ಗಿರಿಯಮ್ಮನಹಳ್ಳಿಗೆ ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆ ಓಡಿದ ಸುಧಾಕರ್ ಸುಸ್ತೋ ಸುಸ್ತು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುಧಾಕರ್ ಕೈ ಹಿಡಿದು ಓಡಿದ್ದಾರೆ. ಈ ವೇಳೆ ಕಷ್ಟ ಪಟ್ಟು ಓಡಿದ ಸುಧಾಕರ್ 30 ಮೀಟರ್ ಓಡಿ ಸುಸ್ತಾದರು.

ಗಿರಿಯಮ್ಮನಹಳ್ಳಿಗೆ ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆ ಓಡಿದ ಸುಧಾಕರ್ ಸುಸ್ತೋ ಸುಸ್ತು
ರಾಹುಲ್ ಗಾಂಧಿ ಜೊತೆ ಓಡಿದ ಸುಧಾಕರ್ ಸುಸ್ತೋ ಸುಸ್ತು
Follow us
TV9 Web
| Updated By: ಆಯೇಷಾ ಬಾನು

Updated on: Oct 12, 2022 | 12:33 PM

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಭಾರತ್ ಜೋಡೋ ಯಾತ್ರೆ ಮುಂದುವರೆದಿದೆ. ಚಳ್ಳಕೆರೆ ಪಟ್ಟಣದಿಂದ ಭಾರತ್ ಜೋಡೋ ಯಾತ್ರೆ ಶುರುವಾಗಿ ಸದ್ಯ ಗಿರಿಯಮ್ಮನಹಳ್ಳಿ ತಲುಪಿದೆ. ಕಾಂಗ್ರೆಸ್ ನಾಯಕರು ವಿಶ್ರಾಂತಿ ಪಡೆಯಲು ತೆರಳಿದ್ದು ಸಂಜೆ 4ಗಂಟೆಗೆ ಗಿರಿಯಮ್ಮನಹಳ್ಳಿಯಿಂದ ಯಾತ್ರೆ ಪುನರಾಂಭಗೊಳ್ಳಲಿದೆ.

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಎಐಸಿಸಿ ಕಾರ್ಯದರ್ಶಿ ಸುರ್ಜೆವಾಲಾ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಹಿರಿಯೂರು ಮಾಜಿ ಸಚಿವ ಡಿ.ಸುಧಾಕರ್, ಕೆ.ಸಿ.ವೇಣುಗೋಪಾಲ, ಮಾಜಿ ಸಚಿವ ಹೆಚ್.ಆಂಜನೇಯ, ಡಿ.ಸುಧಾಕರ್, ಹೊಸದುರ್ಗ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ, ಮೊಳಕಾಲ್ಮೂರು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಸಾಥ್ ನೀಡಿದರು. ಯಾತ್ರೆಗೆ ಸಾಂಸ್ಕೃತಿಕ ಕಲಾತಂಡಗಳ ಮೆರಗು ಹೆಚ್ಚಿಸಿವೆ. ಮ್ಯಾಸಬೇಡ, ಕಾಡುಗೊಲ್ಲ ಸಮುದಾಯದ ಸಂಸ್ಕೃತಿ ಅನಾವರಣಗೊಂಡಿದೆ. ಬುಡಕಟ್ಟು ಸಮುದಾಯದ ಸಾಂಸ್ಕೃತಿಕ ಕಲಾ ತಂಡಗಳು ಯಾತ್ರೆಯಲ್ಲಿ ಹೆಜ್ಜೆ ಹಾಕಿದವು.

ಬಿಎಸ್​ವೈಗೆ ವಯಸ್ಸಾಗಿದೆ, ಅರಳು ಮರಳಾಗಿದೆ ಅನಿಸುತ್ತಿದೆ

ಸಿದ್ದರಾಮಯ್ಯ ಮೋದಿಯವರ ಪಾದದಧೂಳಿಗೆ ಸಮನಲ್ಲ ಎಂಬ B.S.ಯಡಿಯೂರಪ್ಪ ಹೇಳಿಕೆಗೆ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಬಿಎಸ್ ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಬಿಎಸ್​ವೈಗೆ ವಯಸ್ಸಾಗಿದೆ, ಅರಳು ಮರಳಾಗಿದೆ ಅನಿಸುತ್ತಿದೆ. ಇಷ್ಟು ಕೀಳುಮಟ್ಟದ ಹೇಳಿಕೆ ಕೊಡ್ತಾರೆಂದು ಅಂದ್ಕೊಂಡಿರಲಿಲ್ಲ.

