ವಿಜಯಪುರ: ಕೃಷಿ ಚಟುವಟಿಕೆಗೆ ಮಹೀಂದ್ರಾ ಕೆಯುವಿ100 ಕಾರ್ ಬಳಸಿದ ರೈತ; ವಿಡಿಯೋ ನೋಡಿ

ಫಸಲಿನ ರಾಶಿ ಮಾಡಲು‌ ಕಾರ್ ಬಳಕೆ ಮಾಡಿದ್ದನ್ನು‌ ಯೂಟ್ಯೂಬ್‌ನಲ್ಲಿ ನೋಡಿದ್ದ ರೈತ‌ ಮುತ್ತಣ್ಣ, ಅದೇ ರೀತಿ ಅಜವಾನ ರಾಶಿಗೆ ಕಾರ್ ಬಳಕೆ ಮಾಡಿ ಗಮನ ಸೆಳೆದಿದ್ದಾರೆ.

TV9kannada Web Team

| Edited By: preethi shettigar

Dec 22, 2021 | 9:59 AM

ವಿಜಯಪುರ: ಕೂಲಿಕಾರರ ಸಮಸ್ಯೆಯಿಂದ ಅಜವಾನ ರಾಶಿ ಮಾಡಲು ರೈತ ಮಹೀಂದ್ರಾ ಕೆಯುವಿ100 ಕಾರ್ ಬಳಕೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ‌ ಶಿರೂರ ಗ್ರಾಮದಲ್ಲಿ ನಡೆದಿದೆ. ಅಜವಾನ ಫಸಲಿನ ರಾಶಿ ಮಾಡಲು ಕೂಲಿಕಾರರು ಸಿಗದ ಕಾರಣ ರೈತ ಮುತ್ತಣ್ಣ ಪ್ಯಾಟಿಗೌಡರ ಕಾರ್ ಬಳಸಿದ್ದಾರೆ. ಕಾರ್ ಬಳಕೆ ಮಾಡಿದ ಕಾರಣ ಕೂಲಿಕಾರರ ಅಗತ್ಯ ಕಡಿಮೆ ಆಯ್ತು ಎಂದು‌ ರೈತ ಮುತ್ತಣ್ಣ ಪ್ಯಾಟಿಗೌಡರ ಹೇಳಿಕೆ ನೀಡಿದ್ದಾರೆ. ಫಸಲಿನ ರಾಶಿ ಮಾಡಲು‌ ಕಾರ್ ಬಳಕೆ ಮಾಡಿದ್ದನ್ನು‌ ಯೂಟ್ಯೂಬ್‌ನಲ್ಲಿ ನೋಡಿದ್ದ ರೈತ‌ ಮುತ್ತಣ್ಣ, ಅದೇ ರೀತಿ ಅಜವಾನ ರಾಶಿಗೆ ಕಾರ್ ಬಳಕೆ ಮಾಡಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ:
ಮಂಡಿಯ ಹೊರಗೆ 150 ಕೆಜಿ ಬೆಳ್ಳುಳ್ಳಿ ಸುಟ್ಟ ರೈತ; ಸುತ್ತಲೂ ನಿಂತು ದೇಶಭಕ್ತಿ ಸೂಚಕ ಘೋಷಣೆ ಕೂಗಿದ ಬೆಳೆಗಾರರು

ಕೊರೊನಾ ಕಾಲದಲ್ಲಿ ಮಹಿಳೆಯರಿಗೆ ಸ್ವಯಂ ಉದ್ಯೋಗ, ಧಾರವಾಡ ಕೃಷಿ ವಿವಿ ಮಹಿಳೆಯರನ್ನ ಸಶಕ್ತರನ್ನಾಗಿಸಿದ್ದು ಹೇಗೆ?

Follow us on

Click on your DTH Provider to Add TV9 Kannada