಡಿದ ಮಾಜಿ ಸಚಿವ ಹೆಚ್.ಏಕಾಂತಯ್ಯ
ಮಾಜಿ ಸಚಿವ ಹೆಚ್.ಏಕಾಂತಯ್ಯ ಮತ್ತು ಮುರುಘಾ ಶ್ರೀ
Edited By: Rakesh Nayak Manchi

Updated on: Dec 02, 2023 | 12:19 PM

ಚಿತ್ರದುರ್ಗ, ಡಿ.2: ಬಸವ ಪುತ್ಥಳಿ ನಿರ್ಮಾಣದ ಹಣ ದುರುಪಯೋಗ ಮಾಡಿದ ಆರೋಪ ಸಂಬಂಧ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ (Shivamurthy Murugha Sharanaru) ವಿರುದ್ಧ ಚಿತ್ರದುರ್ಗ (Chitradurga) ಜಿಲ್ಲಾಧಿಕಾರಿಯವರಿಗೆ ದೂರು ನೀಡಲಾಗಿದೆ. ಟೆಂಡರ್ ಕರೆಯದೆ 4 ಕೋಟಿ ಮೌಲ್ಯದ ಕಬ್ಬಿಣ, ಸಿಮೆಂಟ್ ಖರೀದಿ ಹಾಗೂ ನಿಯಮ ಮೀರಿ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿದ ಆರೋಪಗಳ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗಿದೆ.

ಮುರುಘಾಮಠದಿಂದ ಮಠದ ಹಿಂಭಾಗದಲ್ಲಿ 28 ಕೋಟಿ 20 ಲಕ್ಷ ವೆಚ್ಚದಲ್ಲಿ ಬಸವ ಪುತ್ಥಳಿ ನಿರ್ಮಾಣ ಯೋಜನೆ ರೂಪಿಸಲಾಗಿದೆ. ರಾಜ್ಯ ಸರ್ಕಾರದಿಂದ ಈವರೆಗೆ 35 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಈವರೆಗೆ 24 ಕೋಟಿ 50 ಲಕ್ಷ ರೂ. ಖರ್ಚಾಗಿದೆ.

ಇದನ್ನೂ ಓದಿ: Chitradurga Muruga shree: ಮುರುಘಾ ಶ್ರೀಗೆ ಮತ್ತೊಂದು ಬಿಗ್ ರಿಲೀಫ್: ಪ್ರಕರಣಗಳ ವಿಚಾರಣೆಗೆ ಹೈಕೋರ್ಟ್ ತಡೆ

ಅಲ್ಲದೆ, ಟೆಂಡರ್ ಕರೆಯದೆ 4 ಕೋಟಿ ಮೌಲ್ಯದ ಕಬ್ಬಿಣ, ಸಿಮೆಂಟ್ ಖರೀದಿಸಲಾಗಿದ್ದು, ಪ್ರತಿಮೆ ನಿರ್ಮಾಣಕ್ಕೆ ನಿಯಮ ಮೀರಿ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಈ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವ ಹೆಚ್.ಏಕಾಂತಯ್ಯ ಅವರು ಚಿತ್ರದುರ್ಗ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us