ಚಿತ್ರದುರ್ಗ: ಹಣ ದ್ವಿಗುಣಗೊಳಿಸುವ ಆಮಿಷವೊಡ್ಡಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ನಗರಸಭೆ ಸದಸ್ಯ ಚಂದ್ರಶೇಖರ್ ಸೇರಿ ನಾಲ್ವರನ್ನು ಚಿತ್ರದುರ್ಗ ಬಡಾವಣೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ನಗರಸಭೆಯ JDS ಸದಸ್ಯ ಚಂದ್ರಶೇಖರ್, ಪತ್ನಿ ದೇವಿಕಾ, ಬಾಬು, ಅರುಣ್ ಬಂಧಿತ ಆರೋಪಿಗಳು.
ವಾರ್ಡ್ ನಂ.4ರ JDS ನಗರಸಭೆ ಸದಸ್ಯ ಚಂದ್ರಶೇಖರ್, ದೊಡ್ಡಬಳ್ಳಾಪುರದ ನಾಗರಾಜ್ ಎಂಬುವರಿಗೆ ವಂಚನೆ ಮಾಡಿದ್ದಾರೆ. 6 ಲಕ್ಷಕ್ಕೆ 18 ಲಕ್ಷ ನೀಡುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ. 6ಲಕ್ಷ ಅಸಲಿ ಹಣ ಪಡೆದು 18ಲಕ್ಷ ಹಣವಿದೆ ಎಂದು ಬ್ಯಾಗ್ ನೀಡಿ ಮೋಸ ಮಾಡಿದ್ದಾರೆ. ಈ ಸಂಬಂಧ ಡಿಸೆಂಬರ್ 6ರಂದು ಬಡಾವಣೆ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಚಂದ್ರಶೇಖರ್ ಮತ್ತಿತರರ ವಿರುದ್ಧ ಕೇಸ್ ದಾಖಲಾಗಿತ್ತು. ನಗರಸಭೆ ಸದಸ್ಯ ಚಂದ್ರಶೇಖರ್ ಹಲವು ವಂಚನೆ ಕೇಸ್ನಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಖೋಟಾನೋಟು ಚಂದ್ರು ಎಂದೇ ಚಂದ್ರಶೇಖರ್ ಕುಖ್ಯಾತಿ ಗಳಿಸಿದ್ದಾರೆ. ತಲೆ ಮರೆಸಿಕೊಂಡಿದ್ದ ಆರೋಪಿ ಚಂದ್ರಶೇಖರ್, ಪತ್ನಿ ದೇವಿಕಾ, ಬಾಬು, ಅರುಣ್ ನನ್ನು ಚಿತ್ರದುರ್ಗ ಬಡಾವಣೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ: ಕೃಷಿ ಚಟುವಟಿಕೆಗೆ ಮಹೀಂದ್ರಾ ಕೆಯುವಿ100 ಕಾರ್ ಬಳಸಿದ ರೈತ; ವಿಡಿಯೋ ನೋಡಿ