ಚಿತ್ರದುರ್ಗದಲ್ಲಿ ಚಡ್ಡಿ ಗ್ಯಾಂಗ್ ಹಾವಳಿಗೆ ಜನರು ತಲ್ಲಣ: ಬಂಧಿಸುವಲ್ಲಿ ಖಾಕಿ ವಿಫಲ?

ಇತ್ತೀಚೆಗೆ ಮುಧೋಳದಲ್ಲಿ ಮನೆ ಕಳ್ಳತನಕ್ಕೆ ಬಂದಿದ್ದ ಚಡ್ಡಿ ಗ್ಯಾಂಗ್​​​​ನನ್ನು ಓರ್ವ ಯುವತಿ ಅಮೆರಿಕದಲ್ಲಿ ಕುಳಿತು ತಪ್ಪಿಸಿದ್ದರು. ಇದೀಗ ಈ ಚಡ್ಡಿ ಗ್ಯಾಂಗ್​​ ಚಿತ್ರದುರ್ಗ ಜಿಲ್ಲೆಗೆ ಎಂಟ್ರಿಕೊಟ್ಟಿದೆ. ಮಾರಕಾಸ್ತ್ರ ಹಿಡಿದು ಕಳ್ಳತನಕ್ಕೆ ದರೋಡೆಕೋರರ ಯತ್ನಿಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ ಆಗಿವೆ. ಈವರೆಗೆ ಪೊಲೀಸರು ಕ್ರಮಕೈಗೊಳ್ಳದಿರುವುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.

ಚಿತ್ರದುರ್ಗದಲ್ಲಿ ಚಡ್ಡಿ ಗ್ಯಾಂಗ್ ಹಾವಳಿಗೆ ಜನರು ತಲ್ಲಣ: ಬಂಧಿಸುವಲ್ಲಿ ಖಾಕಿ ವಿಫಲ?
ಸಂಗ್ರಹ ಚಿತ್ರ
Edited By:

Updated on: Oct 12, 2025 | 4:49 PM

ಚಿತ್ರದುರ್ಗ, ಅಕ್ಟೋಬರ್​ 12: ಜಿಲ್ಲೆಯಲ್ಲಿ ಕಳ್ಳರ ಹಾವಳಿ ಮಿತಿ ಮೀರಿದೆ. ಚಿತ್ರದುರ್ಗ (Chitradurga), ಚಳ್ಳಕೆರೆ, ಹಿರಿಯೂರು ತಾಲೂಕಿನಲ್ಲಿ ಚಡ್ಡಿ ಗ್ಯಾಂಗ್ (Chaddi Gang) ಪ್ರತ್ಯಕ್ಷವಾಗಿದೆ. ಚಡ್ಡಿ ಗ್ಯಾಂಗ್ ಕಳ್ಳತನಕ್ಕೆ ಯತ್ನಿಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ ಆಗಿವೆ. ಆದರೆ ಪೊಲೀಸರು ಮಾತ್ರ ಆರೋಪಿಗಳ ಬಂಧಿಸದೇ ಇರುವುದು ಜನರಲ್ಲಿ ಭೀತಿ ಹೆಚ್ಚಿಸಿದೆ.

ಚಡ್ಡಿ ಗ್ಯಾಂಗ್ ಜಾಲ ಭೇದಿಸದ ಪೊಲೀಸ್​​: ಜನರು ಆಕ್ರೋಶ

ಜಿಲ್ಲೆಯ ಚಳ್ಳಕೆರೆ, ಹೊಳಲ್ಕೆರೆ ಮತ್ತು ಹಿರಿಯೂರಿನಲ್ಲಿ ಚಡ್ಡಿ ಗ್ಯಾಂಗ್​ ಆ್ಯಕ್ಟೀವ್​ ಆಗಿದ್ದು, ತನ್ನ ಕೈಚಳಕ ತೋರಿಸುತ್ತಿದೆ. ಮಾರಕಾಸ್ತ್ರ ಹಿಡಿದು ಕಳ್ಳತನಕ್ಕೆ ದರೋಡೆಕೋರರ ಯತ್ನಿಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ ಆಗಿವೆ. ಈಗಾಗಲೇ ಚಡ್ಡಿ ಗ್ಯಾಂಗ್ ಕಳೆದ ಎರಡ್ಮೂರು ತಿಂಗಳಿಂದಲೂ ಆಗಾಗ ಪ್ರತ್ಯಕ್ಷ ಆಗಿದೆ. ಹೀಗಾಗಿ, ಜನರಲ್ಲಿ ಭೀತಿ ಉಂಟಾಗಿದೆ. ಹೀಗಿದ್ದರು ಪೊಲೀಸರು ಪಡೆ ಮಾತ್ರ ಚಡ್ಡಿ ಗ್ಯಾಂಗ್ ಜಾಲ ಭೇದಿಸುವ ಕೆಲಸ ಮಾಡದೇ ಇರುವುದು ಜನರ ಆಕ್ರೋಶಕ್ಕೆ ಕಾರಣ ಆಗಿದೆ.

