AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರವಾಗಿ ಸಾಗಿಸುತ್ತಿದ್ದ ಚಿನ್ನವನ್ನು ವಶಪಡಿಸಿಕೊಂಡ ಬೆಂಗಳೂರು ಏರ್ಪೋರ್ಟ್​ಅಧಿಕಾರಿಗಳು

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಚಿನ್ನ, ಪ್ರಾಣಿಗಳನ್ನು ಸಾಗಾಟ ಮಾಡಲು ಯತ್ನಿಸುವ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿರುತ್ತವೆ. ವಿದೇಶದಿಂದ ಬಂದ ಪ್ರಯಾಣಿಕರು ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನಿಸುತ್ತಾರೆ. ಆದರೆ ಕಸ್ಟಮ್ಸ್​ ಅಧಿಕಾರಿಗಳ ತಪಾಸಣೆಯಲ್ಲಿ ಸಿಕ್ಕಿ ಬೀಳುತ್ತಾರೆ. ಅದರಂತೆ ಈಗಲೂ ಕೂಡ ಅಕ್ರಮವಾಗಿ ಚಿನ್ನ ಸಾಗಿಸಲು ಮುಂದಾಗಿದ್ದ ವ್ಯಕ್ತಿಯನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಅಕ್ರವಾಗಿ ಸಾಗಿಸುತ್ತಿದ್ದ ಚಿನ್ನವನ್ನು ವಶಪಡಿಸಿಕೊಂಡ ಬೆಂಗಳೂರು ಏರ್ಪೋರ್ಟ್​ಅಧಿಕಾರಿಗಳು
ಬೆಂಗಳೂರು ವಿಮಾನ ನಿಲ್ದಾಣ
Follow us
TV9 Web
| Updated By: ವಿವೇಕ ಬಿರಾದಾರ

Updated on:Jan 31, 2024 | 2:44 PM

ಬೆಂಗಳೂರು, ಜನವರಿ 31: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport) ಕಸ್ಟಮ್ಸ್​ ಅಧಿಕಾರಿಗಳು ಪ್ಲಾಸ್ಕ್​ನಲ್ಲಿ ಇಟ್ಟುಕೊಂಡು ಸಾಗಿಸುತ್ತಿದ್ದ ಅಕ್ರಮ ಚಿನ್ನವನ್ನು (Gold) ವಶಪಡಿಸಿಕೊಂಡಿದ್ದಾರೆ. ಸೌದಿ ಅರೇಬಿಯಾದ (Saudi Arabia) ಜೇದಾ ಏರ್ಪೋಟ್​ನಿಂದ ಆಗಿಸಿದ್ದ ಪ್ರಯಾಣಿಕ, ಚಿನ್ನವನ್ನು ಪೇಸ್ಟ್ ಮಾಡಿ ಪ್ಲಾಸ್ಕ್​ನ ಒಳಗಡೆ ಇಟ್ಟುಕೊಂಡು ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದಾನೆ. ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಚಿನ್ನವಿರುವುದು ಪತ್ತೆಯಾಗಿದೆ. ಪ್ರಯಾಣಿಕನಿಂದ ಅಧಿಕಾರಿಗಳು 7 ಲಕ್ಷ 52 ಸಾವಿರ ರೂ. ಮೌಲ್ಯದ 122 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ. ಬಳಿಕ ಅಧಿಕಾರಿಗಳು ಪ್ರಯಾಣಿಕನನ್ನು ವಶಕ್ಕೆ ಪಡೆದಿದ್ದಾರೆ.

