ಬಂಜಾರ ಗುರುಪೀಠದ ಪೀಠಾಧ್ಯಕ್ಷ ಸೇವಾಲಾಲ್ ಶ್ರೀ ವಿರುದ್ಧ ಗಂಭೀರ ಆರೋಪ; ಪೀಠ ತ್ಯಜಿಸುವಂತೆ ಬಂಜಾರ ಮುಖಂಡರ ಆಗ್ರಹ
ಸೇವಾಲಾಲ್ ಶ್ರೀ ಸಂಸಾರಿ ಆಗಿದ್ದು ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಧರ್ಮಗುರು ಸಂತ ಸೇವಾಲಾಲರು ಮತ್ತು ಸಮಾಜಕ್ಕೆ ಕಳಂಕ ತರುತ್ತಿದ್ದಾರೆ. ಈವರೆಗೆ ಪೀಠ ತ್ಯಜಿಸಲು ಅವಕಾಶ ನೀಡಿದ್ದೆವು. ಪೀಠ ತ್ಯಜಿಸದಿದ್ದರೆ ಮಠದ ಬಳಿ ಹೋರಾಟ ಆರಂಭ ಮಾಡುತ್ತೇವೆಂದು ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಚಿತ್ರದುರ್ಗ: ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಶ್ರೀ ವಿರುದ್ಧ ಬಂಜಾರ ಸಮಾಜದ ಮುಖಂಡರು ತಿರುಗಿಬಿದ್ದಿದ್ದಾರೆ. ಸೇವಾಲಾಲ್ ಶ್ರೀ ಸಂಸಾರಿ ಆಗಿದ್ದು ಅವರು ಪೀಠ ತ್ಯಜಿಸಬೇಕು ಎಂದು ಮುಖಂಡರು ಆಗ್ರಹಿಸಿದ್ದಾರೆ.
ಚಿತ್ರದುರ್ಗದ ಬಂಜಾರ ಗುರುಪೀಠದ ಮಠದಲ್ಲಿ ಗೊಂದಲ, ಆತಂಕ ಉಂಟಾಗಿದೆ. ಬಂಜಾರ ಸಮಾಜದ ಮುಖಂಡರಿಂದ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಶ್ರೀ ವಿರುದ್ಧ ಆರೋಪಗಳು ಕೇಳಿ ಬರುತ್ತಿವೆ. ಸೇವಾಲಾಲ್ ಶ್ರೀ ಸಂಸಾರಿ ಆಗಿದ್ದು ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಧರ್ಮಗುರು ಸಂತ ಸೇವಾಲಾಲರು ಮತ್ತು ಸಮಾಜಕ್ಕೆ ಕಳಂಕ ತರುತ್ತಿದ್ದಾರೆ. ಈವರೆಗೆ ಪೀಠ ತ್ಯಜಿಸಲು ಅವಕಾಶ ನೀಡಿದ್ದೆವು. ಪೀಠ ತ್ಯಜಿಸದಿದ್ದರೆ ಮಠದ ಬಳಿ ಹೋರಾಟ ಆರಂಭ ಮಾಡುತ್ತೇವೆಂದು ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಚಿತ್ರದುರ್ಗ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಂಜಾರ ಸಮಾಜದ ನಿಂಗಾ ನಾಯ್ಕ್, ಹಾಲೇಶ ನಾಯ್ಕ್, ಮಂಜಾ ನಾಯ್ಕ್, ರಾಜಾನಾಯ್ಕ್ ಸೇವಾಲಾಲ್ ಶ್ರೀ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ಈ ಆರೋಪದ ಬಗ್ಗೆ ಸೇವಾಲಾಲ್ ಬಂಜಾರ ಗುರುಪೀಠದ ಪೀಠಾದ್ಯಕ್ಷ ಸೇವಾಲಾಲ್ ಶ್ರೀ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ವಿರುದ್ಧದ ಆರೋಪಗಳು ಆಧಾರ ರಹಿತ. ಸುದ್ಧಿ ಗೋಷ್ಠಿ ನಡೆಸಿದವರಿಗೆ ಕ್ರಿಮಿನಲ್ ಹಿನ್ನೆಲೆಯಿದೆ. ಕೆಲ ವರ್ಷಗಳ ಹಿಂದೆ ನನ್ನನು ಕೋರ್ಟ್-ಕಚೇರಿ ಅಲೆಸಿದ್ದರು. ನನ್ನ ವಿರುದ್ಧ ಆರೋಪ ಮಾಡುತ್ತಿರುವವರು ಮಠ ಕಟ್ಟಿಕೊಟ್ಟಿಲ್ಲ. ಮಠ ಪೀಠ ತ್ಯಜಿಸುವಂತೆ ಕೇಳಲು ಇವರು ಯಾರು? ಸುಳ್ಳು ಆರೋಪ ಹೊರಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆರೋಪವನ್ನು ತಳ್ಳಿ ಹಾಕಿದ್ದಾರೆ.
ಇದನ್ನೂ ಓದಿ: ಅಮಿತ್ ಶಾ ಭೂಮಿ ಪೂಜೆ ಮಾಡಿ ಹೋಗಿದ್ದ ಸ್ಥಳವೀಗ ಹಾಳುಕೊಂಪೆ; ಸರ್ದಾರ್ ವಲ್ಲಭಭಾಯಿ ಪಟೇಲ್ ಅಭಿಮಾನಿಗಳ ಆಕ್ರೋಶ
Published On - 1:13 pm, Thu, 21 October 21