ಚಿತ್ರದುರ್ಗ, ಜನವರಿ 21: ಜಿಪಿಎ ಪಡೆದು ಮುರುಘಾ ಮಠ (Murughamutt) ದ ಹಣ, ಆಸ್ತಿ ದುರ್ಬಳಕೆ ಆರೋಪ ಹಿನ್ನೆಲೆ ಮುರುಘಾಮಠದ ಆಡಳಿತಾಧಿಕಾರಿ ಆಗಿದ್ದ ಮಾಜಿ ಶಾಸಕ ಎಸ್ಕೆ ಬಸವರಾಜನ್ ವಿರುದ್ಧದ ಕೇಸ್ನ ಸಾಕ್ಷ್ಯ ವಿಚಾರಣೆ ಮಾಡಲಾಗಿದ್ದು, ಪ್ರಕರಣದಲ್ಕಿ 12 ನೇ ಸಾಕ್ಷಿಯಾಗಿ ಮುರುಘಾಶ್ರೀ ಅವರ ಹೇಳಿಕೆಯನ್ನು ದಾಖಲಿಸಲಾಗಿದೆ. ಹೊಳಲಕೆರೆಯ ಕುಡಿನೀರುಕಟ್ಟೆ ಬಳಿ 2007ರಲ್ಲಿ ಮಠದ ಹಣದಿಂದ ಜಮೀನು ಖರೀದಿಸಿ ತನ್ನ ಹೆಸರಿಗೆ ಕ್ರಯಪತ್ರ ಮಾಡಿಕೊಂಡಿದ್ದಾರೆ. ಮಠದ ಹಣದಿಂದ ಎಸ್.ಕೆ.ಬಸವರಾಜನ್ ಹೆಸರಿಗೆ ಆಸ್ತಿ ಖರೀದಿಸಿದ್ದಾರೆ. ಆಸ್ತಿ ಖರೀದಿಸುವಾಗ ತಮಗೆ ತಿಳಿಸಿರಲಿಲ್ಲವೆಂದು ಮುರುಘಾಶ್ರೀ ಹೇಳಿಕೆ ನೀಡಿದ್ದಾರೆ.
ಮಠಕ್ಕೆ ಮೋಸ ಗೊತ್ತಾದಾಗ ಕ್ರಮ ಕೈಗೊಳ್ಳಲು ಕೋರಿದ್ದೆ. ಕ್ರಯಪತ್ರ, ದಾನಪತ್ರಗಳ ಮೂಲಕ ಭಕ್ತರಿಂದ ಆಸ್ತಿ ಪಡೆದುಕೊಂಡಿರುತ್ತೇನೆ. ಆಸ್ತಿಯನ್ನು ಮಠದ ಪೂಜೆ ಕೈಂಕರ್ಯಗಳಿಗೆ ಉಪಯೋಗಿಸಬೇಕು. ದಾನ ಪಡೆದ ಆಸ್ತಿಯನ್ನು ಕೋಟ್ಯಾಂತರ ರೂ.ಗೆ ಮಾರಿರುವುದು ನಿಜ. ಪೀಠಾಧಿಕಾರಿಯಾಗಿ ಆಸ್ತಿ ಮಾರಿ ಅಭಿವೃದ್ದಿಗೆ ಬಳಸುವ ಅಧಿಕಾರವಿತ್ತು. ಮಠ ಹಿಂದೆ ಪಬ್ಲಿಕ್ ಟ್ರಸ್ಟ್ ಆಗಿದ್ದ ಬಗ್ಗೆ ಮಾಹಿತಿ ಇಲ್ಲ. ನ್ಯಾಯಾಲಯಗಳಲ್ಲಿ ತಾವೇ ಟ್ರಸ್ಟ್ ಬಗ್ಗೆ ಸಾಕ್ಷಿ ನೀಡಿರುವ ನೆನಪಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಬಸವ ಪುತ್ಥಳಿ ನಿರ್ಮಾಣ ಹಣ ದುರುಪಯೋಗ: ತನಿಖೆಗೆ ಸಮಿತಿ ರಚಿಸಿದ ಜಿಲ್ಲಾಧಿಕಾರಿ
ಆಸ್ತಿ ಮಾರಲು ಜಿಲ್ಲಾ ನ್ಯಾಯಾಲಯದ ಅನುಮತಿ ಪಡೆಯದ ವಿಚಾರವಾಗಿ ಹೇಳಿಕೆ ನೀಡಿದ್ದು, ಅನುಮತಿ ಪಡೆದಿರಬಹುದು, ಇಲ್ಲದಿರಬಹುದು ಎಂದು ಮುರುಘಾಶ್ರೀ ಉತ್ತರ ನೀಡಿದ್ದಾರೆ. ಹರಿಹರದ 11 ಎಕರೆ 1 ಕೋಟಿ 10 ಲಕ್ಷಕ್ಕೆ ಮಾರಿದ್ದು ನಿಜ. ಕೋರ್ಟ್ ಅನುಮತಿ ಪಡೆಯದೇ ಮಾರಿದ್ದಾಗಿ ದಾವೆ ಹಾಕಿದ್ದಾರೆ. ಇತ್ತೀಚಿಗೆ ಹೈಕೋರ್ಟ್ ಆದೇಶದಂತೆ ಮಠದ ವ್ಯವಹಾರ ನೋಡಿಕೊಳ್ಳುತ್ತಿಲ್ಲ ಎಂದಿದ್ದಾರೆ.