ವಿದೇಶದಿಂದ ಅಕ್ರಮವಾಗಿ ಸರೀಸೃಪ ಸಾಗಾಟ

ವಿದೇಶದಿಂದ ಅಕ್ರಮವಾಗಿ ಕೋಬ್ರಾ ಹಾವನ್ನು ಬಾಟಲ್​​ನಲ್ಲಿ ಇಟ್ಟುಕೊಂಡು ತಂದಿದ್ದ ಪ್ರಯಾಣಿಕನನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪುರುಷೋತ್ತಮ್ ಎಂಬುವರು ಬ್ಯಾಂಕಾಕ್​ನ ಡಾನ್ ಮಿಯಾಂಗ್ ಏರ್ಪೋಟ್​ನಿಂದ ಏರ್ ಏಷ್ಯಾ ವಿಮಾನದ ಮೂಲಕ ಇಂದು (ಜ.31) ಬೆಳಿಗ್ಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ತಪಾಸಣೆ ವೇಳೆ ಬ್ಯಾಗ್​​ನಲ್ಲಿ ಹಾವಿನ ಬಾಟಲ್ ಪತ್ತೆಯಾಗಿದೆ.

ಕಾನೂನು ಪ್ರಕಾರ ಪ್ರಾಣಿಗಳ ಸಾಗಾಟ ನಿಷೇಧ ಹಿನ್ನೆಲೆಯಲ್ಲಿ ಹಾವಿನ ಬಾಟಲ್ ಸಮೇತ ಪ್ರಯಾಣಿಕನನ್ನು ಅರಣ್ಯ ಇಲಾಖೆ ಅಧಿಕಾರಿಗಳ‌ ವಶಕ್ಕೆ‌ ಪಡೆದಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಪ್ರಯಾಣಿಕ ಪುರುಷೋತ್ತಮ್​ನನ್ನು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ 26 ಕೋಟಿ ರೂ. ಮೌಲ್ಯದ ಕೊಕೇನ್, ಕೀನ್ಯಾ ಮೂಲದ ಮಹಿಳೆ ವಶ

3 ಪ್ರತ್ಯೇಕ ಪ್ರಕರಣಗಳಲ್ಲಿ 1 ಕೋಟಿಗೂ ಅಧಿಕ ಮೌಲ್ಯದ ಚಿನ್ನ ವಶ

ಕಳೆದ ವರ್ಷ ನವೆಂಬರ್ 18 ರಂದು​ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್​​ ಅಧಿಕಾರಿಗಳು ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಂದು ಕೋಟಿಗೂ ಅಧಿಕ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದರು. ಬ್ಯಾಂಕಾಕ್, ಕೊಲಂಬೋ ಮತ್ತು ಮಸ್ಕಟ್​​ನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಕೆಜಿಗೂ ಅಧಿಕ‌‌ ಚಿನ್ನವನ್ನು ಜಪ್ತಿ ಮಾಡಿದ್ದರು. ಬ್ಯಾಂಕಾಕ್​ನಿಂದ ಮೂವರು ಪುರುಷರು, ಕೊಲಂಬೊದ ಇಬ್ಬರು ಮಹಿಳೆಯರು ಮತ್ತು ಮಸ್ಕಟ್​ನ ಒರ್ವ ಪ್ರಯಾಣಿಕ ಶರ್ಟ್ ಮತ್ತು ಒಳ ಉಡುಪಿನಲ್ಲಿ ಚಿನ್ನದ ಕಟ್ ಫಿಸ್​​ಗಳನ್ನು ಅಡಗಿಸಿಟ್ಟುಕೊಂಡು ತಂದಿದ್ದರು.

‌ಕಸ್ಟಮ್ಸ್​​ ಅಧಿಕಾರಿಗಳ ತಪಾಸಣೆ ವೇಳೆ ಮೂರು ಪ್ರಕರಣಗಳಿಂದ 1,26,58, 618 ರೂ. ಮೌಲ್ಯದ 2 ಕೆಜಿ 79 ಗ್ರಾಂ ತೂಕದ ಚಿನ್ನ ಪತ್ತೆಯಾಗಿತ್ತು. ಮೂರು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಅಧಿಕಾರಿಗಳು ಪಡೆದು ವಿಚಾರಣೆ ನಡೆಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:03 pm, Wed, 31 January 24

ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