ಚಿತ್ರದುರ್ಗ- ಕಾರು ಲಾರಿ ಡಿಕ್ಕಿ ಬೆಂಗಳೂರು ರೈಲ್ವೆ ಎಸ್​​ಪಿಗೆ ಗಾಯ, ಕಲಬುರಗಿ- ಬೈಕ್​​ಗೆ ಸಿಮೆಂಟ್ ಟ್ಯಾಂಕರ್ ಡಿಕ್ಕಿ ಇಬ್ಬರು ಶಿಕ್ಷಕರ ಸಾವು

| Updated By: ಸಾಧು ಶ್ರೀನಾಥ್​

Updated on: Dec 17, 2021 | 9:58 AM

ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕಡಗಂಚಿ ಬಳಿ ಬೈಕ್​​ಗೆ ಸಿಮೆಂಟ್ ಟ್ಯಾಂಕರ್ ಡಿಕ್ಕಿಯಾಗಿ ಶಾಲಾ ಶಿಕ್ಷಕರಿಬ್ಬರು ಮೃತಪಟ್ಟಿದ್ದಾರೆ. ಸಿದ್ದರಾಮಪ್ಪ(60) ಮತ್ತು ನಾನಾಗೌಡ ಪಾಟೀಲ್(55) ನಿಧನರಾದರು. ಸಿದ್ದರಾಮಪ್ಪ ಅವರು ಕಳೆದ ಕೆಲ ದಿನಗಳ ಹಿಂದಷ್ಟೇ ಸೇವೆಯಿಂದ ನಿವೃತ್ತಿಯಾಗಿದ್ದರು.

ಚಿತ್ರದುರ್ಗ- ಕಾರು ಲಾರಿ ಡಿಕ್ಕಿ ಬೆಂಗಳೂರು ರೈಲ್ವೆ ಎಸ್​​ಪಿಗೆ ಗಾಯ, ಕಲಬುರಗಿ- ಬೈಕ್​​ಗೆ ಸಿಮೆಂಟ್ ಟ್ಯಾಂಕರ್ ಡಿಕ್ಕಿ ಇಬ್ಬರು ಶಿಕ್ಷಕರ ಸಾವು
ಕಡಗಂಚಿ ಬಳಿ ಬೈಕ್​​ಗೆ ಸಿಮೆಂಟ್ ಟ್ಯಾಂಕರ್ ಡಿಕ್ಕಿಯಾಗಿ ಶಾಲಾ ಶಿಕ್ಷಕರಾದ ಸಿದ್ದರಾಮಪ್ಪ ಮತ್ತು ನಾನಾಗೌಡ ಪಾಟೀಲ್ ಕೊನೆಯುಸಿರೆಳೆದರು.
Follow us on

ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಸೀಬಾರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಲಾರಿ ಡಿಕ್ಕಿಯಾಗಿ ಬೆಂಗಳೂರು ರೈಲ್ವೆ ಎಸ್​​ಪಿ ಗಾಯಗೊಂಡಿದ್ದಾರೆ. ಇನ್ನು ಕಲಬುರಗಿ ಬಳಿ ಬೈಕ್​​ಗೆ ಸಿಮೆಂಟ್ ಟ್ಯಾಂಕರ್ ಡಿಕ್ಕಿ ಇಬ್ಬರು ಶಿಕ್ಷಕರು ಸಾವಿಗೀಡಾಗಿದ್ದಾರೆ. ಚಿತ್ರದುರ್ಗ ತಾಲೂಕಿನ ಸೀಬಾರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಂಗಳೂರು ರೈಲ್ವೆ SP ಸಂಚರಿಸುತ್ತಿದ್ದ ಕಾರು ಮತ್ತು ಲಾರಿಯ ಮಧ್ಯೆ ಅಪಘಾತವಾಗಿದೆ. ಕಾರಿನಲ್ಲಿದ್ದ ರೈಲ್ವೆ SP ಸಿರಿಗೌರಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುವ ವೇಳೆ ಅಪಘಾತ ಸಂಭವಿಸಿದೆ. ಲಾರಿ ಚಾಲಕನ ಅಜಾಗರೂಕತೆಯಿಂದ ಅಪಘಾತವಾಗಿದೆ ಎನ್ನಲಾಗಿದೆ. ರೈಲ್ವೆ ಎಸ್ಪಿ ಕಾರಿಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಗ್ರಾಮಾಂತರ ಠಾಣೆ ಸಿಪಿಐ ಬಾಲಚಂದ್ರ ನಾಯ್ಕ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಕಲಬುರಗಿ: ಬೈಕ್​​ಗೆ ಸಿಮೆಂಟ್ ಟ್ಯಾಂಕರ್ ಡಿಕ್ಕಿಯಾಗಿ ಶಿಕ್ಷಕರಿಬ್ಬರು ಸಾವು

ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕಡಗಂಚಿ ಬಳಿ ಬೈಕ್​​ಗೆ ಸಿಮೆಂಟ್ ಟ್ಯಾಂಕರ್ ಡಿಕ್ಕಿಯಾಗಿ ಶಾಲಾ ಶಿಕ್ಷಕರಿಬ್ಬರು ಮೃತಪಟ್ಟಿದ್ದಾರೆ. ಸಿದ್ದರಾಮಪ್ಪ(60) ಮತ್ತು ನಾನಾಗೌಡ ಪಾಟೀಲ್(55) ನಿಧನರಾದವರು. ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿದ್ದರಾಮಪ್ಪ ಅವರು ಕಳೆದ ಕೆಲ ದಿನಗಳ ಹಿಂದಷ್ಟೇ ಸೇವೆಯಿಂದ ನಿವೃತ್ತಿಯಾಗಿದ್ದರು. ನಿನ್ನೆ ಕೆಲಸದ ನಿಮಿತ್ತ ಸಿದ್ದರಾಮಪ್ಪ ಶಾಲೆಗೆ ಹೋಗಿದ್ದರು. ಇಬ್ಬರೂ ಶಿಕ್ಷಕರು ಆಳಂದ ತಾಲೂಕಿನ ರುದ್ರವಾಡಿ ಗ್ರಾಮದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಸಂಜೆ ಶಾಲೆಯಿಂದ ಮರಳಿ ಕಲಬುರಗಿ ನಗರಕ್ಕೆ ಹೊರಟಿದ್ದಾಗ ಅಪಘಾಥ ಸಂಭೌಇಸಿದೆ.

ಲೈನ್ ಮ್ಯಾನ್ ಕರ್ತವ್ಯಕ್ಕೆ ಅಡ್ಡಿ, 8 ಸಾವಿರ ದಂಡ

ತುಮಕೂರು: ಸರ್ಕಾರಿ ನೌಕರನ ಕರ್ತವ್ಯ ಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಜೆಎಂಎಫ್​ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜಗದೀಶ ಬಿಸೇರೊಟ್ಟಿ ಅವರು ಎಂಟು ಸಾವಿರ ರೂಪಾಯಿ ದಂಡ ವಿಧಿಸಿ, ಆದೇಶ ಮಾಡಿದ್ದಾರೆ. ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಗಂಗಪ್ಪ ಎನ್ನುವರು 21-7-2016 ರಂದು ಕುವೆಂಪು ಬಡಾವಣೆಯಲ್ಲಿ ವಿದ್ಯುತ್ ಬಿಲ್ ಬಾಕಿ ವಸೂಲಿಗೆ ತೆರಳಿದ್ದ ಸಂದರ್ಭದಲ್ಲಿ ಶ್ರೀನಿವಾಸ್ ಎಂಬುವರುಗಂಗಪ್ಪ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ತನಿಖೆ ನಡೆಸಿದ ಪಾವಗಡ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು‌. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎಂಟು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರ ಪರ ಸಹಾಯಕ ಸರ್ಕಾರಿ ಅಭಿಯೋಜಕ ವಿ ಮಂಜುನಾಥ್ ವಾದ ಮಂಡಿಸಿದ್ದರು.

Published On - 9:56 am, Fri, 17 December 21