ಇಸ್ಲಾಂ ಧರ್ಮಕ್ಕೆ ಮತಾಂತರ ಆರೋಪ: ಬಾಲಕನನ್ನು ಪ್ರಚೋದಿಸಿದ ಆರೋಪಿಯ ಆಡಿಯೋ ವೈರಲ್​

| Updated By: ಗಂಗಾಧರ​ ಬ. ಸಾಬೋಜಿ

Updated on: Nov 09, 2023 | 10:28 AM

Chitradurga: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಠಾಣೆಯಲ್ಲಿ ಕುರುಬ ಸಮುದಾಯದ 17 ವರ್ಷದ ಬಾಲಕ ಭೂಪತಿ ಮತಾಂತರ ಕೇಸ್​​ಕ್ಕೆ ಸಂಬಂಧಪಟ್ಟಂತೆ ಇದೀಗ ಆರೋಪಿ ಅಬ್ಬಾಸ್, ಬಾಲಕನ ಜತೆ ಮಾತಾಡಿರುವ ಆಡಿಯೋ ಲಭ್ಯ ಆಗಿದೆ. ಇಸ್ಲಾಂ ಪ್ರಾರ್ಥನೆ ಬಗ್ಗೆ ಆರೋಪಿ ಅಬ್ಬಾಸ್​ ಬಾಲಕನನ್ನು ಪ್ರಚೋದನೆ ನೀಡಿದ್ದಾನೆ.

ಇಸ್ಲಾಂ ಧರ್ಮಕ್ಕೆ ಮತಾಂತರ ಆರೋಪ: ಬಾಲಕನನ್ನು ಪ್ರಚೋದಿಸಿದ ಆರೋಪಿಯ ಆಡಿಯೋ ವೈರಲ್​
ಮತಾಂತರ ಆರೋಪ
Follow us on

ಚಿತ್ರದುರ್ಗ, ನವೆಂಬರ್​​​​ 9: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಠಾಣೆಯಲ್ಲಿ ಕುರುಬ ಸಮುದಾಯದ 17 ವರ್ಷದ ಬಾಲಕ ಭೂಪತಿ ಮತಾಂತರ (Conversion) ಕೇಸ್​​ಕ್ಕೆ ಸಂಬಂಧಪಟ್ಟಂತೆ ಇದೀಗ ಆರೋಪಿ ಅಬ್ಬಾಸ್, ಬಾಲಕನ ಜತೆ ಮಾತಾಡಿರುವ ಆಡಿಯೋ ಲಭ್ಯ ಆಗಿದೆ. ಇಸ್ಲಾಂ ಪ್ರಾರ್ಥನೆ ಬಗ್ಗೆ ಆರೋಪಿ ಅಬ್ಬಾಸ್​ ಬಾಲಕನನ್ನು ಪ್ರಚೋದನೆ ನೀಡಿದ್ದಾನೆ. ನಮ್ಮ ಅಲ್ಲಾ ನಿನಗೆ ಅದೆಷ್ಟು ಇಷ್ಟಪಟ್ಟಿದ್ದಾನೆ ಎಂದು ಮಾತು ಆರಂಭಿಸಿದ್ದಾನೆ. ಈ ವಯಸ್ಸಿಗೆ ಹಲಾಲ್ ಅವಕಾಶ ನಿನಗೆ ಸಿಕ್ಕಿದೆ. ನನಗಾಗಿಯೂ ನೀನು ಪ್ರಾರ್ಥನೆ ಮಾಡು ಎಂದು ಆರೋಪಿ ಅಬ್ಬಾಸ್​​ ಹೇಳಿದ್ದಾನೆ.

ಬಾಲಕನ ಜತೆ ಭಾಯಿ ಎಂದು ಮಾತಾಡಿರುವ ಅಬ್ಬಾಸ್, ಜಾನ್, ಮೊಹಬ್ಬತ್ ಎಲ್ಲಾ ಜಮಾತ್​ಗೆ ಸಲ್ಲಬೇಕು. ಈ ವೇಳೆ ಮನೆಗೆ ಹೋಗಿ ನಮಾಜ್ ಮಾಡಿ ಮಾತಾಡುತ್ತೇನೆಂದು ಬಾಲಕ ಹೇಳಿದ್ದು, ಸ್ವಲ್ಪ ಹೊತ್ತು ಮಾತನಾಡಿ ಹೋಗು ಎಂದು ಅಬ್ಬಾಸ್ ಹೇಳಿದ್ದಾನೆ. ದುನಿಯಾ ನಮ್ಮ ಕಾಲ ಬುಡದಲ್ಲಿ ಇರಬೇಕು. ಹಣ ಚಪ್ಪಲಿಯಂತೆ ನಮ್ಮ ಕಾಲ ಕೆಳಗೆ ಇರಬೇಕು. ನನಗ ದೊಡ್ಡ ಸ್ಥಾನ ಸಿಗಬೇಕು. ಕೋಟಿ ಲೆಕ್ಕವಿಲ್ಲದಂತ ಕೆಲಸ ಸಿಗಬೇಕೆಂದು ಪ್ರಾರ್ಥನೆ ಮಾಡು ಎಂದಿದ್ದಾನೆ.

