ಮುರುಘಾಮಠಕ್ಕೆ ಮಾದಾರ ಚನ್ನಯ್ಯಶ್ರೀ ಮತ್ತು ಗಾಣಿಗ ಮಠದ ಬಸವಕುಮಾರ್ ಶ್ರೀ ಭೇಟಿ; ಮಠದ ಸುತ್ತ ಪೊಲೀಸ್​ ಬಂದೋಬಸ್ತ್

| Updated By: ವಿವೇಕ ಬಿರಾದಾರ

Updated on: Aug 30, 2022 | 11:46 AM

ಮುರುಘಾಮಠಕ್ಕೆ ಬಸವಮೂರ್ತಿ ಮಾದಾರ ಚನ್ನಯ್ಯಶ್ರೀ ಮತ್ತು ಗಾಣಿಗ ಮಠದ ಬಸವಕುಮಾರ್ ಶ್ರೀಗಳು ಭೇಟಿ ನೀಡಿದ್ದಾರೆ.

ಮುರುಘಾಮಠಕ್ಕೆ ಮಾದಾರ ಚನ್ನಯ್ಯಶ್ರೀ ಮತ್ತು ಗಾಣಿಗ ಮಠದ ಬಸವಕುಮಾರ್ ಶ್ರೀ ಭೇಟಿ; ಮಠದ ಸುತ್ತ ಪೊಲೀಸ್​ ಬಂದೋಬಸ್ತ್
ಮಠದ ಸುತ್ತ ಪೊಲೀಸ್​ ಬಂದೋಬಸ್ತ್​​
Follow us on

ಚಿತ್ರದುರ್ಗ: ಮುರುಘಾಮಠಕ್ಕೆ (Muraga Mutt) ಬಸವಮೂರ್ತಿ ಮಾದಾರ ಚನ್ನಯ್ಯಶ್ರೀ ಮತ್ತು ಗಾಣಿಗ ಮಠದ ಬಸವಕುಮಾರ್ ಶ್ರೀಗಳು ಭೇಟಿ ನೀಡಿದ್ದಾರೆ. ಭೇಟಿ ಬಳಿಕ ಮುರುಘಾಮಠದಲ್ಲಿ ಮಾತನಾಡಿದ ಮಾದಾರ ಚನ್ನಯ್ಯಶ್ರೀಗಳು ಮಠ ಮತ್ತು ಪರಂಪರೆಯ ಜೊತೆಗೆ ಬದ್ಧವಾಗಿದ್ದೇವೆ. ನಾವು ಮುರುಘಾಮಠದ ಮುರುಘಾಶ್ರೀಗಳ ಶಿಷ್ಯರು. ಮುರುಘಾಮಠಕ್ಕೆ ಭಕ್ತ ಸಮೂಹವಿದೆ, ಆಡಳಿತ ಮಂಡಳಿಯಿದೆ ಎಂದರು.

ಗಂಭೀರ ಆಪಾದನೆ ವೇಳೆ ಮುರುಘಾಶ್ರೀ ಪೀಠ ತ್ಯಜಿಸಬೇಕೆಂಬ ಪ್ರಶ್ನೆಗೆ ಉತ್ತರ ನೀಡಿದ ಚನ್ನಯ್ಯ ಶ್ರೀ ಅದು ಭಕ್ತ ಸಮೂಹ ಮತ್ತು ಆಡಳಿತ ಮಂಡಳಿಗೆ ಬಿಟ್ಟ ವಿಚಾರ. ಅನೇಕ ದುರೀಣರು ಮಠಕ್ಕೇ ಬಂದು ಹೋಗುತ್ತಿದ್ದಾರೆ. ನಾವು ಅವರ ತೀರ್ಮಾನಕ್ಕೆ ಕಾಯುತ್ತಿದ್ದೇವೆ. ನಾವು ಮುರುಘಾಶ್ರೀ ಶಿಷ್ಯರಾಗಿದ್ದು ಬಹುದೊಡ್ಡ ತೀರ್ಮಾನದ ಬಗ್ಗೆ ಮಾತನಾಡಲಾಗದು. ಮಠ, ಪರಂಪರದ ಜತೆಗಿರುತ್ತೇವೆಂದು ಮುಜುಗರ ಇಲ್ಲದೆ ಹೇಳುತ್ತೇವೆ ಎಂದು ಹೇಳಿದರು.

ಷಡ್ಯಂತ್ರದ ಬಗ್ಗೆ ಬೇರೆ ಮುಖಂಡರು, ರಾಜಕಾರಣಿಳಂತೆ ನಾವು ಮಾತನಾಡುವುದು ಕಷ್ಟ. ನಿನ್ನೆ ಮುರುಘಾಶ್ರೀ ಅಜ್ಞಾತ ಸ್ಥಳಕ್ಕೆ ತೆರಳಿದ್ದ ಬಗ್ಗೆ ಅವರ ಜೊತೆ ಮಾತಾಡಿಲ್ಲ. ಮುರುಘಾಶ್ರೀಗಳು ದೊಡ್ಡವರು, ನಾವು ಅವರ ಶಿಷ್ಯರು. ಷಡ್ಯಂತ್ರ ಇರಬಹುದು, ಶ್ರೀಗಳು ನಮ್ಮ ಜತೆ ಮಾಹಿತಿ ಹಂಚಿಕೊಂಡಿಲ್ಲ ಎಂದು ತಿಳಿಸಿದರು.

ಮುರಘಾಶ್ರೀಗಳ ವಿರುದ್ಧ ಪೋಕ್ಸೋ ಕೇಸ್ ದಾಖಲು ಹಿನ್ನಲೆ ಮುರಘಾಶ್ರೀಗಳನ್ನು ಬಂಧನ ಮಾಡುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಪೋಕ್ಸೋ ಪ್ರಕರಣ ಮತ್ತು ಜಾತಿನಿಂದನೆ ಪ್ರಕರಣ ದಾಖಲಾದರು ಬಂಧನ ಮಾಡುತ್ತಿಲ್ಲ. ಸಾಮಾನ್ಯ ಜನರ ವಿರುದ್ಧ ಪ್ರಕರಣ ದಾಖಲಾಗಿದ್ದರೇ ಪೊಲೀಸರು ಸುಮ್ಮನೆ ಬಿಡುತ್ತಾ ಇರಲಿಲ್ಲವೆಂದು ಆಕ್ರೋಶ ಹೊರಹಾಕಿದ್ದಾರೆ.

ದಲಿತ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆ ಸಂತ್ರಸ್ತರಿರುವ ಬಾಲಮಂದಿರ ಸುತ್ತ ಪೊಲೀಸ್​ ಬಂದೋಬಸ್ತ್ ಮಾಡಲಾಗಿದ್ದು, ಬಾಲಮಂದಿರ ಮುಂದಿನ ರಸ್ತೆಯಲ್ಲಿ ಬ್ಯಾರಿಕೇಡ್​ ಅಳವಡಿಸಲಾಗಿದೆ. ಡಿಎಆರ್​ ಪೊಲೀಸರು ಸೇರಿ ಸ್ಥಳೀಯ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇಂದು ಸಂತ್ರಸ್ತರಿಂದ ನ್ಯಾಯಾದೀಶರ ಮುಂದೆ 164 ಹೇಳಿಕೆ ದಾಖಲೆ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:46 am, Tue, 30 August 22