2022ರ ಆಗಷ್ಟ್ 26ರಂದು ಮುರುಘಾಶ್ರೀ ವಿರುದ್ಧ ಮೊದಲ ಫೋಕ್ಸೋ ಪ್ರಕರಣ ದಾಖಲಾಗಿತ್ತು. 2022ರ ಸೆಪ್ಟಂಬರ್ 1ರಂದು ಮುರುಘಾಶ್ರೀ ಬಂಧನವಾಗಿತ್ತು. 2022ರ ಅಕ್ಟೋಬರ್ 13ರಂದು 2ನೇ ಫೋಕ್ಸೋ
ಕೇಸ್ ದಾಖಲಾಗಿತ್ತು. ಬಳಿಕ ಅಂದಿನ ರಾಜ್ಯ ಸರ್ಕಾರ ಅಳೆದು ತೂಗಿ 2022ರ ಡಿಸೆಂಬರ್ 13ರಂದು ನಿವೃತ್ತ
ಐಎಎಸ್ ಅಧಿಕಾರಿ ಪಿ.ಎಸ್ ವಸ್ತ್ರದ್ ರನ್ನು ಮುರುಘಾಮಠಕ್ಕೆ ಆಡಳಿತಾಧಿಕಾರಿಯಾಗಿ ನೇಮಿಸಿತ್ತು.
ಇದನ್ನೂ ಓದಿ: ದಶಕಗಳ ಮುನಿಸಿಗೆ ಬ್ರೇಕ್! ಕೈ ಕುಲುಕಿ, ಹಾರ ಹಾಕಿದ ಡಾ. ಶಿವಮೂರ್ತಿ ಮುರುಘಾ ಶರಣರು ಮತ್ತು ಎಸ್.ಕೆ. ಬಸವರಾಜನ್
ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಮುರುಘಾಶ್ರೀ ಆಪ್ತರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ 2023ರ ಮೇ 22ರಂದು ಆಡಳಿತಾಧಿಕಾರಿ ನೇಮಕ ರದ್ದು ಪಡಿಸಿತ್ತು. ತಾತ್ಕಾಲಿಕವಾಗಿ ಚಿತ್ರದುರ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು (ಪಿಡಿಜೆ) ಮಠದ ಆಡಳಿತಾಧಿಕಾರಿಯಾಗಿ ಆಡಳಿತ ನಡೆಸಲು ಸೂಚನೆ ನೀಡಿತ್ತು. ಆದರೆ ಮುರುಘಾಶ್ರೀಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ ಹಿನ್ನೆಲೆಯಲ್ಲಿ 2023ರ ನವೆಂಬರ್ 16ರಂದು ಜೈಲಿನಿಂದ ಬಿಡುಗಡೆ ಆಗಿದ್ದರು. ಹೀಗಾಗಿ, ಮುರುಘಾಮಠದ ಪೀಠಾದ್ಯಕ್ಷರು, ಮುರುಘಾಮಠದ ಎಸ್ ಜೆ ಎಮ್ ವಿದ್ಯಾಪೀಠದ ಅಧ್ಯಕ್ಷರೂ ಆಗಿರುವ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಚಿತ್ರದುರ್ಗ ಪಿಡಿಜೆ ಅವರು ಅಧಿಕಾರ ಹಸ್ತಾಂತರಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:07 am, Sun, 21 January 24