ಜಾಮೀನು ಸಿಕ್ಕರೂ ಮುರುಘಾಶ್ರೀಗೆ ಶಿಕ್ಷೆ ಆಗೇ ಆಗುತ್ತೆ: ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧನವಾಗಿದ್ದ ಚಿತ್ರದುರ್ಗದ ಮುರುಘಾಶ್ರೀಗಳಿಗೆ ಜಾಮೀನು ಸಿಕ್ಕಿದೆ. ಇನ್ನು ಬಗ್ಗೆ ದೂರುದಾರ ಮೈಸೂರಿನ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ ಅವರು ಪ್ರತಿಕ್ರಿಯಿಸಿದ್ದು, ಮುರುಘಾಶ್ರೀಗೆ ಖಂಡಿತವಾಗಿಯೂ ಶಿಕ್ಷೆ ಆಗೇ ಆಗುತ್ತೆ ಎಂದಿದ್ದಾರೆ.
ಬೆಂಗಳೂರು, (ನವೆಂಬರ್ 09): ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಚಿತ್ರದುರ್ಗದ ಮುರುಘಾ ಶ್ರೀಗಳು(Murugha Shree) ಅರೆಸ್ಟ್ ಆಗಿದ್ರು. ಅದೇ ಶ್ರೀಗಳಿಗೆ ಇವತ್ತು ಹೈಕೋರ್ಟ್(Karnataka high Court) ಜಾಮೀನು(Bail)ನೀಡಿದೆ. ಇನ್ನು ಈ ಸ್ವಾಮೀಜಿ ಪ್ರಕರಣ ಬಗ್ಗೆ ಮೈಸೂರಿನ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ(Odanadi Stanley )ಪ್ರತಿಕ್ರಿಯಿಸಿದ್ದು, ಕೆಲ ಲೋಪದೋಷ ಇರಬಹುದು. ಹೀಗಾಗಿಯೇ ಅವರಿಗೆ ಜಾಮೀನು ಸಿಕ್ಕಿದೆ. ಜಾಮೀನು ಸಿಕ್ಕ ಮಾತ್ರಕ್ಕೆ ನ್ಯಾಯ ಸಿಗಲ್ಲವೆಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಚಿತ್ರದುರ್ಗದ ಮುರುಘಾಶ್ರೀಗೆ ಜಾಮೀನು ಸಿಕ್ಕಿರುಬ ಬಗ್ಗೆ ಟಿವಿ9 ಜೊತೆ ಮಾಡಿದ ಮೈಸೂರಿನ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ, ಚಿತ್ರದುರ್ಗದ ಮುರುಘಾಶ್ರೀಗೆ ಖಂಡಿತವಾಗಿಯೂ ಶಿಕ್ಷೆ ಆಗೇ ಆಗುತ್ತೆ. ಮತ್ತೊಂದು ಕೇಸ್‌ನಲ್ಲಿ ಜಾಮೀನು ಸಿಗಬಾರದೆಂಬದು ನಮ್ಮ ಹೋರಾಟ ಮುಂದುವರೆಯಲಿದೆ. ಜಾಮೀನು ಸಿಕ್ಕ ಮಾತ್ರಕ್ಕೆ ಅವರಿಗೆ ಬಲ ಬಂದಿದೆ ಅಂತಾ ಹೇಳಲಾಗಲ್ಲ. ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಅತ್ಯಾಚಾರ ಪ್ರಕರಣ: ಮುರುಘಾ ಶ್ರೀಗಳಿಗೆ ಹೈಕೋರ್ಟ್ನಿಂದ ಜಾಮೀನು, ಮುಂದೇನು?
ಚಿಕ್ಕ ಮಕ್ಕಳು ಸಾಕಷ್ಟು ನೊಂದಿದ್ದಾರೆ. ಅವರ ಪರವಾಗಿ ನಾವಿದ್ದೇವೆ. ಮುರುಘ ಶ್ರೀಗೆ ಖಂಡಿತವಾಗಿಯೂ ಶಿಕ್ಷ ಆಗುತ್ತೆ. ಬೇಲ್ ಸಿಕ್ಕಿದೆ ಎಂದ ಮಾತ್ರಕ್ಕೆ ನ್ಯಾಯ ಸಿಗಲ್ಲ ಅಂತ ಹೇಳಲು ಸಾಧ್ಯವಿಲ್ಲ. ನ್ಯಾಯ ಸಿಕ್ಕೆ ಸಿಗುತ್ತೆ ಎಂಬ ನಂಬಿಕೆ ಇದೆ. ಚಿತ್ರದುರ್ಗಕ್ಕೆ ಹೋಗಬಾರದು ಎಂದು ಹೈಕೋರ್ಟ್ ಷರತ್ತು ಹಾಕಿದೆ. ಇದು ಸ್ವಾಗತಾರ್ಹ ಎಂದ ಎಂದರು.
ಶ್ರೀಗಳಿಗೆ ಬಿಡುಗಡೆ ಭಾಗ್ಯ ಇಲ್ಲ
ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿ, ಬಸವತತ್ವದ ಮೂಲಕ, ವೈಚಾರಿಕತೆ ಮೂಲಕ ರಾಜ್ಯದಲ್ಲಿ ಗಮನ ಸೆಳೆದಿದ್ದ ಇದೇ ಶ್ರೀಗಳು ವರ್ಷದ ಹಿಂದೆ ಅರೆಸ್ಟ್ ಆಗಿ ಜೈಲು ಸೇರಿದ್ದರು. ಹಾಸ್ಟೆಲ್‌ನ ಅಪ್ರಾಪ್ತರ ಮೇಲೆ ಲೈಗಿಂಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಶ್ರೀಗಳ ವಿರುದ್ಧ 2022 ರ ಆಗಸ್ಟ್‌ನಲ್ಲಿ ಕೇಸ್ ದಾಖಲಾಗಿತ್ತು. 2022 ರ ಸೆಪ್ಟಂಬರ್ 1 ರಂದು ಶ್ರೀಗಳನ್ನ ಅರೆಸ್ಟ್ ಮಾಡಲಾಗಿತ್ತು. 433 ದಿನಗಳಿಂದ ಜೈಲಿನಲ್ಲಿರೋ ಶ್ರೀಗಳಿಗೆ ಹೈಕೋರ್ಟ್ ಇವತ್ತು ಜಾಮೀನು ಮಂಜೂರು ಮಾಡಿದೆ. ಶ್ರೀಗಳ ವಿರುದ್ಧ ಎರಡು ಕೇಸ್ ದಾಖಲಾಗಿದ್ದು, ಮೊದಲ ಕೇಸ್‌ನಲ್ಲಿ ಮಾತ್ರ ಬೇಲ್ ಸಿಕ್ಕಿದೆ . ಹೀಗಾಗಿ ಬೇಲ್ ಸಿಕ್ರೂ ಬಿಡುಗಡೆಯ ಭಾಗ್ಯ ಇಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