ಇದನ್ನೂ ಓದಿ: ಚಿತ್ರದುರ್ಗ: ಪರಶುರಾಂಪುರ ಗ್ರಾಮದಲ್ಲಿ ಕುರುಬ ಬಾಲಕನ ಮತಾಂತರ, ದೂರು ಕೊಟ್ಟರೂ ಪೊಲೀಸರು ಮೌನ

ಒಟ್ಟು ನಿಮ್ಮ ಅಪ್ಪನ ಆಸ್ತಿ ಎಷ್ಟು ಮೌಲ್ಯವಿದೆ ಎಂದು ಅಬ್ಬಾಸ್ ಕೇಳಿದ್ದು, ಬಾಲಕನಿಂದ ಜಮೀನು, ನಿವೇಶನ, ಒಡವೆ ಬಗ್ಗೆ ಮಾಹಿತಿ ನೀಡಿದ್ದಾರೆ. ಒಟ್ಟು ಎರಡು ಕೋಟಿ ರೂ. ಮೌಲ್ಯದಷ್ಟಿರಬಹುದಲ್ಲವೇ ಎಂದಿರುವ ಅಬ್ಬಾಸ್, ಮನೆಯಲ್ಲಿ ಮಾಲ್ ಎಷ್ಟಿದೆ ಎಂದು ಕೇಳಿದ್ದಾನೆ. ನಮ್ಮ ಅಮ್ಮನ ತಾಳಿ ಬಿಟ್ಟರೆ ಬೇರೇನೂ ಇಲ್ಲ, ಕಿವಿ ಓಲೆ ಇದೆ ಎಂದಿದ್ದಾನೆ ಬಾಲಕ.

ನಿಮ್ಮಪ್ಪನಿಗೆ ಭಾರೀ ವಯಸ್ಸಾಗಿದೆ ಕಣೋ. ಎರಡು ಕೋಟಿ ರೂ. ಮನೆಯಲ್ಲಿ ಬಹಳ ಕೆಲಸ ಮಾಡಬೇಕು. ಬುಕ್‌ ತೆಗೆದುಕೊಂಡು ಕರೆಕ್ಟಾಗಿ ಬರೀತಿರು, ಅಲ್ಲಾ ನೋಡ್ತಿದ್ದಾನೆ. ಒಂದು ಲೆವಲ್‌ ಇಟ್ಟುಕೊಂಡು ಎರಡು ಕೋಟಿ ಮಾಡಿಕೊ. ಮುಂದೆ ಎಲ್ಲಾ ಮಾಡಿ ಊರು ಬಿಟ್ಟು ಬಿಡೋಣ. ಐದು ವರ್ಷದಲ್ಲಿ ನೀನು ಎರಡು ಕೋಟಿ ದುಡಿತಿಯಾ ಎಂದಿದ್ದಾನೆ.

ಇದನ್ನೂ ಓದಿ: ಕಾರವಾರ: ಹಿಂದೂಗಳನ್ನು ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರ ಆರೋಪ; ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸ್ಥಳೀಯರ ಆಗ್ರಹ

ಕೇಳಿದರೆ ನಿಮ್ಮ ಅಪ್ಪ ಏನು ಹೇಳುತ್ತಾರೆಂದು ಅಬ್ಬಾಸ್ ಕೇಳಿದ್ದು, ಅಪ್ಪಾ ಬೈದು ನಿನಗೇಕೆ ಬೇಕು ದುಡ್ಡು ಕಾಸಿನ ವಿಚಾರ ಅಂತಾರೆ ಎಂದು ಬಾಲಕ ಹೇಳಿದ್ದಾನೆ. ನಿಮ್ಮ ಅಪ್ಪನ ಬಳಿ ಹೋಗಿ ತಪ್ಪಾಯ್ತು ಎಂದು ಹೇಳು. ಇನ್ನು ಮೇಲೆ ನೀವು ಹೇಳಿದಂತೆ ಕೇಳ್ತೀನಿ ಅಂತ ಹೇಳು. ಮಾಲೀಕರ ಜತೆ ಹೇಗೆ ಕೂಲಿಕಾರ ಕೆಲಸ ಮಾಡುತ್ತಾನೆ ಹಾಗೆ ಮಾಡು. ಮನೆಯಲ್ಲಿ ನಂಬಿಕೆಗಳಿಸು. ಒಂದಿನ ಹೊರಗೆ ಹೋಗಿಬರೋಣ. ಮನೆಯಲ್ಲಿ ಸಣ್ಣಹುಡುಗನಂತೆ ಹೇಳಿದಂಗೆ ಕೇಳಿಕೊಂಡು ಬಂದಿದ್ದೀಯಾ. ಒಂದೇ ಒಂದು ಮಾತು ನೀನು ಎದುರಾಡಿಲ್ಲ ಅಲ್ಲವೇ, ಜವಾಬ್ದಾರಿ ಬಂದಿದೆ ಅಂದುಕೊಂಡಿಲ್ಲ ಅವರು. ಅಲ್ಲಾ ನಿಮಗೆ ಒಳ್ಳೆಯದು‌ ಮಾಡಲಿ ಲೆಟ್ಸ್ ಗೋ ಫಾರ್ ಹಂಟ್​ ಎಂದು ಅಬ್ಬಾಸ್​ ಹೇಳಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.