Lokayukta Raid: ರಾಜ್ಯಾದ್ಯಂತ ಲೋಕಾಯುಕ್ತ ದಾಳಿ: 10 ಅಧಿಕಾರಿಗಳ ಬಳಿ ಏನೇನು ಸಿಕ್ಕಿದೆ? ಇಲ್ಲಿದೆ ವಿವರ
ಬೆಂಗಳೂರು, ತುಮಕೂರು, ಚಿಕ್ಕಮಗಳೂರು, ಮಂಡ್ಯ, ಹಾಸನ, ಕೊಪ್ಪಳ, ಚಾಮರಾಜನಗರ, ಮೈಸೂರು, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆದಾಯಕ್ಕೂ ಮೀರಿದ ಅಸ್ತಿ ಗಳಿಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ 10 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 40 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ ಮಾಡಿದೆ. ಯಾರ ಬಳಿ ಏನೇನು ಸಿಕ್ಕಿದೆ ಎಂಬುದಕ್ಕೆ ಇಲ್ಲಿದೆ ವಿವರ.
ಬೆಂಗಳೂರು, ಜನವರಿ 31: ಆದಾಯಕ್ಕೂ ಮೀರಿದ ಅಸ್ತಿ ಗಳಿಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ 10 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 40 ಸ್ಥಳಗಳಲ್ಲಿ ಲೋಕಾಯುಕ್ತ (Lokayukta Raid) ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು, ತುಮಕೂರು, ಚಿಕ್ಕಮಗಳೂರು, ಮಂಡ್ಯ, ಹಾಸನ, ಕೊಪ್ಪಳ, ಚಾಮರಾಜನಗರ, ಮೈಸೂರು, ಬಳ್ಳಾರಿ, ವಿಜಯನಗರ, ಮಂಗಳೂರಿನಲ್ಲಿ ದಾಖಲೆಗಳ ಪರಿಶೀಲನೆ ಮಾಡಲಾಗಿದೆ. ಸದ್ಯ ಉಳಿದ ಭ್ರಷ್ಟರಿಗೂ ನಡುಕ ಶುರುವಾಗಿದೆ. 10 ಸರ್ಕಾರಿ ಅಧಿಕಾರಿಗಳ ಬಳಿ ಏನೇನು ಸಿಕ್ಕಿದೆ ಎಂಬುದಕ್ಕೆ ಇಲ್ಲಿದೆ ವಿವರ.
ಕೋಟಿ ಕುಬೇರ KRIDL ಇಂಜಿನಿಯರ್
ಮಧುಗಿರಿ ಉಪವಿಭಾಗದ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಇಂಜಿನಿಯರ್, ಹನುಮಂತರಾಯಪ್ಪ ಮನೆಗಳ ಮೇಲೆ ದಾಳಿ ಮಾಡಿದ್ದು, ಆರೋಪಿತ ಸರ್ಕಾರಿ ನೌಕರನಿಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ದಾಳಿ ಮಾಡಲಾಗಿದೆ.
ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 3 ವಾಸದ ಮನೆಗಳು. ಕೃಷಿ ಜಮೀನು: ಎಲ್ಲಾ ಸೇರಿ 2,30,00,000. ಒಟ್ಟು ಚರಾಸ್ತಿಯ ಅಂದಾಜು ಮೌಲ್ಯ 40,000 ನಗದು, 8.50.000 ಬೆಲೆ ಬಾಳುವ ಚಿನ್ನಾಭರಣಗಳು, 14,80.000 ರೂ ಬೆಲೆ ಬಾಳುವ ವಾಹನಗಳು, 2,00,000 ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು. ಎಲ್ಲಾ ಸೇರಿ ಪತ್ತೆಯಾದ ಒಟ್ಟು ಮೌಲ್ಯ 2,55,30,000 ರೂ.
ಸಂಪತ್ತಿನ ಶೋಧ
ಮಂಡ್ಯ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಇಇ ಹರ್ಷ. ಹೆಚ್ಆರ್ಗೆ ಸಂಬಂಧಿಸಿದ ಒಟ್ಟು 6 ಸ್ಥಳಗಳಲ್ಲಿ ಶೋಧ ಮಾಡಲಾಗಿದೆ. ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 3 ನಿವೇಶನಗಳು, 2 ವಾಸದ ಮನೆಗಳು, 15-30 ಎಕರೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 1,68,19,000.
