ಚಿತ್ರದುರ್ಗ: ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ದುರಂತವೊಂದು ತಪ್ಪಿದೆ. ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ ತಾಲೂಕಿನ ಅಲ್ಲಾಪುರ ಗ್ರಾಮದ ಬಳಿ ಈ ಘಟನೆ ನಡೆದಿದೆ. ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಕೆಎಸ್ಆರ್ಟಿಸಿ (KSRTC) ಬಸ್ (Bus)ನ ಹಿಂಬದಿಯ ಎಡ ವ್ಹೀಲ್ ಸಂಪೂರ್ಣ ಸಡಿಲಗೊಂಡು ಇನ್ನೇನು ಬಸ್ಸಿಂದ ಸಡಿಲಗೊಳ್ಳಬೇಕು (dismantle) ಸರಿಯಾಗಿ ಅದೇ ವೇಳೆ ಅಚಾನಕ್ಕಾಗಿ ಬಸ್ಸಿನ ಚಾಲಕ ಅರುಣ್ ಅವರು ತಮ್ಮ ಎಡ ಬದಿಗೆ ಇರುವ ಕನ್ನಡಿಯತ್ತ (ರೇರ್ ಮಿರರ್ –Rear Mirror) ಕಣ್ಣು ಹೊರಳಿಸಿದ್ದಾರೆ. ಸರಿಯಾಗಿ ಆಗ ಗೊತ್ತಾಗಿದೆ… ಅಯ್ಯೋ ಇನ್ನೇನು ಹಿಂಬದಿ ಚಕ್ರ ಕಳಚಿಬೀಳಲಿದೆ ಎಂಬುದು ಅವರ ಅರಿವಿಗೆ ಬಂದಿದೆ.
ಮತ್ತೆ ಹಿಂದೆಮುಂದೆ ನೋಡದೆ ಚಾಲಕ ಅರುಣ್ ಅವರು ಬಸ್ ಅನ್ನು ನಿಧಾನಕ್ಕೆ ತಹಬಂದಿಗೆ ತಂದವರೆ ಬಸ್ಸನ್ನು ರಸ್ತೆ ಬದಿ ನಿಲ್ಲಿಸಿ, ದೀರ್ಘ ನಿಟ್ಟುಸಿರುಬಿಟ್ಟಿದ್ದಾರೆ. ಸಹೋದ್ಯೋಗಿ ನಿರ್ವಾಹಕ ಶರಣಪ್ಪ ಜೊತೆ ಮಾತನಾಡುತ್ತಾ, ಸಧ್ಯ ಬಚಾವ್ ಆದವಪ್ಪೋ! ಎಂದಿದ್ದಾರೆ.
ಕಿತ್ತೋಗಿರೋ ಚಕ್ರದೊಂದಿಗೆ ಚಲಿಸುತ್ತಿದ್ದ ಬಸ್…
ಕಿತ್ತೋಗಿರೋ ಚಕ್ರದೊಂದಿಗೆ ಚಲಿಸುತ್ತಿದ್ದ ಬಸ್ ಅನ್ನು ನಿಲ್ಲಿಸಿ ಅಪಾಯ ತಪ್ಪಿಸಿದ್ದಾರೆ. ಚಾಲಕ ಅರುಣ್ ಮತ್ತು ನಿರ್ವಾಹಕ ಶರಣಪ್ಪಗೆ ಕೃತಜ್ಞತೆ ಹೇಳಿದ್ದಾರೆ ಪ್ರಯಾಣಿಕರು. ಅಂದಹಾಗೆ ಬಸ್ ನಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಎಲ್ಲರೂ ಈಗ ಸುರಕ್ಷಿತ, ಸುರಕ್ಷಿತ! ಸದ್ಯಕ್ಕೆ, ಸಾರಿಗೆ ಬಸ್ ನ ವ್ಹೀಲ್ ಸಡಿಲಗೊಂಡು ನಿಂತಿರುವ ಬಸ್ ನ ವಿಡಿಯೋ ವೈರಲ್ ಆಗಿದೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:38 pm, Mon, 26 December 22