ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ರಾಜಾರೋಷವಾಗಿ ಲಾಂಗು, ಮಚ್ಚು ಹಿಡಿದು ಓಡಾಡ್ತಿರುವ ಪುಢಾರಿಗಳು, ವಿಡಿಯೋ ವೈರಲ್
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಕಣ ಕಾವೇರಿದೆ. ಕತ್ತಿ ಮತ್ತು ಜಾರಕಿಹೊಳಿ ಮಧ್ಯೆ ಪೈಪೋಟಿ ಇದ್ದು, ಸದಸ್ಯರನ್ನು ವಿರೋಧಿ ಬಣ ಕಿಡ್ನ್ಯಾಪ್ ಮಾಡದಂತೆ ತಡೆಯಲು ಪುಢಾರಿಗಳು ಲಾಂಗು, ಮಚ್ಚು ಹಿಡಿದು ಓಡಾಡುತ್ತಿದ್ದಾರೆ. ಬೆಲ್ಲದ ಬಾಗೇವಾಡಿಯಲ್ಲಿ ಫುಡಾರಿಗಳು ಲಾಂಗು ಮಚ್ಚು ಹಿಡಿದು ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಬೆಳಗಾವಿ, ಸೆಪ್ಟೆಂಬರ್ 17: ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆ ಕೃಷಿ ಪತ್ತಿನ ಸಹಕಾರಿ ಸಂಘ ಸದಸ್ಯರ ಕಾವಲು ಕಾಯಲು ಪುಢಾರಿಗಳು ರಾಜಾರೋಷವಾಗಿ ಲಾಂಗು, ಮಚ್ಚು ಹಿಡಿದು ಓಡಾಡುತ್ತಿರುವುದು ಕಂಡುಬಂದಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿರುವ ವಿಶ್ವರಾಜ್ ಶುಗರ್ಸ್ ಕಟ್ಟಡದ ಸುತ್ತಮುತ್ತ ಕಾವಲು ಫುಡಾರಿಗಳು ಲಾಂಗು, ಮಚ್ಚು ಹಿಡಿದು ಓಡಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕತ್ತಿ, ಜಾರಕಿಹೊಳಿ ನಡುವೆ ಜಿದ್ದಾಜಿದ್ದಿ ಇದೆ. ಸದಸ್ಯರನ್ನು ವಿರೋಧಿ ಬಣ ಕಿಡ್ನ್ಯಾಪ್ ಮಾಡಬಾರದೆಂದು ಈ ರೀತಿ ಕಾವಲು ಕಾಯುತ್ತಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಲಾಂಗು, ಮಚ್ಚು ಹಿಡಿದು ಓಡಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