ಒಟ್ಟು ಚರಾಸ್ತಿಯ ಅಂದಾಜು ಮೌಲ್ಯ- ರೂ. 1.50,000/- ನಗದು, ಚಿನ್ನಾಭರಣಗಳು: ರೂ. 10,00,000, ವಾಹನಗಳು: 55,00,000 ರೂ, ಗೃಹೋಪಯೋಗಿ ಮತ್ತು ಇತರೆ ವಸ್ತುಗಳು ರೂ 2,15,50,336, ಎಲ್ಲಾ ಸೇರಿ ಒಟ್ಟು ಮೌಲ್ಯ 4.50.19.336 ರೂ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಶಾಕ್; ರಾಜ್ಯದ ಹಲವೆಡೆ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ
ಬಳ್ಳಾರಿ ಜಿಲ್ಲೆಯ ನಂದಿಹಳ್ಳಿಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರು ಮತ್ತು ನಿರ್ದೇಶಕರ ಬಿ. ರವಿ, ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 3 ಸ್ಥಳಗಳಲ್ಲಿ ಶೋಧ ಮಾಡಲಾಗಿದೆ. ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 7 ನಿವೇಶನಗಳು, 2 ವಾಸದ ಮನೆಗಳು, ಎಲ್ಲಾ ಸೇರಿ 1,57.10,000 ರೂ.
ಒಟ್ಟು ಚರಾಸ್ತಿ ಮೌಲ್ಯ 59,800 ರೂ, ಬೆಲೆ ಬಾಳುವ ಚಿನ್ನಾಭರಣಗಳು 9.12,600 ರೂ, ವಾಹನಗಳು ರೂ 23,30,000, ಗೃಹೋಪಯೋಗಿ ಮತ್ತು ಇತರೆ ವಸ್ತುಗಳು ರೂ 23,30,000, ಎಲ್ಲಾ ಸೇರಿ 59.02.400 ರೂ. ಒಟ್ಟು ಮೌಲ್ಯ 2.16,12.400 ರೂ.
ಮೈಸೂರು ಜಿಲ್ಲೆಯ ಪಿ. ರವಿ ಕುಮಾರ್, ಎ.ಇ.ಇ. ಲೋಕೋಪಯೋಗಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ, ಪ್ರಧಾನ ಕಛೇರಿ, ಹುಣಸೂರು ಉಪ ವಿಭಾಗ. ಆರೋಪಿತ ಸರ್ಕಾರಿ ನೌಕರನಿಗೆ ಸೇರಿದ ಒಟ್ಟು 3 ಸ್ಥಳಗಳಲ್ಲಿ ಶೋಧ ಮಾಡಿದ್ದು, ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 1 ನಿವೇಶನ, 1 ವಾಸದ ಮನೆ. 1 ವಾಣಿಜ್ಯ ಸಂಕೀರ್ಣ, 5.9 ಎಕರೆ ಆಸ್ತಿ ಮಾರ್ಟ್ ಗೇಜ್, 4 ಎಕರೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು 2. 1,78,60,000 ರೂ.
ಇದನ್ನೂ ಓದಿ: ಅಕ್ರವಾಗಿ ಸಾಗಿಸುತ್ತಿದ್ದ ಚಿನ್ನವನ್ನು ವಶಪಡಿಸಿಕೊಂಡ ಬೆಂಗಳೂರು ಏರ್ಪೋರ್ಟ್ಅಧಿಕಾರಿಗಳು
ಒಟ್ಟು ಚರಾಸ್ತಿಯ ಅಂದಾಜು ಮೌಲ್ಯ- ರೂ. 560, ಚಿನ್ನಾಭರಣಗಳು: ರೂ. 13.30,500, ವಾಹನಗಳು: ರೂ 4.00,000, ಗೃಹೋಪಯೋಗಿ ಮತ್ತು ಇತರೆ ವಸ್ತುಗಳು ರೂ 11,55,400, ಎಲ್ಲಾ ಸೇರಿ ಒಟ್ಟು 28,86,460 ರೂ. ಒಟ್ಟು ಮೌಲ್ಯ 2,07,46,460 ರೂ.
ಶ್ರೀಮತಿ ನೇತ್ರಾವತಿ. ಕೆ. ಆರ್. ವಾಣಿಜ್ಯ ತೆರಿಗೆ ಅಧಿಕಾರಿ, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರ ಕಛೇರಿ, ವಾಣಿಜ್ಯ ತೆರಿಗೆ ಇಲಾಖೆ, ಚಿಕ್ಕಮಗಳೂರು ಜಿಲ್ಲೆ. ಆರೋಪಿತ ಸರ್ಕಾರಿ ಅಧಿಕಾರಿಗೆ ಸೇರಿದ ಒಟ್ಟು 2 ಸ್ಥಳಗಳಲ್ಲಿ ಶೋಧ ಮಾಡಿದ್ದು, ಒಟ್ಟು ಸ್ಥಿರ ಆಸ್ತಿ ಅಂದಾಜು ಮೌಲ್ಯ- 5 ನಿವೇಶನಗಳು, 1 ವಾಸದ ಮನೆ. ಎಲ್ಲಾ ಸೇರಿ ಒಟ್ಟು 1.18,50,000 ರೂ.
ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ: ರೂ. 4.58.000, ಚಿನ್ನಾಭರಣಗಳು ರೂ. 7.77,360, ವಾಹನಗಳು ರೂ 10,00,000, ಗೃಹೋಪಯೋಗಿ ಮತ್ತು ಇತರೆ ವಸ್ತುಗಳು ರೂ 16.40,640, ಒಟ್ಟು ಮೌಲ್ಯ 1,98.48,000 ರೂ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.