ಯಡಿಯೂರಪ್ಪ ಮಟ್ಟಕ್ಕೆ ಹೋಗಿ ನಾನು ಮಾತಾಡುವುದಿಲ್ಲ. ನೆಹರು ಪಾದಕ್ಕೂ ಮೋದಿ ಸಮನಲ್ಲ ಅಂತ ಹೇಳಲಾಗುತ್ತಾ? BSY ರಾಹುಲ್ ಪಾದಕ್ಕೂ ಸಮ ಅಲ್ಲ ಅಂತ ನಾನು ಹೇಳಲ್ಲ. ಅದು ಕೀಳು ಅಭಿರುಚಿ. ಮುಖ್ಯಮಂತ್ರಿ ಆದವರು ಆ ತರಹ ಎಲ್ಲ ಮಾತನಾಡಬಾರದು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಡಿ.‌ಸುಧಾಕರ್ ಕೈ ಹಿಡಿದು ಓಡಿದ ರಾಹುಲ್

ಭಾರತ್ ಜೋಡೋ ಪಾದಯಾತ್ರೆಯಲ್ಲಿ ಮಾಜಿ ಸಚಿವ ಡಿ.ಸುಧಾಕರ್ ಕೈ ಹಿಡಿದು ರಾಹುಲ್ ಗಾಂಧಿ ಓಡಿದ ಘಟನೆ ನಡೆದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುಧಾಕರ್ ಕೈ ಹಿಡಿದು ಓಡಿದ್ದಾರೆ. ಈ ವೇಳೆ ಕಷ್ಟ ಪಟ್ಟು ಓಡಿದ ಸುಧಾಕರ್ 30 ಮೀಟರ್ ಓಡಿ ಸುಸ್ತಾದರು. ಬಳಿಕ ರಾಹುಲ್ ಸುಧಾಕರ್ ಅವರನ್ನು ಅಪ್ಪಿಕೊಂಡು ಅವರನ್ನು ಪ್ರೋತ್ಸಾಹಿಸಿದರು. ಹಾಗೂ ಚಳ್ಳಕೆರೆ ಪಟ್ಟಣದಲ್ಲಿ ಯಾತ್ರೆ ಮಾರ್ಗದಲ್ಲಿ ಉಚಿತ ಹಣ್ಣುಗಳ ವಿತರಣೆ ಮಾಡಲಾಗಿದೆ. ಚಳ್ಳಕೆರೆ ಕಾಂಗ್ರೆಸ್ ಮುಖಂಡರು ಯಾತ್ರೆಯಲ್ಲಿ ಭಾಗಿಯಾದವರಿಗೆ ಉಚಿತವಾಗಿ ಬಾಳೆಹಣ್ಣು, ಸೇಬು ಹಣ್ಣು ನೀಡಿದ್ದು ಹಣ್ಣು ಪಡೆಯಲು ಜನರು ಮುಗಿಬಿದ್ದರು. ಬಾಳೆಹಣ್ಣು ಗೊನೆಗಳನ್ನು ಕಸಿದುಕೊಂಡು ಓಡಿದರು.

ಸದ್ಯ ಈಗ ಕೋಟೆನಾಡಿನಲ್ಲಿ ಕಾಂಗ್ರೆಸ್​​​ನ ‘ಭಾರತ್ ಜೋಡೋ’ ಯಾತ್ರೆ ಗಿರಿಯಮ್ಮನಹಳ್ಳಿ ತಲುಪಿದ್ದು ರಾಹುಲ್ ಗಾಂಧಿ, ಡಿಕೆಶಿ, ಸಿದ್ದರಾಮಯ್ಯ ವಿಶ್ರಾಂತಿಗೆ ತೆರಳಿದ್ದಾರೆ. ಯಾತ್ರೆ ಗಿರಿಯಮ್ಮನಹಳ್ಳಿ ತಲುಪುತ್ತಿದ್ದಂತೆ ಹಲಿಗೆ ಬಾರಿಸಿ ಅದ್ಧೂರಿಯಾಗಿ ಸ್ವಾಗತಿಸಲಾಗಿದೆ.