ಚಿತ್ರದುರ್ಗ, ಫೆ.02: ಭೂ ದಾಖಲೆ ಅಧಿಕಾರಿ ಕಾರು ಚಾಲಕ ಕಿರಣ್ ಲೋಕಾಯುಕ್ತ (Lokayukta) ಬಲೆಗೆ ಬಿದ್ದ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ನಡೆದಿದೆ. ಪಹಣಿ ಪ್ರತ್ಯೇಕಗೊಳಿಸಲು ಭೂ ದಾಖಲೆ ಇಲಾಖೆ ಉಪನಿರ್ದೇಶಕ ಗಂಗಯ್ಯ ಎಂಬುವವರು 15ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಓಬಳಾಪುರದ ಜಯಣ್ಣ ಎಂಬುವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ಹಿನ್ನಲೆ ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ಹಾಗೂ ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಚಾಲಕ ಕಿರಣ್ ಮೂಲಕ ಮುಂಗಡ 10 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಚಾಲಕ ಕಿರಣ್ ಸಿಕ್ಕಿಬಿದ್ದರೆ, ಅಧಿಕಾರಿ ಗಂಗಯ್ಯ ಪರಾರಿಯಾಗಿದ್ದಾರೆ.
ಬೆಂಗಳೂರು: ಇಬ್ಬರು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕುವೆಂಪು ವಿಶ್ವವಿದ್ಯಾಲಯ ಕುಲಸಚಿವ, ಹೆಚ್ಬಿ ವಿಜಯಕುಮಾರ್ ಹಾಗೂ ಮಂಗಳೂರು ವಿಶ್ವವಿದ್ಯಾಲಯ ಕುಲಸಚಿವ ರಾಜು ಮೊಗವೀರ ಅವರನ್ನು ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ:Lokayukta Raid: ಲೋಕಾಯುಕ್ತ ದಾಳಿಗೆ ಬೆಸ್ಕಾಂ ಇಇ ಚನ್ನಕೇಶವ ಶಾಕ್: ಬಿಪಿಯಲ್ಲಿ ಏರುಪೇರು
ರಾಯಚೂರು: ಜಿಲ್ಲೆಯ ಸಿರವಾರದಲ್ಲಿ ಟಿಪ್ಪು ಭಾವಚಿತ್ರಕ್ಕೆ ಅಪಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದಡಿ ಇಬ್ಬರು ಕಾನ್ಸ್ಟೇಬಲ್ಗಳು ಅಮಾನತು ಮಾಡಿ ರಾಯಚೂರು ಎಸ್ಪಿ ಬಿ.ನಿಖಿಲ್ ಆದೇಶಿಸಿದ್ದಾರೆ. ಸಿರವಾರ ಠಾಣೆಯ ಕಾನ್ಸ್ಟೇಬಲ್ಗಳಾದ ಇಸ್ಮಾಯಿಲ್, ರೇವಣಸಿದ್ದ ಎಂಬುವವರು ಘಟನೆ ನಡೆದಾಗ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕರ್ತವ್ಯಲೋಪ ಎಸಗಿದ ಹಿನ್ನಲೆ ಅಮಾನತುಗೊಳಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