ಇದನ್ನೂ ಓದಿ: ಮುಧೋಳದಲ್ಲಿ ರಾತ್ರೋರಾತ್ರಿ ಮನೆ ಕಳ್ಳತನಕ್ಕೆ ಬಂದ ಚಡ್ಡಿ ಗ್ಯಾಂಗ್: ಅಮೆರಿಕದಿಂದಲೇ ತಪ್ಪಿಸಿದ ಯುವತಿ!

ಇದನ್ನೂ ಓದಿ
ಚಿನ್ನದ ಅಂಗಡಿ ಕದಿಯಲು ಬಂದ ಗ್ಯಾಂಗನ್ನೇ ಓಡಿಸಿದ ಮಹಿಳೆ!
ಡಿಸಿಸಿ ಬ್ಯಾಂಕ್ ಚುನಾವಣೆ: ಲಾಂಗು, ಮಚ್ಚು ಹಿಡಿದು ಓಡಾಡ್ತಿರುವ ಪುಢಾರಿಗಳು!
ಮುಧೋಳ ಕಳ್ಳತನ ಯತ್ನವನ್ನು ಅಮೆರಿಕದಿಂದಲೇ ತಪ್ಪಿಸಿದ ಯುವತಿ!
ಅಮೆರಿಕದಲ್ಲಿ ಕೂತು ಬಾಗಲಕೋಟೆ ಮನೆ ಕಳ್ಳತನ ತಪ್ಪಿಸಿದ ಶೃತಿ: ಆಗಿದ್ದೇನು?

ಇನ್ನು ಚಡ್ಡಿ ಗ್ಯಾಂಗ್​​ನಿಂದ ಸರಗಳ್ಳತನ ಪ್ರಕರಣಗಳು, ಮನೆಗಳ್ಳತನ, ದರೋಡೆ ಯತ್ನ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಆದರೆ ಮೂರು ತಿಂಗಳಲ್ಲಿ ಅನೇಕ ಸಲ ಚಡ್ಡಿ ಗ್ಯಾಂಗ್ ಪ್ರತ್ಯಕ್ಷ ಆಗಿದ್ದರೂ ಖಾಕಿ ಬಂಧಿಸದೇ ಇರುವುದು ಜನರಲ್ಲಿ ಭೀತಿ ಜೊತೆಗೆ ಅನುಮಾನ ಮೂಡಿಸಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಕೂತು ಬಾಗಲಕೋಟೆ ಮನೆ ಕಳ್ಳತನ ತಪ್ಪಿಸಿದ ಶೃತಿ: ಆಗಿದ್ದೇನು?

ಈ ಬಗ್ಗೆ ಎಸ್​​ಪಿ ರಂಜಿತ್ ಅವರನ್ನು ಕೇಳಿದರೆ, ಈ ಬಗ್ಗೆ ಆಮೇಲೆ ಚರ್ಚಿಸೋಣ ಎಂದು ನುಣುಚಿಕೊಳ್ಳುತ್ತಾರೆ‌. ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಕಳ್ಳರ ಹಾವಳಿ ಹೇಳತೀರದಾಗಿದೆ. ಆದರೆ ಪೊಲೀಸರು ಮಾತ್ರ ದೂರು ದಾಖಲಿಸಿ ಸುಮ್ಮನಾಗುತ್ತಿದ್ದಾರೆ. ಚಡ್ಡಿ ಗ್ಯಾಂಗ್ ಬಂಧಿಸಿ ಜನರ ಭೀತಿ ದೂರು ಮಾಡಬೇಕಾದ ಖಾಕಿ ಸೈಲೆಂಟಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:48 pm, Sun, 12 October 25