ಚಿತ್ರದುರ್ಗದಲ್ಲಿ ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ; ಹತ್ಯೆ ಮಾಡಿ ಮಣ್ಣಲ್ಲಿ ಹೂತಿಟ್ಟಿದ್ದ ಆರೋಪಿಗಳು ಅಂದರ್
ಎಪ್ರಿಲ್ 25ರಂದು ನಾಪತ್ತೆಯಾಗಿದ್ದ ಯುವಕನ ಶವ ತಾಲೂಕಿನ ಕೆನ್ನೇಡ್ಲು ಗ್ರಾಮದ ಬಳಿ ಪತ್ತೆಯಾಗಿದೆ. ಜೋಗೇಶ ಪಾಳ್ಯ ಬಡಾವಣೆಯ ಗುರುಕಿರಣ್(20) ಮೃತ ವ್ಯಕ್ತಿ.
ಚಿತ್ರದುರ್ಗ: ಎಪ್ರಿಲ್ 25ರಂದು ನಾಪತ್ತೆಯಾಗಿದ್ದ ಯುವಕನ ಶವ ತಾಲೂಕಿನ ಕೆನ್ನೇಡ್ಲು ಗ್ರಾಮದ ಬಳಿ ಪತ್ತೆಯಾಗಿದೆ. ಜೋಗೇಶ ಪಾಳ್ಯ ಬಡಾವಣೆಯ ಗುರುಕಿರಣ್(20) ಮೃತ ವ್ಯಕ್ತಿ. ಯುವಕನನ್ನ ಹತ್ಯೆ(Murder) ಮಾಡಿ ಮಣ್ಣಲ್ಲಿ ಹೂತಿಟ್ಟಿದ್ದರು. ಇದೀಗ ಆರೋಪಿಗಳಾದ ರಮೇಶ, ಸೋಮ, ವಿರುಪಾಕ್ಷನನ್ನ ಪೊಲೀಸ(Police)ರು ಬಂಧಿಸಲಾಗಿದೆ. ಇನ್ನು ಕೊಲೆಗೆ ಕಾರಣ ಅವರೇ ಬಾಯ್ಬಿಟ್ಟಿದ್ದು, ಆರೋಪಿ ರಮೇಶನ ಪುತ್ರ ಗೋಪಿ ಎಂಬುವವನ ಮೇಲೆ ಗುರುಕಿರಣ್ ಹಲ್ಲೆ ಮಾಡಿದ್ದ. ಇದರಿಂದ ಗೋಪಿ ಕಣ್ಣು ಕಳೆದುಕೊಂಡಿದ್ದನಂತೆ. ಈ ಹಿನ್ನೆಲೆ ಹತ್ಯೆ ರಮೇಶ್ ಮತ್ತಿತರರು ಗುರುಕಿರಣ್ ಹತ್ಯೆಗೆ ಸ್ಕೆಚ್ ಹಾಕಿ, ಆತನನ್ನ ಹತ್ಯೆ ಮಾಡಿದ್ದಾರೆ. ಈ ಕುರಿತು ಚಿತ್ರದುರ್ಗ ಕೋಟೆ ಠಾಣೆ ಪೊಲೀಸರಿಂದ ಪ್ರಕರಣ ಬಯಲಾಗಿದೆ.
ಕಾರು, ಬೈಕ್ ಮುಖಾಮುಖಿ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು
ಮಡಿಕೇರಿ: ತಾಲೂಕಿನ ಹೊದವಾಡ ಗ್ರಾಮದಲ್ಲಿ ಕಾರು, ಬೈಕ್ ಮುಖಾಮುಖಿ ಡಿಕ್ಕಿಯಾಗಿ ಸವಾರ ಅಪ್ಪಾಜಿ(19) ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಿಂಬದಿ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:Dharwad News: ಬಂಗಾರದ ಆಸೆಗೆ ಕಬ್ಬಿನ ಗದ್ದೆಯಲ್ಲಿ ವೃದ್ಧೆಯ ಹತ್ಯೆ: ಆರೋಪಿ ಅಂದರ್
ಜಾಗದ ವಿಚಾರವಾಗಿ ಗಲಾಟೆ, ಹಲ್ಲೆ ಆರೋಪ
ವಿಜಯಪುರ: ಸರ್ಕಾರಿ ಜಾಗದಲ್ಲಿ ಅಂಗಡಿ ಹಾಕಿಕೊಂಡವರ ಮೇಲೆ ಕಾಂಗ್ರೆಸ್ ಮುಖಂಡ ಬಾಪುಗೌಡ ಪಾಟೀಲ್ ಹಾಗೂ ಬೆಂಬಲಿಗರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಘಟನೆ ನಡೆದಿದೆ. ಬಾಪುಗೌಡ ಪಾಟೀಲ್ ಬೆಂಬಲಿಗರು ಮಲ್ಲಿಕಾರ್ಜುನ ಬಾಟಗಿ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದು, ಸರ್ಕಾರಿ ಜಾಗದ ಬಳಿ ಎರಡು ಎಕರೆ ಜಮೀನು ಖರೀದಿಸಿದ್ದಾರೆ. ಸ್ಥಳೀಯರು ಸರ್ಕಾರಿ ಜಾಗದಲ್ಲಿ ಮಲ್ಲಿಕಾರ್ಜುನ ಬಟಗಿ ಸೇರಿದಂತೆ ಹಲವರು ಅಂಗಡಿ, ಖಾನಾವಳಿ ಹಾಕಿಕೊಂಡು ಉಪಜೀವನ ನಡೆಸುತ್ತಿದ್ದಾರೆ. ಆದರೆ ಬಾಪುಗೌಡ ಪಾಟೀಲ್ ಮೊದಲಿಗೆ ಮಲ್ಲಿಕಾರ್ಜುನ ಬಟಗಿ ಅವರನ್ನು ಟಾರ್ಗೆಟ್ ಮಾಡಿ ಅಂಗಡಿ ಕಿತ್ತು ಹಾಕಿರೋ ಆರೋಪ ಕೇಳಿಬಂದಿದೆ. ಮಲ್ಲಿಕಾರ್ಜುನ ಬಟಗಿ ಪತ್ನಿ ಶಾಂತಮ್ಮ, ಮಕ್ಕಳಾದ ಕಾವೇರಿ ಚೆನ್ನಮ್ಮ, ವಿಶ್ವನಾಥ್ ಮೇಲೆ ಹಲ್ಲೆ ಮಾಡಿರುವ ಆರೋಪವಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